• Slide
  Slide
  Slide
  previous arrow
  next arrow
 • ಸಹಕಾರ ಸಂಘಗಳು ರೈತರ ಪ್ರಗತಿಗೆ ಪೂರಕ: ಆರ್.ಎಂ.ಹೆಗಡೆ

  300x250 AD

  ಸಿದ್ದಾಪುರ: ಸಹಕಾರ ಸಂಘಗಳು ರೈತರ ಪ್ರಗತಿಗೆ ಪೂರಕವಾಗಿದ್ದು, ಕೃಷಿ ಹಾಗೂ ಕೃಷಿಯೇತರ ಉತ್ಪಾದನೆಗಳಿಗೆ ಆರ್ಥಿಕ ನೆರವನ್ನು ಕಲ್ಪಿಸಬಲ್ಲ ಸಂಸ್ಥೆಗಳಾಗಿವೆ ಎಂದು ಟಿಎಂಎಸ್ ಅಧ್ಯಕ್ಷ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.
  ಅವರು ಲಂಬಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ 63ನೇ ವಾರ್ಷಿಕ ಮಹಾಸಭೆಯ ಸಂದರ್ಭದಲ್ಲಿ ಸಂಘ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಹಕಾರ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಸದಸ್ಯರ ಪಾತ್ರ ಬಲು ಮುಖ್ಯ. ಕೇವಲ ಆರ್ಥಿಕ ಗಳಿಕೆಗಿಂತ, ಸಾಮಾಜಿಕ ಕೆಲಸ ಕಾರ್ಯದಲ್ಲಿ ನಿರತರಾಗಿರುವುದರಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ. ವೃತ್ತಿಯ ಜತೆ ಸಮಾಜದ ಒಳ್ಳೆ ಕೆಲಸದಲ್ಲಿಯೂ ನಿರತರಾಗಬೇಕು ಎಂದರು.
  ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತಿç ಮಾತನಾಡಿ, ಲಂಬಾಪುರ ಭಾಗದಲ್ಲಿ ಸಾಲಮನ್ನಾ ಆಗಬೇಕಾದ ಅನೇಕ ಸದಸ್ಯರಿದ್ದು, ಅವರ ಬಗ್ಗೆ ಪ್ರಯತ್ನಿಸಲಾಗಿದೆ ಎಂದು ಹೇಳಿ ಅವರೂ ಕೂಡ ಸಂಘ ನೀಡಿದ ಸನ್ಮಾನ ಸ್ವೀಕರಿಸಿ ಕೃತಜ್ಞತೆ ಹೇಳಿದರು.
  ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪೃಥ್ವಿ ಹೆಗಡೆ, ರಾಜೀವ ನಾಯ್ಕ, ಪ್ರತಿಭಾ ನಾಯ್ಕ, ನಾಗೇಂದ್ರ ಹೆಗಡೆ, ಭರತ್ ನಾಯ್ಕ, ಕೆ.ಎ. ಸಂತೋಷ ಅವರುಗಳಿಗೆ ಪುರಸ್ಕರಿಸಲಾಯಿತು.
  ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ಐ.ನಾಯ್ಕ ಕೆಳಗಿನಸಶಿ ವಹಿಸಿದ್ದರು. ಸಂಘವು ಮೂವತ್ತೂö್ಮರು ಲಕ್ಷದ ಐವತ್ತೆöÊದು ಸಾವಿರ ಲಾಭವನ್ನು ಹೊಂದಿದೆ ಎಂದು ಅಧ್ಯಕ್ಷರು ಘೋಷಿಸಿದರು. ಎಂ.ಎನ್. ಹೆಗಡೆ ತಲೆಕೇರಿ ಸ್ವಾಗತಿಸಿದರು. ಬಾಲಚಂದ್ರ ಭಟ್ಟ ಸನ್ಮಾನಪತ್ರ ವಾಚಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು.
  ವೇದಿಕೆಯಲ್ಲಿ ಉಪಾಧ್ಯಕ್ಷ ಜಿ.ಜಿ.ಭಟ್ಟ ದಾಸನಹುಡಿಲು, ನಿರ್ದೇಶಕರುಗಳಾದ ಎಂ.ಎನ್.ಹೆಗಡೆ ತಲೆಕೇರಿ, ಎನ್.ಜಿ.ಹೆಗಡೆ ಗೊದ್ಲಮನೆ, ಮಹೇಂದ್ರ ನಾಯ್ಕ ಅರಶಿನಗೋಡ, ಕೃಷ್ಣ ಲಿಂಗ ನಾಯ್ಕ, ನಾರಾಯಣ ಲಿಂಗ ನಾಯ್ಕ, ಜಿ. ಜಿ. ನಾಯ್ಕ ಕಲಕೈ, ಈರ ಫಕೀರ ಹಸ್ಲರ, ಮಹಾದೇವಿ ತಿಮ್ಮಪ್ಪ ನಾಯ್ಕ, ಸುಭದ್ರಾ ಹೆಗಡೆ ತ್ಯಾಗ್ಲೆಮನೆ, ರಮಾನಂದ ಹೆಗಡೆ ಮಳಗುಳಿ, ಮುಖ್ಯ ಕಾರ್ಯನಿರ್ವಾಹಕ ಬಾಲಚಂದ್ರ ಜಿ.ಭಟ್ಟ ಜಿಗಳೇಮನೆರವರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top