ಹೊನ್ನಾವರ: ತಾಲೂಕು ಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಗುಂಡಬಾಳದ ಆರೋಗ್ಯ ಮಾತಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ವಿವಿಧ ವಿಭಾಗದಲ್ಲಿ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರು ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ, 3000 ಮೀ. ನಡಿಗೆಯಲ್ಲಿ ಕವನ ಜಿ. ನಾಯ್ಕ ಪ್ರಥಮ, ಭಾಗ್ಯಶ್ರೀ ಜಿ. ಆಚಾರಿ ದ್ವಿತೀಯ, ಚಕ್ರ ಎಸೆತದಲ್ಲಿ ರಕ್ಷಿತಾ ನಾಯ್ಕ ತೃತೀಯ, ಖಿಉಖಿ ವಿಭಾಗದಲ್ಲಿ ಲೀಜಲ್ ಸಿದ್ದಿ ಉದ್ದ ಜಿಗಿತದಲ್ಲಿ ಪಥಮ, ಗುಂಡು ಎಸೆತದಲ್ಲಿ ದ್ವಿತೀಯ ಹಾಗೂ ಯಶಸ್ವಿ ನಾಯ್ಕ ಚೆಸ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಸಂಚಾಲಕ ವಂ. ಫಾ.ಥಾಮಸ್ ಫಾರ್ನಾಂಡಿಸ್, ಮುಖ್ಯಾಧ್ಯಾಪಕ ವಿಲ್ಸನ್ ಲುಯೀಸ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಮಾತಾ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ
