• Slide
    Slide
    Slide
    previous arrow
    next arrow
  • ನಾವು ಸನ್ಯಾಸಿಗಳಲ್ಲ, ಅಧಿಕಾರಕ್ಕೆ ಬರಬೇಕೆನ್ನುವ ಆಕಾಂಕ್ಷೆ ಸಹಜ: ವಿ.ಎನ್.ನಾಯ್ಕ

    300x250 AD

    ಸಿದ್ದಾಪುರ: ನಾವು ರಾಜಕೀಯವಾಗಿ ಸಕ್ರಿಯವಾಗಿದ್ದೇವೆ, ಸನ್ಯಾಸಿಗಳಲ್ಲ. ನಮಗೂ ವ್ಯವಸ್ಥೆಯಲ್ಲಿ ವಿವಿಧ ಅಧಿಕಾರಕ್ಕೆ ಬರಬೇಕು ಎನ್ನುವ ಆಕಾಂಕ್ಷೆಗಳಿರುವುದು ಸಹಜ. ನನ್ನ ಹಿರಿತನ ಮತ್ತು ಪಕ್ಷದಲ್ಲಿ ಸೇವೆಯಿಂದಾಗಿ ನಾನು ಮುಂದಿನ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈ ಹಿಂದಿನ ಮೂರು ವಿಧಾನಸಭಾ ಚುನಾವಣೆಗಳಲ್ಲಿಯೂ ನಾನು ಪ್ರಬಲ ಆಕಾಂಕ್ಷಿಯಾಗಿದ್ದೆ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ ಹೇಳಿದರು.
    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದು, ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕಾಗಿದೆ. ಈ ಹಿಂದಿನ ಮೂರು ಚುನಾವಣೆಯ ಸಂದರ್ಭದಲ್ಲಿಯೂ ನಾನು ಅಭ್ಯರ್ಥಿಯಾಗುವುದಕ್ಕೆ ಆಕಾಂಕ್ಷಿಯಾಗಿದ್ದೆ. ಪಕ್ಷಕ್ಕೆ ಆ ಕುರಿತು ಅರ್ಜಿಯನ್ನು ಆ ಸಮಯದಲ್ಲಿ ಸಲ್ಲಿಕೆ ಮಾಡಿದ್ದೆ. ಮುಂದೆ ಚುನಾವಣೆಯ ಸಂದರ್ಭದಲ್ಲಿ ಆ ಕುರಿತು ಪಕ್ಷದ ನಾಯಕರುಗಳು ಅಭಿಪ್ರಾಯವನ್ನು ಪಡೆದು ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ. ನಮ್ಮ ನಾಯಕರುಗಳಾದ ಮಾರ್ಗರೇಟ್ ಆಳ್ವಾ, ಬಿ.ಕೆ.ಹರಿಪ್ರಸಾದ, ಕಾಗೋಡು ತಿಮ್ಮಪ್ಪನವರು, ದಿನೇಶ ಗುಂಡೂರಾವ್ ಎಲ್ಲರೊಂದಿಗೂ ಒಡನಾಟವಿದೆ. ಅವರೆಲ್ಲರಿಗೂ ಪಕ್ಷದಲ್ಲಿ ನಮ್ಮ ಸೇವೆಯ ಕುರಿತಾಗಿ ಹೇಳಬೇಕಾಗಿಲ್ಲ ಎಂದರು.
    ನಾನು ಕಳೆದ ಹಲವು ವರ್ಷಗಳಿಂದ ಪಕ್ಷದಲ್ಲಿ ಅತ್ಯಂತ ಸಕ್ರೀಯಾಗಿದ್ದು ನಮ್ಮಿಂದ ಆಗಿರುವ ಕೆಲಸ ಕಾರ್ಯಗಳನ್ನು ಸಾರ್ವಜನಿಕರಿಗೆ ಮಾಡಿಕೊಂಡು ಬಂದಿದ್ದೇವೆ. ಹಾಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಸಂತ ನಾಯ್ಕ ಅವರ ಜೊತೆಗೂಡಿ ಪಕ್ಷದ ಕೆಲಸವನ್ನು ಮಾಡುತ್ತಿದ್ದೇವೆ. ಈ ಹಿಂದೆ ಸಾವಿತ್ರಿ ನಾಯ್ಕ, ಹನುಮಂತ ನಾಯ್ಕ, ಲಲಿತಾ ನಾಯ್ಕ ಇವರುಗಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಮಯದಲ್ಲಿಯೂ ಕೆಲಸ ಮಾಡಿದ್ದೇವೆ.ನಾನು ಅಧ್ಯಕ್ಷನಾಗದಿದ್ದರೂ ಕೆಲಸ ಮಾಡಿದ್ದೇನೆ. ಈ ಹಿಂದೆ ರವೀಂದ್ರ ನಾಯ್ಕ ಅಭ್ಯರ್ಥಿ ಆಗುವ ಸಮಯದಲ್ಲಿ, ದೀಪಕ ಹೊನ್ನಾವರ ಅಭ್ಯರ್ಥಿಯಾದ ಸಂದರ್ಭದಲ್ಲಿಯೂ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಕಳೆದ ಚುನಾವಣೆಯಲ್ಲಿ ಟಿಕೆಟಿಗೆ ಅರ್ಜಿ ಸಲ್ಲಿಸಿದ್ದೆ, ಆದರೆ ಭೀಮಣ್ಣ ನಾಯ್ಕ ಅವರನ್ನು ಪಕ್ಷ ಅಭ್ಯರ್ಥಿ ಮಾಡಿತ್ತು ಎಂದರು.
    ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿ ನಿಕಟಪೂರ್ವ ಸದಸ್ಯರಾದ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಾಸೀರ್ ವಲ್ಲಿ ಖಾನ್, ಡಿಸಿಸಿ ಕಾರ್ಯದರ್ಶಿ ಸಾವೇರ್ ಡಿಸೀಲ್ವಾ, ಸೇವಾದಳದ ತಾಲೂಕು ಅಧ್ಯಕ್ಷ ಗಾಂಧೀಜಿ ಆರ್.ನಾಯ್ಕ, ಮನ್ಮನೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಗರಾಜ ಕುಂಬ್ಳೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಮ್.ಟಿ.ಗೌಡ ಕಿಲವಳ್ಳಿ, ಕಾಂಗ್ರೆಸ್ ಹಿಂದುಳಿದ ವರ್ಗದ ತಾಲೂಕು ಅಧ್ಯಕ್ಷ ಗಂಗಾಧರ ಮಡಿವಾಳ ಕಡಕೇರಿ, ತಾಲೂಕಾ ಇಂಟೆಕ್ ಅಧ್ಯಕ್ಷ ರಾಮಕೃಷ್ಣ ನಾಯ್ಕ ಶಿರೂರು, ತಾಲೂಕಾ ಕಾಂಗ್ರೆಸ್ ಸದಸ್ಯರಾದ ಲಂಭೋದರ ಹೆಗಡೆ ಹಾಗೂ ಮಂಜುನಾಥ ನಾಯ್ಕ ಬೇಗಾರ್, ಕೃಷ್ಣ ಜಿಡ್ಡಿ ಮೊದಲಾದವರಿದ್ದರು

    ಕೋಟ್…
    ರಾಜಕೀಯ ಜೀವನದಲ್ಲಿ ಸಹನೆ ಬಹಳ ಮುಖ್ಯವಾಗುತ್ತದೆ. ನಮಗೆ ಆ ಅವಕಾಶ ಬರುವ ವರೆಗೆ ತಾಳ್ಮೆಯಿಂದ ಇರಬೇಕಾಗುತ್ತದೆ. ಈ ಹಿಂದೆ ಅನೇಕ ಸಂದರ್ಭದಲ್ಲಿ ಅವಕಾಶಗಳು ಕೊನೆಯ ಹಂತದಲ್ಲಿ ಕೈತಪ್ಪಿ ಹೋಗಿದೆ. ಇನ್ನೂ ಕೆಲವು ಸಂದರ್ಭದಲ್ಲಿ ಅನಾಯಾಸವಾಗಿ ವಕಾಶ, ಅಧಿಕಾರ ಸಿಕ್ಕಿದೆ. ಎಲ್ಲದಕ್ಕೂ ಒಂದು ವ್ಯವಸ್ಥೆ ಇರುತ್ತದೆ. ಅದರಂತೆ ಪಕ್ಷದ ನಾಯಕರುಗಳು ಎಲ್ಲರ ಅಭಿಪ್ರಾಯವನ್ನು ಪಡೆದು ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುತ್ತಾರೆ.
    • ವಿ.ಎನ್.ನಾಯ್ಕ ಬೇಡ್ಕಣಿ, ಕಾಂಗ್ರೆಸ್ ಮುಖಂಡ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top