• Slide
    Slide
    Slide
    previous arrow
    next arrow
  • ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಆತ್ಮಹತ್ಯೆ

    300x250 AD

    ದಾಂಡೇಲಿ: ನಗರದ ನಿರ್ಮಲನಗರದಲ್ಲಿರುವ ತನ್ನ ಮನೆಯಲ್ಲಿ ಅಂಬೇವಾಡಿಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ.
    ನಿರ್ಮಲನಗರದ ನಿವಾಸಿ ಹಾಗೂ ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಬಾರೆ ಇಮಾಮ್ ಚಪ್ಪರಬಂದ್ ಎಂಬುವವರ ಪುತ್ರನಾದ 16 ವರ್ಷದ ಅಬ್ದುಲ್ ರೆಹಮಾನ್ ಬಾರೆ ಇಮಾಮ್ ಚಪ್ಪರಬಂದ್ ಎಂಬಾತನೇ ನೇಣಿಗೆ ಶರಣಾದ ಬಾಲಕ ಅಂಬೇವಾಡಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.
    ಈತ ತಾಯಿಯನ್ನು ನೋಡಬೇಕೆಂದು ಬಯಸಿದ್ದರಿಂದ ಬುಧವಾರ ತಂದೆಯವರ ಜೊತೆ ನಿರ್ಮಲನಗರದ ತನ್ನ ಮನೆಗೆ ಬಂದಿದ್ದನು ಎನ್ನಲಾಗಿದೆ. ಆದರೆ ಸಂಜೆ ಮನೆಯಲ್ಲಿ ಯಾರು ಇಲ್ಲದಿದ್ದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾನೆ. ಮೃತ ಬಾಲಕನ ತಂದೆ ಬಾರೆ ಇಮಾಮ್ ಅವರ ಪ್ರಕಾರ, ಮೊರಾರ್ಜಿ ವಸತಿ ಶಾಲೆಯಲ್ಲಿ ರ‍್ಯಾಗಿಂಗ್ ನಡೆಯುತ್ತಿದೆ. ಕಳೆದ ಒಂದುವರೆ ತಿಂಗಳ ಹಿಂದೆ ಅಲ್ಲಿ ಮಗನ ಕೈ ಮುರಿದಿತ್ತು. ಚಿಕಿತ್ಸೆ ನೀಡಿ ಕಳುಹಿಸಿದ್ದೆವು. ಆ ಸಂದರ್ಭದಲ್ಲಿ ಆಗಿರುವ ಘಟನೆಗಳನ್ನು ಮತ್ತು ರ‍್ಯಾಗಿಂಗ್ ಬಗ್ಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದೇನೆ. ನನ್ನ ಮಗನ ಆತ್ಮಹತ್ಯೆಗ ಬೇರೆ ಯಾವುದೇ ಕಾರಣವಿಲ್ಲ ಎಂದಿದ್ದಾರೆ.
    ಸ್ಥಳಕ್ಕೆ ಪಿಎಸೈ ಕಿರಣ್ ಪಾಟೀಲ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top