ಅಂಕೋಲಾ: 11 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆತಪ್ಪಿಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ತರುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇರಳ ಕಾಸರಗೋಡು ಮೂಲದ ವಿನೋದಕುಮಾರ್ ಮತ್ತು ಅಬ್ದುಲ್ ಮಹಮ್ಮದ್ ಕುಂಯ್ಯಿ ಎಂಬಾತರು 2011ನೇ ಸಾಲಿನಲ್ಲಿ ಅಬಕಾರಿ ಪ್ರಕರಣದ ಆರೋಪಿಗಳಾಗಿದ್ದರು. ಅಂದಿನಿಂದ ನ್ಯಾಯಾಲಯಕ್ಕೆ ಹಾಜಾರಾಗದೆ ತಲೆತಪ್ಪಿಸಿಕೊಂಡಿದ್ದರು ಎನ್ನಲಾಗಿದ್ದು, ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಕಾರ್ಯಾಚರಣೆ ಸಿಪಿಐ ಸಂತೋಶ್ ಶೆಟ್ಟಿ ನೇತೃತ್ವದಲ್ಲಿ ಪಿಎಸೈ ಪ್ರವೀಣ್‌ಕುಮಾರ್, ಸಿಬ್ಬಂದಿ ಮಂಜುನಾಥ್ ಲಕ್ಮಾಪುರ, ಶ್ರೀಕಾಂತ ಕಟಬರ ಉಪಸ್ಥಿತರಿದ್ದರು. ಇವರ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
