• Slide
  Slide
  Slide
  previous arrow
  next arrow
 • ಶಿವಾಜಿ ಗರ್ಲ್ಸ್ ಹೈಸ್ಕೂಲ್ ಇಂಟರ‍್ಯಾಕ್ಟ್ ಸಂಸ್ಥೆ ಪದಗ್ರಹಣ

  300x250 AD

  ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ವತಿಯಿಂದ ಶಿವಾಜಿ ಗರ್ಲ್ಸ್ ಹೈಸ್ಕೂಲ್ ಇಂಟರ‍್ಯಾಕ್ಟ್ ಸಂಸ್ಥೆ ಪದಗ್ರಹಣ ಸಮಾರಂಭ ನಡೆಯಿತು.

  ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಪ್ರಾರಂಭದದಲ್ಲಿ ಮುಖ್ಯಾಧ್ಯಾಪಕಿ ಶ್ಯಾಮಲಾ ನಾಯಕ ಎಲ್ಲರನ್ನು ಸ್ವಾಗತಿಸುತ್ತಾ, 2016ರಿಂದ ತಮ್ಮ ಹೈಸ್ಕೂಲ್‌ನಲ್ಲಿ ಇಂಟರ‍್ಯಾಕ್ಟ್ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿ ಸಂತಸವನ್ನು ವ್ಯಕ್ತಪಡಿಸಿದರು.ಇಂಟರ‍್ಯಾಕ್ಟ್ ಚೇರ್‌ಮನ್ ಅರ್ಚನಾ ಶೆಟ್ಟಿ ಇಂಟರ‍್ಯಾಕ್ಟ್ ಕುರಿತಾದ ಮಾಹಿತಿವನ್ನು ವಿವರಿಸಿದರು.

  ಪದಗ್ರಹಣಾಧಿಕಾರಿಯಾಗಿ ಆಗಮಿಸಿದ್ದ ಕೃಷ್ಣಾನಂದ ಬಾಂದೇಕರ ನೂತನ ಇಂಟರ‍್ಯಾಕ್ಟ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಇಂಟರ‍್ಯಾಕ್ಟ್ ವಿಧಿಯನ್ನು ಭೋಧಿಸಿ, ಸಂಸ್ಥೆಯಲ್ಲಿ ಮಾಡಬೇಕಾದ ಕೆಲವು ಮುಖ್ಯ ಕಾರ್ಯಕ್ರಮಗಳನ್ನು ವಿವರಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು ಮಾತನಾಡಿ, ಕ್ಲಬ್‌ನ ಧ್ಯೇಯೋದ್ದೇಶಗಳನ್ನು ವಿವರಿಸಿದರು. ರೋಟರಿ ಕಾರ್ಯದರ್ಶಿ ಗುರುದತ್ತ ಬಂಟ ಮಾತನಾಡಿ,ಇಂಟರ‍್ಯಾಕ್ಟ್ ಕ್ಲಬ್ ನಡೆಸುವ ಕುರಿತು ಮಾಹಿತಿ ನೀಡಿ, ಪ್ರತಿ ತಿಂಗಳು ಸಭೆ ನಡೆಸಲು ಸೂಚಿಸಿದರು.

  300x250 AD

  ಇಂಟರ‍್ಯಾಕ್ಟ್ ಕ್ಲಬ್‌ಗೆ ನೂತನ ಅಧ್ಯಕ್ಷೆಯಾಗಿ ಸುಪ್ರಿಯಾ ವಡ್ಡರ, ಉಪಾಧ್ಯಕ್ಷರಾಗಿ ಸುಪ್ರಿಯಾ ನಾಯ್ಕ, ಕಾರ್ಯದರ್ಶಿಯಾಗಿ ಸ್ವಾತಿ ನಾಯ್ಕ, ಖಜಾಂಚಿ ಅಮುಲ್ಯಾ ಬಾನಾವಳಿ ಅವರನ್ನು ನೇಮಿಸಲಾಯಿತು. ಡಾ.ಸಮಿರಕುಮಾರ ನಾಯಕ, ಪದಗ್ರಹಣಾಧಿಕಾರಿ ಕೃಷ್ಣಾನಂದ ಬಾಂದೇಕರವರನ್ನು ಸಭೆಗೆ ಪರಿಚಯಿಸಿದರು. ರೋಟರಿ ಅಧ್ಯಕ್ಷರು ವಿದ್ಯಾರ್ಥಿನಿಯರಿಗಾಗಿ ಚುಟುಕು ಪ್ರಶ್ನೆಗಳನು ಕೇಳಿ, ವಿದ್ಯಾರ್ಥಿನಿಯರಿಂದ ಸೊಗಸಾದ ಉತ್ತರಗಳನ್ನು ಪಡೆದು ಸಿಹಿ ಹಂಚಿದರು. ಇದೇ ಸಂದರ್ಭದಲ್ಲಿ ಕೆಲವು ಧಾನ್ಯ ಮತ್ತು ಬೀಜಗಳಿಂದ ರಂಗೋಲಿ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 36 ವಿದ್ಯಾರ್ಥಿನಿಯರು 18 ತಂಡಗಳಾಗಿ ಭಾಗವಹಿಸಿದ್ದರು. ಅವರಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ನಿಡಲಾಯಿತು.

  ನಿರ್ಣಾಯಕರಾಗಿ ನ್ಯೂ ಹೈಸ್ಕೂಲ್ ಶಿಕ್ಷಕ ಆನಂದ ಘಠಕಾಂಬ್ಳೆ ಉಪಸ್ಥಿತರಿದ್ದರು. ಬಹುಮಾನಗಳನ್ನು ಲಿಟ್ರಸಿ ಚೇರಮನ್ ಅನಮೋಲ ರೇವಣಕರ ಪ್ರಾಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಕೆ.ಡಿ.ಪೆಡ್ನೇಕರ, ಗುರು ಹೆಗಡೆ, ಪಿ.ಎಸ್.ನಾಯ್ಕ, ನಾಗರಾಜ ಜೋಶಿ, ಯೋಗೇಶ ಭಂಡಾರಕರ, ಶೈಲೇಶ ಹಳದೀಪುರಕರ, ವಿನೋದ ಕೊಠಾರಕರ, ಅಮರನಾಥ ಶೆಟ್ಟಿ, ಶೈಲೇಶ ಹಳದೀಪುರ, ರಾಜಶ್ರೀ ಪ್ರಭು, ಅಪೇಕ್ಷಾ ರೇವಣಕರ ಉಪಸ್ಥಿತರಿದ್ದರು. ಕೊನೆಯದಾಗಿ ಶಿವಾಜಿ ಗರ್ಲ್ಸ್ ಹೈಸ್ಕೂಲ್ ಶಿಕ್ಷಕಿ ಜ್ಯೋತಿ ವಿ.ನಾಯ್ಕ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಡಾ,ಸಮೀರಕುಮಾರ ನಾಯಕ ನಡೆಸಿಕೊಟ್ಟರು.

  Share This
  300x250 AD
  300x250 AD
  300x250 AD
  Leaderboard Ad
  Back to top