ಕಾರವಾರ: ಇಪಿಎಸ್ 1995ರ ಅಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಮುಂದುವರೆಸಲು ಡಿಜಿಟಲ್ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಜೀವನ ಪ್ರಮಾಣಪತ್ರವನ್ನು ಹತ್ತಿರದ ಪಿಂಚಣಿ ವಿತರಣಾ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ, ಅಂಚೆ ಕಛೇರಿ ಮತ್ತು ಇಪಿಎಫ್‌ಓ ಕಛೇರಿಗಳಲ್ಲಿ ಸಲ್ಲಿಸಬಹುದು.
ಜೀವನ್ ಪ್ರಮಾಣ ಪತ್ರವನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ AadharFaceRD ಬಳಸಿಕೊಂಡು ಫೇಸ್ ರೆಕಗ್ನಿಷನ್ ತಂತ್ರಜ್ಞಾನದ ಮೂಲಕವೂ ಸಲ್ಲಿಸಬಹುದು. ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಿದ ನಂತರವೂ ಪಿಂಚಣಿ ಫ್ರಾರಂಭವಾಗದೇ ಇದ್ದಲ್ಲಿ ಮುಂದಿನ ಸೂಕ್ತ ಪರಶೀಲನೆಗಾಗಿ ಈ ಕಛೇರಿ ಇ-ಮೇಲ್ ro.hubli@epfindia.gov.in ಅಥವಾ ವಾಟ್ಸಪ್ ಸಂಖ್ಯೆ 8762525754 ಗೆ ಸಂಪರ್ಕಿಸಬಹುದು ಎಂದು ಹುಬ್ಬಳ್ಳಿ ಕ್ಷೇತ್ರೀಯ ಕಾರ್ಯಾಲಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ರಾಮಕೇಶ ಮೀನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.