ಕಾರವಾರ: ತಾಲೂಕು ಪಂಚಾಯತ ಅಧೀನದ ಎಲ್ಲ ಗ್ರಾಮ ಪಂಚಾಯತಗಳಲ್ಲಿ 2022-23ನೇ ಸಾಲಿನ ಮೊದಲನೇ ಹಂತದ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ನಡೆಸಬೇಕಾಗಿರುವುದರಿಂದ ಗ್ರಾಮ ಸಭೆಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದ್ದು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು/ ಕಾರ್ಯದರ್ಶಿಗಳು ವೇಳಪಟ್ಟಿಗೆ ಅನುಗುಣವಾಗಿ ವಿಡೀಯೋ ಚಿತ್ರೀಕರಣದೊಂದಿಗೆ ಗ್ರಾಮ ಸಭೆ ನಡೆಸಬೇಕು.
ಸದರಿ ವಿಡೀಯೋ ಸಿಡಿಗಳನ್ನು ಪಂಚಾಯತದಲ್ಲಿ ಕಾಯ್ದಿರಿಸಿ ಗ್ರಾಮಸಭೆ ಮುಗಿದ 10 ದಿನದೊಳಗಾಗಿ ಠರಾವು ಪ್ರತಿಯನ್ನು ಗಣಕೀಕರಣಗೊಳಿಸಿ ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಿ ಒಂದು ಪ್ರತಿಯನ್ನು ಕಚೇರಿಗೆ ಒಪ್ಪಿಸುವುದು ಹಾಗೂ ಆದೇಶದ ಪ್ರಕಾರ ವಾರ್ಡ್ಸಭೆ ನಡೆಸಿದ ನಂತರವೇ ಗ್ರಾಮ ಸಭೆ ಜರುಗಿಸಬೇಕು ಎಂದು ಕಾರವಾರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಮೊದಲ ಹಂತದ ಕಾರವಾರ ತಾಲೂಕಿನ ಗ್ರಾಮ ಪಂಚಾಯತಗಳ ಗ್ರಾಮಸಭೆ: ಅಮದಳ್ಳಿಯಲ್ಲಿ ಸೆ. 23 ರಂದು ಬೆಳಿಗ್ಗೆ 11ಕ್ಕೆ ಕಾರವಾರ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕರು, ಹಣಕೋಣದಲ್ಲಿ ಸೆ. 28 ರಂದು ಬೆಳಿಗ್ಗೆ 11 ಕ್ಕೆ ಗೋಪಶಿಟ್ಟಾ ವಲಯದ ಅರಣ್ಯಾಧಿಕಾರಿಗಳು, ಘಾಡಸಾಯಿಯಲ್ಲಿ ಸೆ. 30 ರಂದು ಬೆಳಿಗ್ಗೆ 11ಕ್ಕೆ ಕಾರವಾರ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಚಿತ್ತಾಕುಲಾದಲ್ಲಿ ಅ.7 ರಂದು ಬೆಳಿಗ್ಗೆ 11ಕ್ಕೆ ಕಾರವಾರ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮುಡಗೇರಿಯಲ್ಲಿ ಮದ್ಯಾಹ್ನ 3 ಕ್ಕೆ ಕಾರವಾರ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಮಾಜಾಳಿಯಲ್ಲಿ ಅ. 10 ರಂದು ಬೆಳಿಗ್ಗೆ 11ಕ್ಕೆ ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಚೆಂಡಿಯಾದಲ್ಲಿ ಅ. 11ರಂದು ಬೆಳಿಗ್ಗೆ 11ಕ್ಕೆ ಕಾರವಾರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ತೋಡೂರುನಲ್ಲಿ ಮಧ್ಯಾಹ್ನ 3 ಕ್ಕೆ ಕಾರವಾರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಗೋಟೆಗಾಳಿಯಲ್ಲಿ ಅ. 12 ರಂದು ಬೆಳಿಗ್ಗೆ 11ಕ್ಕೆ ಕಾರವಾರ ಯೋಜನಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಶಿರವಾಡದಲ್ಲಿ ಮದ್ಯಾಹ್ನ 3ಕ್ಕೆ ಕಾರವಾರ ತಾಲೂಕು ಪಂಚಾಯತ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು, ಕದ್ರಾದಲ್ಲಿ ಅ. 14 ರಂದು ಬೆಳಿಗ್ಗೆ 11ಕ್ಕೆ ಕದ್ರಾ ವಲಯ ಅರಣ್ಯಾಧಿಕಾರಿಗಳು, ದೇವಳಮಕ್ಕಿಯಲ್ಲಿ ಅ. 15 ರಂದು ಬೆಳಿಗ್ಗೆ 11ಕ್ಕೆ ಕಾರವಾರ ಸಹಾಯಕ ಕೃಷಿ ನಿರ್ದೇಶಕರು, ಕಡವಾಡದಲ್ಲಿ ಅ.17 ರಂದು ಬೆಳಿಗ್ಗೆ 11ಕ್ಕೆ ಕಾರವಾರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಅಸ್ನೋಟಿಯಲ್ಲಿ ಅ. 18ರಂದು ಬೆಳಿಗ್ಗೆ ಕಾರವಾರ ಉಪವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕಿನ್ನರದಲ್ಲಿ ಅ. 19ರಂದು ಬೆಳಿಗ್ಗೆ 11ಕ್ಕೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ವೈಲವಾಡಾದಲ್ಲಿ ಅ. 20 ರಂದು ಬೆಳಿಗ್ಗೆ 11ಕ್ಕೆ ಕಾರವಾರ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಮಲ್ಲಾಪುರದಲ್ಲಿ ಅ. 21ರಂದು ಬೆಳಿಗ್ಗೆ 11ಕ್ಕೆ ಕಾರವಾರ ಪಂಚಾಯತ ರಾಜ್ ಇಂಜಿನೀಯರಿAಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕೇರವಡಿಯಲ್ಲಿ ಅ. 31ರಂದು ಬೆಳಿಗ್ಗೆ 11ಕ್ಕೆ ಕಾರವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಗ್ರಾಮ ಪಂಚಾಯತ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದ್ದು, ಅಧಿಕಾರಿಗಳು ಸದರಿ ಗ್ರಾಮಸಭೆಯಲ್ಲಿ ಗೈರು ಹಾಜರಾಗದೇ ಅಥವಾ ತಮ್ಮ ಪ್ರತಿನಿಧಿಗಳನ್ನು ಕಳುಹಿಸದೇ ಖುದ್ದಾಗಿ ಹಾಜರಾಗಿ ಯಾವುದೇ ಕಾರಣಕ್ಕೂ ಗ್ರಾಮಸಭೆಯನ್ನು ಮುಂದೂಡದೇ ಗ್ರಾಮ ಸಭೆಯನ್ನು ಜರುಗಿಸಿ ವರದಿ ಸಲ್ಲಿಸಬೇಕೆಂದು ಕಾರವಾರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸೂಚಿಸಿದ್ದಾರೆ.