Slide
Slide
Slide
previous arrow
next arrow

ಅಗತ್ಯತೆ ಪೂರೈಸಿ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಸಂಸ್ಥೆ ಶ್ರಮಿಸಬೇಕು: ಜಿ.ಎಮ್ ಹೆಗಡೆ ಹುಳಗೋಳ

300x250 AD

ಶಿರಸಿ: ಸಹಕಾರಿ ಕ್ಷೇತ್ರದ ಮೂಲ ಆಶೋತ್ತರಗಳಿಗೆ ಚ್ಯುತಿಯಾಗದಂತೆ ಹಾಗೂ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಕಾರ್ಯವನ್ನು ಸಂಘ-ಸಂಸ್ಥೆಗಳು ಮಾಡಬೇಕೆಂದು ಹಿರಿಯ ಸಹಕಾರಿ ಜಿ.ಎಮ್ ಹೆಗಡೆ, ಹುಳಗೋಳ ಹೇಳಿದರು.
ಶಿರಸಿಯ ಟಿ.ಎಮ್.ಎಸ್ ಸಭಾಂಗಣದಲ್ಲಿ ಈಚೆಗೆ ನಡೆದ ದಿ ಚೇತನಾ ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಕೋ-ಆಪ್ ಸೊಸೈಟಿಯ 34ನೇ ವಾರ್ಷಿಕ ಸರ್ವಸಾಧಾರಣಾ ಸಭೆಯನ್ನುದ್ಧೇಶಿಸಿ ಮಾತನಾಡಿ, ಜನಸಾಮಾನ್ಯರ ಆಶೋತ್ತರಗಳು, ಅಗತ್ಯತೆಗಳನ್ನು ಪೂರೈಸುವ ಕಾರ್ಯವನ್ನು ಸಹಕಾರಿ ಸಂಘ, ಸಂಸ್ಥೆಗಳು ಮಾಡುತ್ತ ಬಂದಿವೆ. ಅದರಂತೆಯೇ ಸದಸ್ಯರೂ ಕೂಡ ಸಹಕಾರ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಬೇಕಾದ ಅನಿವಾರ್ಯತೆಯೂ ಇದೆ ಎಂದರು.
ಸಹಕಾರಿ ರಂಗದ ಆಶೋತ್ತರಗಳನ್ನು ಹೊಂದಿ 1988ರಲ್ಲಿ ಸ್ಥಾಪನೆಗೊಂಡ ಚೇತನಾ ಸಹಕಾರಿ ಮುದ್ರಣಾಲಯ ಆರಂಭದಲ್ಲಿ ತೀರ ಕಷ್ಟದ ದಿನಗಳನ್ನು ಕಳೆದಿದೆ. ಲಕ್ಷಕ್ಕೂ ಅಧಿಕ ಮೊತ್ತದ ಸಾಲವನ್ನು ಹೊಂದಿದ್ದಲ್ಲದೇ, ನಷ್ಟದ ಸುಳಿಯಲ್ಲಿ ಸಂಸ್ಥೆ ಸಿಲುಕಿತ್ತು. ಇದೀಗ ಸಂಸ್ಥೆಗೆ ಸ್ವಂತ ಕಟ್ಟಡ ಹೊಂದುವ ಪ್ರಯತ್ನದಲ್ಲಿದ್ದು ಸಹಕಾರಿ ಅಭಿಮಾನಿಗಳು ಸಹಕರಿಸಬೇಕು ಎಂದರು.
ಚೇತನಾ ಸಹಕಾರಿ ಮುದ್ರಣಾಲಯವು ಪ್ರಿಂಟಿಂಗ್ ಚಟುವಟಿಕೆಗಳನ್ನು ನಡೆಸುವುದರ ಮೂಲಕ ವಿಶೇಷವಾದ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ಜಿಲ್ಲೆಯ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು, ಸೌಹಾರ್ದ ಬ್ಯಾಂಕುಗಳು, ತಾಲೂಕಾ ಹುಟ್ಟುವಳಿಗಳ ಮಾರಾಟ ಸಂಘಗಳು, ಬ್ಯಾಂಕ್‌ಗಳು ಈ ಸಂಸ್ಥೆಗೆ ಪೂರಕ ಆಹಾರವಾಗಿದೆ. ಸಂಘ-ಸಂಸ್ಥೆಗಳ, ಜನಸಾಮಾನ್ಯರ ಮುದ್ರಣ ಅಗತ್ಯತೆಗಳನ್ನು ಸರಿಯಾದ ವೇಳೆಗೆ, ಸ್ಪಷ್ಟವಾಗಿ ಒದಗಿಸುತ್ತ ಲಾಭದ ಹಾದಿಯಲ್ಲಿ ಸಂಸ್ಥೆ ಮುನ್ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಇನ್ನೋರ್ವ ಹಿರಿಯ ಸಹಕಾರಿ ಎಸ್. ಪಿ. ಶೆಟ್ಟಿ ಮಾತನಾಡಿ, ಸಂಘದ ಅಭಿವೃದ್ಧಿಗಾಗಿ ಸದಸ್ಯರು ಇನ್ನೂ ಹೆಚ್ಚಿನ ಮುದ್ರಣ ಕಾರ್ಯಗಳನ್ನು ನೀಡಬೇಕಿದೆ. ಸದಸ್ಯರ ಮುದ್ರಣ ಬೇಡಿಕೆಗೆ ತಕ್ಕಂತೆ ಯಂತ್ರೋಪಕರಣಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಸಂಸ್ಥೆಯ ಏಳ್ಗೆಗೆ ಅಗತ್ಯವಿರುವ ಸಲಹೆ, ಸೂಚನೆಗಳನ್ನು ಸದಸ್ಯರು ನೀಡುವುದರ ಜೊತೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದರು.
ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಪ್ರಸಾದ ಹೆಗಡೆ ಕಡಬಾಳ ವರದಿ ವಾಚಿಸಿ, 2021-22ನೇ ಸಾಲಿನಲ್ಲಿ ಒಟ್ಟೂ 67.93 ಲಕ್ಷ ರು. ಗಳ ಮುದ್ರಣ ಕಾರ್ಯಗಳನ್ನು ನಿರ್ವಹಿಸಿ, ಒಟ್ಟೂ 119.40 ಲಕ್ಷ ಒಟ್ಟೂ ನಿಧಿಗಳನ್ನು ಸಂಸ್ಥೆ ಹೊಂದಿದೆ. 2.28 ಲಕ್ಷ ರೂ.ಗಳ ಶೇರು ಬಂಡವಾಳ, 48.44 ಲಕ್ಷ ಗುಂತಾವಣೆಯನ್ನು ಹೊಂದುವ ಮೂಲಕ 4.09 ಲಕ್ಷ ರು. ನಿವ್ವಳ ಲಾಭಗಳಿಸಿದೆ ಎಂದರು.
ಈ ವೇಳೆ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಎನ್. ಆರ್. ಹೆಗಡೆ ಬುಗುಡಿಮನೆ, ನಿರ್ದೇಶಕರುಗಳಾದ ಆರ್.ಎನ್ ಹೆಗಡೆ ಗೋರ್ಸಗದ್ದೆ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಪರಮೇಶ್ವರ ಹೆಗಡೆ ಕಾಗೇರಿ, ವಿಶ್ವನಾಥ ಹೆಗಡೆ ಕಲ್ಗದ್ದೆ, ಆರ್. ಎಸ್. ಭಟ್ಟ ನಿಡಗೋಡ, ಲಲಿತಾ ಹೆಗಡೆ, ಹಂಚಿನಕೇರೆ, ಜಟ್ಟಪ್ಪ ಮೊಗೇರ, ಸಿದ್ದಾಪುರ ಇನ್ನಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top