• Slide
  Slide
  Slide
  previous arrow
  next arrow
 • ಸ್ವರ್ಣವಲ್ಲಿಯಲ್ಲಿ ನವರಾತ್ರಿಗೆ ಸಾಂಸ್ಕೃತಿಕ ಮೆರಗು:ಮಾಹಿತಿ ಇಲ್ಲಿದೆ

  300x250 AD

  ಶಿರಸಿ: ಸೋಂದಾ‌ ಸ್ವರ್ಣವಲ್ಲೀ ಮಹಾ‌ ಸಂಸ್ಥಾನದಲ್ಲಿ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶರನ್ನವರಾತ್ರಿ ಉತ್ಸವವು ಸೆ.26ರಿಂದ ಪ್ರಾರಂಭವಾಗಲಿದೆ. ನವರಾತ್ರಿ ಪ್ರಯುಕ್ತ ಸೆಪ್ಟೆಂಬರ್ 26ರಿಂದ‌ ಅಕ್ಟೋಬರ್ 4ರ ತನಕ ನಿತ್ಯವೂ ಸಂಜೆ 6.30ರಿಂದ ಎರಡು ತಾಸುಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮಠದ ಸುಧರ್ಮಾ ವೇದಿಕೆಯಲ್ಲಿ ನಡೆಯಲಿದೆ.
  ಸೆ.26ರ ಸಂಜೆ 6.30ಕ್ಕೆ ರಾಮಣ್ಣ ಆನವಟ್ಟಿ ಅವರ ಮಂಗಳ ವಾದ್ಯ ಮೂಲಕ ಚಾಲನೆ ಸಿಗಲಿದೆ. ಬಳಿಕ ಸುಪ್ರೀಯಾ ಹೆಗಡೆ ಹಿತ್ಲಳ್ಳಿ ಅವರಿಂದ ಭಕ್ತಿ‌ಸಂಗೀತ, ಸ್ವರ್ಣವಲ್ಲೀ‌ ಮಾತೃ ಮಂಡಳಿಯಿಂದ ಭಜನೆ, 27ರಂದು ಭಾರ್ಗವಿ ಹೆಗಡೆ ಉಮ್ಮಚಗಿ, ಪ್ರೇರಣಾ‌ ಭಟ್ಟ ಜಕ್ಕೋಳ್ಳಿ ಅವರಿಂದ ಭರತನಾಟ್ಯ, ಯೋಗ ಮಂದಿರದ ಮಾತೃ ಮಂಡಳಿಯಿಂದ ಭಜನೆ, 28ರಂದು ರಜನಿ ರಾಘವ ಹೆಗಡೆ ಕೋಡ್ಸರ ಅವರಿಂದ ಭರತನಾಟ್ಯ, ಶಾಂತಲಾ ಖರೆ ಕಲ್ಲಳ್ಳಿ‌ ಅವರಿಂದ ಕಥಾ ಕಾಲಕ್ಷೇಪ, ಸೀತಾರಾಮ ನಾಯ್ಕ ಹಳದೀಪುರ ಅವರಿಂದ ಭಜನೆ ನಡೆಯಲಿದೆ.
  ಸೆ.29ರಂದು ಕಾವ್ಯಶ್ರೀ ವಾಜಗಾರಿಂದ ಹಿಂದುಸ್ತಾನಿ ಸಂಗೀತ, ಅನಂತ ವಾಜಗಾರರ ತಬಲಾ ಸೋಲೋ, ಸ್ಪಂದನಾ‌ ಮಹಿಳಾ‌ ಮಂಡಳಿಯಿಂದ ಭಜನೆ, 30ಕ್ಕೆ ವಾರಣಾಸಿ ತೇಜಸ್ವಿನಿ ವೆರ್ಣೇಕರ್ ಅವರಿಂದ ಹಿಂದುಸ್ತಾನಿ ಸಂಗೀತ, ರಾಧಾರಾಣಿ‌ ಹೆಗಡೆ ಕಂಬದಮನೆ ಅವರಿಂದ ಭರತನಾಟ್ಯ, ರಾಜರಾಜೇಶ್ವರಿ ಯುವಕ, ಯುವತಿ ಮಂಡಳದಿಂದ ಭಜನೆ ನಡೆಯಲಿದೆ.
  ಅಕ್ಟೋಬರ್ 1ರಂದು ವಸುಧಾ ಹೆಗಡೆ ಬೆಂಗಳೂರು ಅವರಿಂದ ಹಿಂದುಸ್ತಾನಿ ಸಂಗೀತ, ವಿನಯ ದೇವರಾಜ ಸಾಗರರಿಂದ ಭಕ್ತಿ ಸಂಗೀತ, ತುಳಸಿ ಹೆಗಡೆ ಶಿರಸಿಯಿಂದ ಯಕ್ಷ ನೃತ್ಯ ರೂಪಕ,‌ 2ರಂದು ವೀಣಾ ಶಾಸ್ತ್ರೀ ಬೆಂಗಳೂರು ಹಿಂದುಸ್ತಾನಿ ಸಂಗೀತ, ಶಿವರಾಮ ಭಾಗವತ್ ದಾಸವಾಣಿ, ಅರ್ಪಿತಾ ಹೆಗಡೆ ಉಳ್ಳಿಕೊಪ್ಪ ಭರತನಾಟ್ಯ, 3ರಂದು ದೀಪಕ ಹೆಬ್ಬಾರ್ ಅವರಿಂದ ಕೊಳಲು, ನಟರಾಜ ನೃತ್ಯ ಶಾಲೆಯಿಂದ ಭರತನಾಟ್ಯ,4 ರಂದು ಶ್ರೀಧರ ಹೆಗಡೆ ದಾಸನಕೊಪ್ಪ ದಾಸ‌ಸಂಗೀತ, ಪ್ರತಿಭಾ ಬಾಲಚಂದ್ರ ಹೆಗಡೆ ಗಡೀಕೈ ಭಕ್ತಿ ಸಂಗೀತ, ಗಾಯತ್ರೀ ಬಾಲಚಂದ್ರ ಅವರಿಂದ ಕಥಕ ನೃತ್ಯ‌ ನಡೆಯಲಿದೆ.
  ತಬಲಾದಲ್ಲಿ‌ ಶಂಕರ ಹೆಗಡೆ ಹೀರೆಮಕ್ಕಿ, ಗಣೇಶ ಗುಂಡ್ಕಲ್, ಕಿರಣ ಹೆಗಡೆ, ಮಂಜುನಾಥ ಹೆಗಡೆ, ವಿಜಯೇಂದ್ರ ಹೆಗಡೆ, ಹಾರ್ಮೋನಿಯಂನಲ್ಲಿ ವಿ.ಪ್ರಕಾಶ ಹೆಗಡೆ ಯಡಹಳ್ಳಿ, ಭರತ್ ಹೆಗಡೆ, ಮಹೇಶ ಭಟ್ಟ, ಗೀತಾ ಜೋಶಿ ಸಹಕಾರ ನೀಡಲಿದ್ದಾರೆ. ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಸಾಂಸ್ಕೃತಿಕ ಸಮಿತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ‌ ಮನವಿ‌ ಮಾಡಿಕೊಳ್ಳಲಾಗಿದೆ .

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top