Slide
Slide
Slide
previous arrow
next arrow

ಪಿ.ಎಫ್.ಐ.,ಎಸ್.ಡಿ.ಪಿ.ಐ ನಿಷೇಧಕ್ಕೆ ಒತ್ತಾಯಿಸಿ ಕೇಂದ್ರ ಗೃಹಮಂತ್ರಿಗಳಿಗೆ ಮನವಿ

300x250 AD

ಕುಮಟಾ: ಕಳೆದ ಅನೇಕ ವರ್ಷಗಳಿಂದ ರಾಷ್ಟ್ರಾದ್ಯಂತ ಹಿಂದೂಗಳ ಮತ್ತು ಹಿಂದೂ ಕಾರ್ಯಕರ್ತರ ನಿರಂತರ ಹತ್ಯೆಗಳನ್ನು ನಡೆಸಿ ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಅಲ್ಲದೇ, ಭಾಜಪದ ನೂಪುರ್ ಶರ್ಮ ಅವರ ಅವಹೇಳನಕಾರಿ ವಿಷಯ ಹೇಳಿದರು ಎಂದು ‘ಸರ್ ತನ್ ಸೆ ಜುದಾ’ ಈ ಅಭಿಯಾನವನ್ನು ನಡೆಸುತ್ತಿದ್ದಾರೆ. ಹೆಚ್ಚಿನ ಹಿಂದೂ ಕಾರ್ಯಕರ್ತರ ಹತ್ಯೆಯ ಸಂಧರ್ಭದಲ್ಲಿ ಇಂತಹ ಜಿಹಾದಿ ಚಟುವಟಿಕೆಗಳಿಗೆ ಪಿ. ಎಫ್. ಐ ಮತ್ತು ಎಸ್.ಡಿ.ಪಿ ಐ ಗಳಂತಹ ಸಂಘಟನೆಗಳು ನೆರವು ನೀಡುತ್ತುರುವುದನ್ನು ವಿರೋಧಿಸಿ ಮತ್ತು ಇಂತಹ ಸಂಘಟನೆಗಳನ್ನು ರಾಷ್ಟ್ರಾದ್ಯಂತ ನಿಷೇಧಿಸಬೇಕು ಎಂದು ಒತ್ತಾಯಿಸಿ ಇಂದು ಹಿಂದೂ ಜನಜಾಗೃತಿ ಸಮಿತಿ ಮತ್ತು ಅನೇಕ ಹಿಂದೂಪರ ಕಾರ್ಯಕರ್ತರು ಸೇರಿ ಇಂದು ಕುಮಟಾ ದ ತಹಶೀಲ್ದಾರ್ ಮೂಲಕ ಕೇಂದ್ರೀಯ ಗೃಹ ಮಂತ್ರಿಗಳಿಗೆ ಮನವಿಯನ್ನು ನೀಡಲಾಯಿತು.

ಇದೇ ಸಂಧರ್ಭದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಜಿಹಾದಿ ಚಟುವಟಿಕೆ ಗಳಿಗೆ ಯಾರು ಹಣ ನೀಡುತ್ತಿದ್ದಾರೆ, ಯಾರು ಇಂತಹ ಜಿಹಾದಿಗಳನ್ನು ಪ್ರಚೋದಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಈ ಪಿತೂರಿ, ತರಬೇತಿ, ಆಶ್ರಯ, ಸೈದ್ಧಾಂತಿಕ ನಿರ್ದೇಶನ ನೀಡುವಲ್ಲಿ ಭಾಗಿಯಾಗಿರುವ ಮುಸ್ಲಿಂ ಮುಖಂಡರು, ಧರ್ಮಗುರುಗಳು, ಚಿಶ್ತಿಗಳು, ಧಾರ್ಮಿಕ ಮುಖಂಡರು ಮತ್ತು ಮುಸ್ಲಿಂ ಸಂಘಟನೆಗಳ ವಿರುದ್ಧ ಸಂಘಟಿತ ಅಪರಾಧ ಕಾಯ್ದೆಯಡಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA) ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಬೇಕು. ಹಿಂದೂಗಳ ಹತ್ಯೆಗಳ ಪ್ರಕರಣದಲ್ಲಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಮತ್ತು ಅಪರಾಧಿಗಳಿಗೆ ತಕ್ಷಣ ಮರಣದಂಡನೆ ವಿಧಿಸಬೇಕು. ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಮದರಸಾಗಳ ವಿರುದ್ಧ ಕ್ರಮ ಕೈಗೊಂಡು ಅವುಗಳನ್ನು ಕೂಡಲೇ ಮುಚ್ಚಬೇಕು. ಈ ಘಟನೆಗಳ ಹಿಂದೆ ಪಾಕಿಸ್ತಾನ, ಬಾಂಗ್ಲಾದೇಶ ಇತ್ಯಾದಿ ದೇಶಗಳ ಕೈವಾಡವಿದೆಯೇ, ಇದು ಅಂತಾರಾಷ್ಟ್ರೀಯ ಷಡ್ಯಂತ್ರವೇ ಎಂಬುದನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕೆಂಬುದು ಒತ್ತಾಯಿಸಲಾಯಿತು.

300x250 AD

ಈ ಸಂಧರ್ಭದಲ್ಲಿ ಹಿಂದುತ್ವನಿಷ್ಟರಾದ ಪ್ರಶಾಂತ್ ನಾಯ್ಕ್, ವಿಶ್ವನಾಥ ನಾಯ್ಕ್, ತಿಮ್ಮಪ್ಪ ಮುಕ್ರಿ, ವಿಶ್ವಹಿಂದೂ ಪರಿಷತ್ ನ ಎಂ ಆರ್ ಭಟ್, ಪ್ರಕಾಶ್ ಶೆಟ್ಟಿ, ನಾಗೇಂದ್ರ ಆಚಾರಿ, ಶ್ರೀಪಾದ ಭಂಡಾರಿ ವಿಜಯಾ ಶೇಟ್ ಹಿಂದೂ ಜನಜಾಗೃತಿ ಸಮಿತಿಯ ಅರುಣ್ ನಾಯ್ಕ್,ಸಂದೀಪ್ ಭಂಡಾರಿ, ಶರತ್ ಕುಮಾರ್ ನಾಯ್ಕ್, ಸನಾತನ ಸಂಸ್ಥೆಯ ಸೌ ಗೀತಾ ಶಾನಭಾಗ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top