Slide
Slide
Slide
previous arrow
next arrow

ಭೂಕುಸಿತ ಪರಿಹಾರ,ಪರ್ಯಾಯ ವ್ಯವಸ್ಥೆ ಆಗ್ರಹಿಸಿ ಸಿಎಂಗೆ ಮನವಿ

300x250 AD

ಯಲ್ಲಾಪುರ : ತಾಲೂಕಿನ ಕಳಚೆಯಲ್ಲಿ ಕಳೆದ ವರ್ಷ ಭೂಕುಸಿತದಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರ, ಗ್ರಾಮಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕಳಚೆ ಭೂಕುಸಿತ ಪುನರ್ವಸತಿ, ಪರಿಹಾರ ಸಮಿತಿಯ ನಿಯೋಗದ ಪ್ರಮುಖರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. 

   ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಂತೆ ಬೆಂಗಳೂರಿಗೆ ತೆರಳಿದ ನಿಯೋಗ ಮುಖ್ಯಮಂತ್ರಿಗಳಿಗೆ ಕಳಚೆಯ ಸಂಕಷ್ಟದ ಬಗೆಗೆ ವಿವರಿಸಿತು. ಈ ವೇಳೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಉಪಸ್ಥಿತರಿದ್ದು, ಕಳಚೆಯ ಜನರ ಸ್ಥಿತಿಗತಿ ಬಗೆಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. 

   2021 ರ ಜುಲೈನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಳೆಚೆ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿ ಮನೆಗಳಿಗೆ, ಕೃಷಿ ಭೂಮಿ ಹಾಗೂ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿ ಉಂಟಾಗಿದೆ. ಕಳಚೆ ಗ್ರಾಮದ 667 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಅನುಮತಿ ನೀಡುವಂತೆ ಹಾಗೂ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಅಥವಾ ಬೇರೆ ಯಾವುದೇ ಅನುದಾನದಡಿ ಪುನರ್ವಸತಿ ಕಲ್ಪಿಸಲು ಅನುದಾನ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ನಿಯೋಗದ ಪ್ರಮುಖರು ಮನವಿ ಮಾಡಿದರು.

300x250 AD

    ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು, ಕಳಚೆ ಗ್ರಾಮಸ್ಥರ ಕಷ್ಟವನ್ನು ಕಳೆದ ವರ್ಷ ಸ್ವತಃ ನೋಡಿ ಬಂದಿದ್ದೇನೆ. ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಕಾಗೇರಿ, ಹೆಬ್ಬಾರ್ ಅವರ ಉಪಸ್ಥಿತಿಯಲ್ಲಿ ಆರ್ಥಿಕ ಹಾಗೂ ಸಹಕಾರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. 

    ಪುನರ್ವಸತಿ ಪರಿಹಾರ ಸಮಿತಿಯ ಕಾರ್ಯಾಧ್ಯಕ್ಷ ಗಜಾನನ ಭಟ್ಟ, ಕಾರ್ಯದರ್ಶಿ ಅನಂತ ಹೆಗಡೆ,  ಸಮಿತಿಯ ಸದಸ್ಯರಾದ ಉಮಾಮಹೇಶ್ವರ ಭಾಗ್ವತ, ರಾಮನಾಥ ಹೆಗಡೆ, ವೆಂಕಟ್ರಮಣ ಭಟ್ಟ ಬೆಳ್ಳಿ, ರಾಮಚಂದ್ರ ಭಟ್ಟ, ವಿಶ್ವೇಶ್ವರ ಭಟ್ಟ ಇತರರಿದ್ದರು.

Share This
300x250 AD
300x250 AD
300x250 AD
Back to top