ಕಾರವಾರ: ಲಯನ್ಸ್ ಕ್ಲಬ್ ಸದಾಶಿವಗಡ ಹಾಗೂ ಶಿವಾಜಿ ವಿದ್ಯಾ ಮಂದಿರ ಸಹಯೋಗದಲ್ಲಿ ಶಿಕ್ಷಕ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ತಬಸಮ್ ಮುಖಾದಮ್ ಮಾತನಾಡಿ, ಅತ್ಯಂತ ಸೃಜನಶೀಲ ಶಿಕ್ಷಕರಾದ ಜೆ.ಬಿ.ತಿಪ್ಪೇಸ್ವಾಮಿಯವರಿಗೆ ಈ ವರ್ಷ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವದು ತುಂಬಾ ಖುಷಿಯಾಗಿದೆ. ನಮ್ಮ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಅವರಿಗೆ ಇಂದು ಕ್ಲಬ್ ವತಿಯಿಂದ ಸನ್ಮಾನ ಮಾಡಿರುವುದು ಅತೀವ ಹೆಮ್ಮೆ ಅನಿಸುತ್ತದೆ ಎಂದರು.
ಡಾ.ಸಂದೀಪ್ಅಣ್ವೇಕರ, ತಿಪ್ಪೇಸ್ವಾಮಿಯವರು ಸದಾ ಹೊಸತನ ಹುಡುಕುವ ಶಿಕ್ಷಕರು ಅವರ ಸೇವೆಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಹರಿದು ಬರಲೆಂದು ಆಶಿಸಿದರು. ಸನ್ಮಾನ ಸ್ವಿಕರಿಸಿ ಮಾತನಾಡಿದ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಜೆ.ಬಿ.ತಿಪ್ಪೇಸ್ವಾಮಿಯವರು ತಮ್ಮ ಪ್ರೀತಿ, ಅಭಿಮಾನಕ್ಕೆ ಋಣಿಯಾಗಿರುವೆ ಮುಂದೆಯೂ ಉತ್ತಮ ಸೇವೆ ಸಲ್ಲಿಸುತ್ತೇನೆ ಎಂದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯಾಧ್ಯಾಪಕ ದಿನೇಶ ಗಾಂವಕ ವಹಿಸಿ, ನಮ್ಮ ಶಾಲೆಯಲ್ಲಿ ಎಲ್ಲರೂ ಉತ್ತಮ ಶಿಕ್ಷಕರಿದ್ದಾರೆ. ಈ ವರ್ಷ ನಮ್ಮ ಶಾಲೆಯ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿರುವದು ಜ್ಞಾನ ದೇಗುಲಕ್ಕೆ ಮತ್ತೊಂದು ಗರಿ ಸೇರಿದಂತಾಯಿತು ಎಂದು ಹೇಳುತ್ತಾ, ಮೂರು ಜನ ಶಿಕ್ಷಕರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಾಲೆ ನಮ್ಮ ಶಾಲೆ ಇದೊಂದು ಇತಿಹಾಸವೆಂದರು.
ರಕ್ಷಿತಾ ಸಂಗಡಿಗರು ಪ್ರಾರ್ಥಸಿದರು. ಶಿಕ್ಷಕ ಗಣೇಶ ಬಿಷ್ಟಣ್ಣನವರ ಸ್ವಾಗತಿಸಿ ನಿರೂಪಿಸಿದರು. ವೇದಿಕೆಯ ಮೇಲೆ ಶಿಕ್ಷಕರಾದ ವಿಜಯಕುಮಾರ್ ನಾಯ್ಕ, ಶರತ್ ಗಾಂವಕರ, ಸಂತೋಷ ಕಾಂಬಳೆ, ರೂಪಾಲಿ ಸಾವಂತ, ಮಹದೇವ ಅಸ್ನೋಟಿಕರ, ಪ್ರಶಿಕ್ಷಣಾರ್ಥಿ ರಾಜಲಕ್ಷ್ಮಿ ಪರವಾರ ಉಪಸ್ಥಿತರಿದ್ದರು.