• Slide
    Slide
    Slide
    previous arrow
    next arrow
  • ಪಾಂಡ್ರಿ ನದಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

    300x250 AD

    ಜೊಯಿಡಾ: ತಾಲೂಕಿನ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಡ್ರಿ ನದಿಯಲ್ಲಿ ಅಸ್ತುಲಿ ಸೇತುವೆ ಹತ್ತಿರ ಅನುಮಾನಾಸ್ಪದ ಮಹಿಳೆಯ ಶವ ಸಿಕ್ಕಿದ್ದು ಗುರುತು ಪತ್ತೆಯಾಗಿಲ್ಲ.

    ಶುಕ್ರವಾರ ಪಾಂಡ್ರಿ ನದಿಯಲ್ಲಿ ಮಿನು ಹಿಡಿಯಲು ಹೋದ ಯುವಕರು ನದಿಯಲ್ಲಿ ತೇಲಿ ಹೋಗುತ್ತಿದ್ದ ಶವವನ್ನು ಕಂಡು ರಾಮನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಶವ ಪರೀಕ್ಷೆ ಮಾಡಿದಾಗ 25ರಿಂದ 30 ವರ್ಷದ ಮಹಿಳೆಯ ಶವದ ಗಂಟಲಿಗೆ ಕೆಂಪು ಬಟ್ಟೆಯಿಂದ ಕಟ್ಟಲಾಗಿದ್ದು, ಕಾಲು ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಹಾಕಿ ಪಾಂಡ್ರಿ ನದಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೀಗ ಮೃತ ಮಹಿಳೆ ಯಾರೆಂದು ಪೊಲೀಸರಿಗೆ ಗೊಂದಲದ ಗೂಡಾಗಿದೆ.

    300x250 AD

    ವಾರಸುದಾರರಿದ್ದರೆ ಸಂಪರ್ಕಿಸಿ: ಜೊಯಿಡಾ ತಾಲೂಕಾ ಆಸ್ಪತ್ರೆ ಶವಾಗಾರದಲ್ಲಿ ಶವ ಇಡಲಾಗಿದ್ದು, ಕೆಂಪು ಬಣ್ಣದ ಸೀರೆ, ಖಾಕಿ ಬಣ್ಣದ ರವಿಕೆ ಮಹಿಳೆಯ ದೇಹದ ಮೇಲಿದೆ. ಈ ಬಗ್ಗೆ ಇಂದಿಗೂ ಮಹಿಳೆ ಕಾಣೆಯಾದ ಬಗ್ಗೆ ಯಾವ ಕುಟುಂಬಸ್ಥರೂ ಸಂಪರ್ಕ ಮಾಡಿಲ್ಲ. ಯಾರಾದರೂ ವಾರಸುದಾರರಿದ್ದರೆ ರಾಮನಗರ ಪಿಎಸ್‌ಐ (ಮೊ.ಸಂ: 9480805261), ಜೊಯಿಡಾ ಸಿಪಿಐ (ಮೊ.ಸಂ: 9480805237), ದಾಂಡೇಲಿ ಡಿವೈಎಸ್‌ಪಿ (ಮೊ.ಸಂ: 9480805223), ಕಾರವಾರ ಕಂಟ್ರೋಲ್ ರೂಮ್ (ಮೊ.ಸಂ: 9480805200)ಗೆ ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top