ಶಿರಸಿ: ಜಿಲ್ಲೆಯ ಪ್ರತಿಷ್ಠಿತ ಅಸೋಸಿಯೇಷನ್’ಗಳಲ್ಲಿ ಒಂದಾದ ಶಿರಸಿ ಪೋಟೋಗ್ರಾಫರ್ಸ ಹಾಗೂ ವಿಡಿಯೋಗ್ರಾಫರ್ಸ ಅಸೋಸಿಯೇಷನ್ ಅಧ್ಯಕ್ಷರಾಗಿ ಎರಡನೆ ಅವಧಿಗೆ ರಾಜು ಕಾನಸೂರು ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸಂತೋಷ ಶಿರ್ಸಿಕರ, ಖಜಾಂಚಿಯಾಗಿ ಕಿರಣ ಹೆಗಡೆ ಹಾಣಜಿ, ಕಾರ್ಯದರ್ಶಿಯಾಗಿ ಜಗದೀಶ ಜೈವಂತ, ಜಂಟಿ ಕಾರ್ಯದರ್ಶಿಯಾಗಿ ನವೀನ ಗಾಂವಕರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಕಮಿಟಿ ಸದಸ್ಯರಾಗಿ ರವಿ ಕೊಳೇಕರ ಬನವಾಸಿ, ಇಲಿಯಾಸ ಅಹ್ಮದ್, ಮಹೇಶ ಕರ್ಜಗಿ, ಚೆನ್ನವೀರ ಗಾಣಗೇರ, ಮಂಜುನಾಥ ಹೆಗಡೆ, ಸುನೀಲ ಹೆಗಡೆ ತಟ್ಟೀಸರ, ಮಾರುತಿ ಬೊಂಗಾಳೆ ಹಾಗೂ ಧೀರಜ ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ. ಸಲಹಾ ಸಮಿತಿ ಸದಸ್ಯರನ್ನಾಗಿ ಲಕ್ಷ್ಮೀನಾರಾಯಣ ಭಟ್, ಸುಧೀರ ಶಾನಭಾಗ, ರವಿರಾಜ ದೇವಳಿ ಹಾಗೂ ರವಿ ಹಿರೇಮಠ ಅವರನ್ನು ಆಯ್ಕೆ ಮಾಡಲಾಗಿದೆ. ಶಿರಸಿ ಪತ್ರಿಕಾ ಭವನದಲ್ಲಿ ನಡೆದ ಸರ್ವಸಾಧಾರಣ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಜಗದೀಶ ಜೈವಂತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.