ಕಾರವಾರ: ಹಿಂದಿನ ಕಾಲದಲ್ಲಿ ಕೇವಲ ವಿಶ್ವಕರ್ಮ ಸಮುದಾಯಕ್ಕೆ ಮಾತ್ರ ಸಿಮೀತವಾದ ಕಲೆಯಲ್ಲಿ ಇಂದು ಆಸಕ್ತಿ ಇರುವಂಥವರು ತೊಡಗಿಕೊಳ್ಳುವ ಅವಕಾಶವಿದೆ ಎಂದು ಉಪವಿಭಾಗಾಧಿಕಾರಿ ಜಯಲಕ್ಷೀ ರಾಯಕೋಡ ಹೇಳಿದರು.
ಜಿಲ್ಲಾಧಿಕಾರಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಪರಂಪರೆಯ ಕಲೆ- ವಾಸ್ತುಶಿಲ್ಪಗಳಿಗೆ ವಿಶ್ವಕರ್ಮರ ಕೊಡುಗೆ ಅಪಾರ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನರೇಂದ್ರ ನಾಯ್ಕ್, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವಾಸುದೇವ ಆಚಾರಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಕುಶಲಕರ್ಮಿಕೆ ಇಂದು ಆಸಕ್ತರ ಕಲೆಯಾಗಿದೆ: ರಾಯಕೋಡ
