• Slide
  Slide
  Slide
  previous arrow
  next arrow
 • ಕೌಶಲ ದಿಕ್ಷಾಂತದಿಂದ ಆಕಾಂಕ್ಷಿಗಳ ಬಾಳಲ್ಲಿ ಹೊಸ ಚೈತನ್ಯ: ಡಾ.ಪಿಕಳೆ

  300x250 AD

  ಕಾರವಾರ: ವೃತ್ತಿ ಕೌಶಲ ಪಡೆದ ಸಾವಿರಾರು ಯುವ ಆಕಾಂಕ್ಷಿಗಳ ಬಾಳಲ್ಲಿ ಹೊಸ ಚೈತನ್ಯ ತುಂಬಲು ಕೌಶಲ ದಿಕ್ಷಾಂತ ಸಮಾರಂಭದಂತಹ ದೊಡ್ಡ ಪ್ರಮಾಣದ ಕಾರ್ಯಕ್ರಮ ಏರ್ಪಡಿಸಿರುವುದು ಅತ್ಯಂತ ಅಭಿನಂದನೀಯ ಮಾತ್ರವಲ್ಲ ಇದು ಇಂದಿನ ಅಗತ್ಯ ಎಂದು ಕಾರವಾರ ನಗರಸಭೆ ಅಧ್ಯಕ್ಷ ನಿತಿನ ಪಿಕಳೆ ಅಭಿಪ್ರಾಯಪಟ್ಟರು.
  ಅವರು ಇಂದು ಜನಶಿಕ್ಷಣ ಸಂಸ್ಥಾನ ಆಶ್ರಯದಲ್ಲಿ ಕಾರವಾರದ ಎನ್.ಜಿ.ಓ. ಸಭಾಂಗಣದಲ್ಲಿ ವಿಶ್ವಕರ್ಮ ದಿನಾಚರಣೆ ಅಂಗವಾಗಿ ನಡೆದ ಕೌಶಲ ದಿಕ್ಷಾಂತ ಸಮಾರಂಭ ಉದ್ಘಾಟಿಸಿ, ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
  ತರಬೇತಿ ಅತ್ಯುತ್ತಮವಾಗಿ ಪಡೆದಾಗ ಆ ಸರ್ಟಿಫಿಕೇಟ್ ಕೂಡಾ ಅತ್ಯಂತ ಮೌಲ್ಯಯುತವೆಂದು ಫಲಾನುಭವಿ ತಿಳಿದುಕೊಂಡಿರುತ್ತಾರೆ. ಅದೇ ವ್ಯಕ್ತಿಗೆ ತನ್ನ ಯಶಸ್ಸಿನ ಕಿರೀಟವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ, ತನ್ನ ಸಾಧನೆ ಇತರರಲ್ಲಿ ಹಂಚಿಕೊಂಡಾಗ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಹಾಗೂ ತನ್ನ ವೃತ್ತಿಯಲ್ಲಿ ಮುಂದುವರಿದು ಸಮಾಜಕ್ಕೆ ಹೊಸ ಸಂದೇಶ ನೀಡುತ್ತಾನೆ ಅಂದರು.
  ಮುಖ್ಯ ಅತಿಥಿಯಾಗಿ ಆಗಮಿಸಿದ ನಗರಸಭಾ ಉಪಾಧ್ಯಕ್ಷ ಪ್ರಕಾಶ ನಾಯಕ ಮಾತನಾಡಿ ತರಬೇತಿ ಪ್ರಮಾಣ ಪತ್ರ ಪಡೆದವರು ಸ್ವಾವಲಂಬಿ ಜೀವನದತ್ತ ಬದುಕನ್ನು ಕಾಣಬೇಕು. ಇದರಿಂದ ಅವರ ಕುಟುಂಬ ಮತ್ತು ಸುತ್ತ ಮುತ್ತಲಿನ ಯುವ ಜನರಿಗೆ ಪ್ರೇರಣೆ ಆಗುತ್ತದೆ ಅಂದರು.
  ಜೆ.ಎಸ್.ಎಸ್. ಚೇರಮನ್ ಕಿಶೋರ ರಾಣೆ ಮಾತನಾಡಿ ಜಿಲ್ಲೆಯಲ್ಲಿ ವಿವಿಧ ನಮೂನೆಯ ಹಲವಾರು ತರಬೇತಿಗಳು ನಡೆಯುತ್ತಿದ್ದು, ಯಶಸ್ವಿಯಾಗಿ ತರಬೇತಿ ಪಡೆದವರಿಗೆ ಇಂತಹ ಸಮಯೋಚಿತ ಸಮಾರಂಭ ಮಾಡಿ ಅವರನ್ನು ಉತ್ತೇಜಿಸಲಾಗುವುದು ಅಂದರು.
  ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ ಅವರು ಮಾತನಾಡಿ, ಯುವ ಜನರಲ್ಲಿ ಆತ್ಮಸ್ಥೆöÊರ್ಯ ಕುದುರಿಸಲು ಇಂತಹ ಕಾರ್ಯಕ್ರಮ ಅಗತ್ಯವಾಗಿದೆ ಅಂದರು.
  2021-22 ರಲ್ಲಿ ಜಿಲ್ಲೆಯ ವಿವಿಧ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವೇದಿಕೆ ಮೇಲೆ ಶುಭಾಂಗಿನಿ ಶಿರೋಡ್ಕರ, ಜನ ಶಿಕ್ಷಣ ಸಂಸ್ಥಾನ ಅಧಿಕಾರಿ ರಮೇಶ ಭಂಡಾರಿ ಉಪಸ್ಥಿತರಿದ್ದರು.
  ಜನಶಿಕ್ಷಣ ಸಂಸ್ಥೆಯ ನಿರ್ದೇಶಕ ಶಶಿಕಾಂತ ನಾಯ್ಕ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಕಾರ್ಯಕ್ರಮಾಧಿಕಾರಿ ಪ್ರಕಾಶ ತಳೇಕರ ಕಾರ್ಯಕ್ರಮ ನಿರೂಪಿಸಿದರು.
  ಕಾರ್ಯಕ್ರಮದ ಪ್ರಾರಂಭದಲ್ಲಿ 1995 ರಲ್ಲಿ ಕೇಂದ್ರ ಸರಕಾರದ ಅನುದಾನದ ಅಡಿ ಜನಶಿಕ್ಷಣ ಸಂಸ್ಥೆ ಮಂಜೂರು ಮಾಡಿಸಿ ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ ಮಾಜಿ ಸಚಿವ ಹಾಗೂ ಜನಶಿಕ್ಷಣ ಸಂಸ್ಥೆಯ ಹಿಂದಿನ ಚೇರಮನ್ ದಿವಂಗತ ಪ್ರಭಾಕರ ರಾಣೆಯವರ ನಿಧನಕ್ಕೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜನಶಿಕ್ಷಣ ಸಂಸ್ಥೆಯ ಅಧಿಕಾರಿ ರಮೇಶ ಭಂಡಾರಿ ಅವರು ಪ್ರಭಾಕರ ರಾಣೆಯವರ ಒಡನಾಟ, ಅವರ ರಾಜಕೀಯ ಬದುಕು, ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದ ರೀತಿ, ಹೋರಾಟಗಾರನಾಗಿ ಜಿಲ್ಲೆಯ ಬೃಹತ್ ಯೋಜನೆಗಳಿಂದ ನಿರಾಶ್ರಿತರಿಗೆ ಸಿಗಬೇಕಾದ ನ್ಯಾಯಯುತ ಬೇಡಿಕೆ ಮುಂತಾದವುಗಳ ಕುರಿತು ವಿವರವಾಗಿ ತಿಳಿಸಿದರು. ತದನಂತರ ಒಂದು ನಿಮಿಷ ಮೌನ ಆಚರಿಸಿ ಅವರಿಗೆ ಗೌರವ ಸಲ್ಲಿಸಲಾಯಿತು. ವಿವಿಧ ತರಬೇತಿ ಪಡೆದ ನೂರಾರು ಜೆ.ಎಸ್.ಎಸ್. ಶಿಬಿರಾರ್ಥಿಗಳು ಪ್ರಮಾಣ ಪತ್ರ ಪಡೆದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top