Slide
Slide
Slide
previous arrow
next arrow

ರೋಟರಿ ಕ್ಲಬ್’ನಿಂದ ವಿಜೃಂಭಣೆಯ ಇಂಜಿನಿಯರ್ಸ್ ದಿನ ಆಚರಣೆ

300x250 AD

ಕಾರವಾರ: ರೋಟರಿ ಕ್ಲಬ್ ಕಾರವಾರ ಇವರ ವತಿಯಿಂದ ಸೆಪ್ಪೆಂಬರ್ 15 ರಂದು ನಾಡುಕಂಡ ಶ್ರೇಷ್ಠ ಇಂಜಿನಿಯರ್‌ ಸರ್.ಎಂ. ವಿಶ್ವೇಶ್ವರಯ್ಯರವರ ಜನ್ಮದಿನ ಹಾಗೂ ಇಂಜಿನಿಯರ್‌ಗಳ ದಿನವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಸರ್.ಎಂ. ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ದೀಪಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ರಾಘವೇಂದ್ರ ಜಿ ಪ್ರಭುರವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸುತ್ತಾ ಸರ್.ಎಂ.ವಿಶ್ವೇಶ್ವರಯ್ಯರವರ ಗುಣಗಾನ ಮಾಡಿದರು.

ರೋ. ನಾಗರಾಜ ವಿ ಜೋಶಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಪಾಲಿಟೆಕ್ನಿಕನ ನಿವೃತ್ತ ಪ್ರಾಂಶುಪಾಲ ವಿ.ಎಮ್. ಹೆಗಡೆಯವರನ್ನು ಸಭೆಗೆ ಪರಿಚಯಿಸಿದರು. ಮುಖ್ಯ ಅತಿಥಿಗಳು ಸರ್.ಎಂ.ವಿಶ್ವೇಶ್ವರಯ್ಯರವರ ಸಂಪೂರ್ಣ ಜೀವನ ಚರಿತ್ರೆಯನ್ನು ಸೊಗಸಾಗಿ ವಿವರಿಸಿದರು. ವೃತ್ತಿಪರ ನಿರ್ದೇಶಕರಾದ ರೋ. ಅಮರನಾಥ ಶೆಟ್ಟಿಯವರು ಸಂಧರ್ಬೊಚಿತ ಮಾತನಾಡಿದರು. ಈ ಸಂದರ್ಭದಲ್ಲಿ ಕಾರವಾರದ ಶ್ರೇಷ್ಠ ಇಂಜಿನಿಯರಗಳಾದ ರೋ. ಮಿನಿನ ಪುಡ್ತಾಡೊ ಹಾಗೂ ಲಾಯನ ರೋಶನ ರೇವಣಕರ ರವರನ್ನು ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿ.ಎಮ್.ಹೆಗಡೆಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿಯನ್‌ಗಳಾದ ರೋ. ಅರ್ಚನಾ ಶೆಟ್ಟಿ, ರೋ. ಸತೀಶ ನಾಯ್ಕ, ರೋ. ಕೃಷ್ಣಾನಂದ ಬಾಂದೇಕರ, ರೋ. ರಾಮಚಂದ್ರ ಪಡವಳಕರ, ರೋ. ಕೆ.ಡಿ.ಪೆಡ್ನೇಕರ, ರೋ. ವಿನೋದ ಕೊಠಾರಕರ, ಶ್ರೀ ಪಿ.ಆರ್.ನಾಯ್ಕ, ರೋ. ಗುರು ಹೆಗಡೆ ರೋ. ಮುರಲಿ ಗೋವೆಕರ, ರೋ. ಗೋವಿಂದಪ್ಪಾ, ರೋ. ಆನಂದ ನಾಯ್ಕ, ರೋ. ಅನಮೋಲ ರೇವಣಕರ, ರೋ. ಮೋಹನ ನಾಯ್ಕ. ರೋ. ವಿನೋದ ಪಾವಸ್ಕರ ಹಾಗೂ ಪ್ರಥಮ ಮಹಿಳೆ ರಾಜಶ್ರೀ ಪ್ರಭು ಹಾಗೂ ಪಾಲಿಟೆಕ್ನಿಕನ ಪ್ರಾಚಾರ್ಯರಾದ ದತ್ತಾತ್ರಯ ಪಟಗಾರ ಉಪಸ್ಥಿತರಿದ್ದರು. ಕೊನೆಯಲ್ಲಿ ಕ್ಲಬ್‌ನ ಕಾರ್ಯದರ್ಶಿ ರೋ. ಗುರುದತ್ತ ಭಂಟರವರು ವಂದನಾರ್ಪಣೆಗೈದರು. ರೋ. ಶೈಲೇಶ ಹಳದಿಪುರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top