ಧಾರವಾಡ: ಪ್ರತಿಷ್ಠಿತ ಐಐಟಿ, ಐಐಐಟಿ ಹಾಗೂ ಎನ್‌ಐಟಿ ಗಳಲ್ಲಿ ಪದವಿ ಪ್ರವೇಶಕ್ಕೆ ನಡೆಸಲಾಗುವ ಜೆಇಇ ಅಡ್ವಾನ್ಸ ಪರೀಕ್ಷೆಯಲ್ಲಿ ಧಾರವಾಡದ ಅರ್ಜುನ (ಶಾಂತಿನಿಕೇತನ) ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕುಮಾರ್ ನಮನ್ ಭಟ್ ಭಾರತ ಮಟ್ಟದಲ್ಲಿ 7780 ನೇ ರ್ಯಾಂಕ್ ಮತ್ತು ಕುಮಾರ್ ಆದಿತ್ಯ ಭಟ್ ಭಾರತ ಮಟ್ಟದಲ್ಲಿ 10076 ನೇ ರ್ಯಾಂಕ ನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಜೆಇಇ ಅಡ್ವಾನ್ಸ ಪರೀಕ್ಷೆಯಲ್ಲಿ ಅರ್ಜುನ ವಿದ್ಯಾರ್ಥಿಗಳ ಸಾಧನೆ
