Slide
Slide
Slide
previous arrow
next arrow

ಸೆ.18ರಂದು ವಾಜಗದ್ದೆಯಲ್ಲಿ ಕುಶ-ಲವ ಯಕ್ಷಗಾನ

300x250 AD

ಸಿದ್ದಾಪುರ: ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಶಿರಸಿಯ ನಾದಶಂಕರ ಇವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ದುರ್ಗಾವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಸಹಕಾರದೊಂದಿಗೆ ಕುಶ-ಲವ ಯಕ್ಷಗಾನ ಸೆ.18ರಂದು ಸಂಜೆ 5ರಿಂದ ಪ್ರದರ್ಶನಗೊಳ್ಳಲಿದೆ.
ಯಕ್ಷಗಾನ ಪ್ರದರ್ಶನದ ಪೂರ್ವದಲ್ಲಿ ನಡೆಯುವ ಸಭಾಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮಟಾ, ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಉದ್ಯಮಿ ಆರ್.ಜಿ.ಭಟ್ಟ ವರ್ಗಾಸರ, ಆರ್.ಜಿ.ಹೆಗಡೆ ವಾಜಗದ್ದೆ, ಉಪೇಂದ್ರ ಪೈ ಶಿರಸಿ, ಟಿಎಸ್‌ಎಸ್‌ನ ಮಾಜಿ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ಅಶೋಕ ಹೆಗಡೆ ಹಿರೇಕೈ ಉಪಸ್ಥಿತರಿರುತ್ತಾರೆ.
ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಸತೀಶ ಹೆಗಡೆ ದಂಟಕಲ್, ನಂದನ ಹೆಗಡೆ ದಂಟಕಲ್,ಶಂಕರ ಭಾಗವತ ಯಲ್ಲಾಪುರ, ಅನಿರುದ್ಧ ಹೆಗಡೆ ವರ್ಗಾಸರ, ಶರತ್ ಹೆಗಡೆ ಜಾನಕೈ, ವಿಘ್ನೇಶ್ವರ ಗೌಡ ಕೆಸರಕೊಪ್ಪ, ಪ್ರಸನ್ನ ಹೆಗ್ಗಾರ ಪಾಲ್ಗೊಳ್ಳುವರು.
ಮುಮ್ಮೇಳದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ,ಶ್ರೀಧರ ಹೆಗಡೆ ಚಪ್ಪರಮನೆ, ವಿನಯ ಬೇರೊಳ್ಳಿ, ನಿತಿನ್ ದಂಟಕಲ್, ಪ್ರವೀಣ ತಟ್ಟೀಸರ, ವೆಂಕಟೇಶ ಬೊಗ್ರಿಮಕ್ಕಿ, ಅವಿನಾಶ ಕೊಪ್ಪ ಪಾತ್ರ ನಿರ್ವಹಿಸಲಿದ್ದಾರೆ ಎಂದು ಸಂಘಟಕ ಶಂಕರ ಭಾಗವತ ಯಲ್ಲಾಪುರ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top