• Slide
  Slide
  Slide
  previous arrow
  next arrow
 • ಸಾಮರಸ್ಯ, ನೈತಿಕತೆ ವೃದ್ದಿಗಾಗಿ ಗೀತಾಭಿಯಾನ ಪಾಲ್ಗೊಳ್ಳಿ: ಸ್ವರ್ಣವಲ್ಲೀ ಶ್ರೀ

  300x250 AD

  ಶಿರಸಿ: ಸಮಾಜದಲ್ಲಿ‌ ಸಾಮರಸ್ಯ ವೃದ್ಧಿ ಹಾಗೂ ನೈತಿಕತೆ ಹೆಚ್ಚಳಕ್ಕೂ ಭಗವದ್ಗೀತೆ ಕಾರಣವಾಗುತ್ತದೆ. ಈ ಗೀತಾ ಅಭಿಯಾನ  ಎಲ್ಲರೂ ಪಾಲ್ಗೊಳ್ಳುವಂತೆ‌ ಸೋಂದಾ ಸ್ವರ್ಣವಲ್ಲೀ ‌ಮಹಾ ಸಂಸ್ಥಾನದ‌ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿ ಕೋರಿದರು.

  ಶನಿವಾರ ಅವರು ದಾವಣಗೆರೆ ಜಿಲ್ಲಾ ಭಗವದ್ಗೀತಾ ಅಭಿಯಾನ ಹಿನ್ನಲೆಯಲ್ಲಿ ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ  ನಡೆದ ಭಗವದ್ಗೀತಾ ಪಠಣದ ಪ್ರಶಿಕ್ಷಣ ವರ್ಗದಲ್ಲಿ ಸಾನ್ನಿಧ್ಯ‌ ನೀಡಿ ಆಶೀರ್ವಚನ ನುಡಿದರು‌.

  ನವೆಂಬರ್ 4 ರಿಂದ ಡಿಸೆಂಬರ್ ನಾಲ್ಕರ ತನಕ‌ ಮೂರು‌ ಹಂತದಲ್ಲಿ ಅಭಿಯಾನ ನಡೆಯಲಿದೆ. ಭಗವದ್ಗೀತೆಯ ಐದನೇ ಅಧ್ಯಾಯ ಆಯ್ಕೆ‌ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಗೀತೆ ಪಾಠ ಆಗಬೇಕಿದೆ ಎಂದರು.

  300x250 AD

  ಶಾರದಾ ಆಶ್ರಯದ ಯೋಗಾನಂದಮಯಿ, ಬಿಇಓ ನಿರಂಜನ ಮೂರ್ತಿ,  ರಾಷ್ಟ್ರೋತ್ಥಾನ ಕಾರ್ಯದರ್ಶಿ ಜಯಣ್ಣ, ಅಭಿಯಾನದ ದಾವಣಗೆರೆ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಎಸ್.ಆರ್ ಹೆಗಡೆ, ಅಧ್ಯಕ್ಷ ಕುಸುಮ ಶೆಟ್ರು ಮತ್ತು ಅನೇಕ ಕಾರ್ಯಕರ್ತರು ಭಾಗವಹಿಸಿದರು.

   ಶಿಕ್ಷಕ ಶಿಕ್ಷಕಿಯರು, ಭಜನಾ ಮಂಡಳಿ ಪ್ರಮುಖರು ಮತ್ತು ಮಹನೀಹರು ಗೀತಾಪಠಣ ಮಾಡಲು ತರಬೇತಿಯನ್ನು ಪಡೆದುಕೊಂಡರು. 250ಕ್ಕೂ ಹೆಚ್ಚು ಜನರು ಭಾಗವಹಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top