ಕಾರವಾರ: 2022-23ನೇ ಸಾಲಿನ ಉತ್ತರ ಕನ್ನಡ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಇಲಾಖಾ ವತಿಯಿಂದ ಏರ್ಪಡಿಸಲಾಗಿದೆ.ಸ್ಪರ್ಧೆ ನಡೆಯುವ ದಿನಾಂಕ ಹಾಗೂ ಸ್ಥಳಗಳ ವಿವರಗಳು ಇಲ್ಲಿವೆ.
ಸೆ.17 ಶನಿವಾರದಂದು ಕಬ್ಬಡ್ಡಿ ಸ್ಪರ್ಧೆಯು ಕಾರವಾರದ ಮಾಲಾದೇವಿ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಹೆಚ್ಚಿನ ವಿವರಗಳಿಗೆ ಪದವಿ ಪೂರ್ವ ಕಾಲೇಜು ಸಿದ್ದರ ಕಾರವಾರದ ಪ್ರಾಂಶುಪಾಲ ಜಿ.ಪಿ.ನಾಯ್ಕ್( 9448628625),ಹಾಗೂ ಕುಸ್ತಿ ಪಂದ್ಯಾವಳಿಯು ಹಳಿಯಾಳದ ಕುಸ್ತಿ ಅಖಾಡದಲ್ಲಿ ನಡೆಯಲಿದ್ದು ಮಾಹಿತಿಗಾಗಿ ಕುಸ್ತಿ ತರಬೇತುದಾರ ತುಕಾರಾಮ್ ಗೌಡ (9945489193) ಸಂಪರ್ಕಿಸಲು ಕೋರಿದೆ.
ಸೆ.18 ಭಾನುವಾರದಂದು ಪುಟ್ಬಾಲ್ ಪಂದ್ಯವು ಕಾರವಾರದ ಮಾಲಾದೇವಿ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಹೆಚ್ಚಿನ ವಿವರಗಳಿಗೆ ಪದವಿ ಪೂರ್ವ ಕಾಲೇಜು ಸಿದ್ದರ ಕಾರವಾರದ ಪ್ರಾಂಶುಪಾಲ ಜಿ.ಪಿ.ನಾಯ್ಕ್( 9448628625) ಸಂಪರ್ಕಿಸಲು ಕೋರಿದೆ.
ಸೆ.19 ಸೋಮವಾರದಂದು ಶಿರಸಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ವಿಭಾಗದ ಎಲ್ಲಾ ಸ್ಪರ್ಧೆಗಳು ಹಾಗೂ ವಾಲಿಬಾಲ್,ಖೋ-ಖೋ, ಬಾಸ್ಕೆಟ್ ಬಾಲ್,ಬ್ಯಾಡ್ಮಿಂಟನ್, ಹಾಕಿ,ಹ್ಯಾಂಡ್ ಬಾಲ್,ಟೇಬಲ್ ಟೆನ್ನಿಸ್,ಥ್ರೋಬಾಲ್,ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆ ನಡೆಯಲಿದ್ದು ಮಾಹಿತಿಗಾಗಿ ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ಕಿರಣ್ ನಾಯ್ಕ್ ಇವರನ್ನು ಸಂಪರ್ಕಿಸಲು ಕೋರಿದೆ.
ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಇಲಾಖಾ ವತಿಯಿಂದ ನಡೆಸುವ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವೈಯಕ್ತಿಕ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಮಾತ್ರ ಜಿಲ್ಲಾ ಮಟ್ಟದಲ್ಲಿ ಸೂಚಿಸಿದ ಸ್ಥಳಗಳಲ್ಲಿ ಬೆಳಿಗ್ಗೆ 9 ಗಂಟೆ ಸರಿಯಾಗಿ ವರದಿ ಮಾಡಿಕೊಂಡು, ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.