• first
    second
    third
    previous arrow
    next arrow
  • ಪ್ರತಿಭಾ ಕಾರಂಜಿ:ಚಂದನ ವಿದ್ಯಾರ್ಥಿಗಳ ಸಾಧನೆ

    300x250 AD

    ಶಿರಸಿ:ಶಿರಸಿ ನಗರ ಪಶ್ಚಿಮ ವಲಯ ಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿಯಲ್ಲಿ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

    10 ನೇ ವರ್ಗದ ಸಂಪ್ರೀತಾ ಎನ್. (ಇಂಗ್ಲೀಷ್ ಭಾಷಣ), 8ನೇ ವರ್ಗದ ಪ್ರತ್ಯುಷಾ ಹೆಗಡೆ (ಹಿಂದಿ ಭಾಷಣ), 10ನೇ ವರ್ಗದ ಪ್ರಥಮ್ ಯು. ಎನ್. (ಭಾವ ಗೀತೆ), 9ನೇ ವರ್ಗದ ನಿಖಿತಾ ಭಟ್ (ಚರ್ಚಾ ಸ್ಪರ್ಧೆ), 9ನೇ ವರ್ಗದ ಸಮೀಕ್ಷಾ ಹೆಗಡೆ (ರಂಗೋಲಿ), 9ನೇ ವರ್ಗದ ಪ್ರತೀಕ್ಷಾ ಭಟ್(ಭಾಷಣ) ಸ್ಫರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
    9 ನೇ ವರ್ಗದ ಹೇಮಂತ್ ಹೆಗಡೆ (ಸಂಸ್ಕೃತ ಭಾಷಣ), 9ನೇ ವರ್ಗದ ಅಪೂರ್ವ ಹೆಗಡೆ (ಸಂಸ್ಕೃತ ಧಾರ್ಮಿಕ ಪಠಣ) ಸ್ಫರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 8ನೇ ವರ್ಗದ ವಸುಂಧರಾ ಹೆಗಡೆ (ಜನಪದ ಗೀತೆ), 8ನೇ ವರ್ಗದ ಟಿ.ಡಿ ಸಂಜನಾ (ಛದ್ಮವೇಷ),8ನೇ ವರ್ಗದ ಗೌತಮಿ ಹೆಗಡೆ (ಮಿಮಿಕ್ರಿ),10ನೇ ವರ್ಗದ ನಮನ್ ಹೆಗಡೆ, ಅನಘ್ ಹೆಗಡೆ (ಕ್ವಿಜ್) ಸ್ಫರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಶಿಕ್ಷಕ ವೃಂದ,ವಿದ್ಯಾರ್ಥಿಗಳು ಮತ್ತು ಪಾಲಕರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top