Slide
Slide
Slide
previous arrow
next arrow

ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿವೇತನ ವಿತರಣೆ

300x250 AD

ಹೊನ್ನಾವರ: ಪಟ್ಟಣದ ರೋಟರಿ ಭವನದಲ್ಲಿ ವಿದ್ಯಾರ್ಥಿಗಳಿಗೆ ಇಂಟರಾಕ್ಟ್ ಕ್ಲಬ್ ಇನ್ಸ್ಟಾಲೇಷನ್ ಮತ್ತು ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಪ್ರಾಸ್ತಾವಿಕವಾಗಿ ಅಥಿತಿಗಳನ್ನು ಸ್ವಾಗತಿಸಿ ಮಾತನಾಡಿದ ರೋಟರಿ ಅಧ್ಯಕ್ಷ ಮಹೇಶ ಕಲ್ಯಾಣಪುರ, ಪ್ರತಿಯೊಂದು ಶಾಲೆಗಳಲ್ಲಿ ಇಂದಿನಿಂದ ಪ್ರಾರಂಭವಾಗುವ ಇಂಟರಾಕ್ಟ್ ಕ್ಲಬ್‌ಗಳಲ್ಲಿ ಹೆಣ್ಣುಮಕ್ಕಳ ಸಬಲೀಕರಣ, ಸಾಮಾಜಿಕ ಜಾಲತಾಣಗಳ ನಿರ್ವಹಣೆ, ವ್ಯಕ್ತಿತ್ವ ಅಭಿವೃದ್ಧಿ, ಸಾರ್ವಜನಿಕ ಸೇವಾ ಯೋಜನೆಗಾಗಿ ವಿಭಾಗಗಳನ್ನು ಮಾಡಿ, ವಿಧ್ಯಾಭ್ಯಾಸದ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಸಲಹೆಯನ್ನು ನೀಡಿದರು.

ಪ್ರತಿ ವರ್ಷ ನ.1ರಿಂದ ನ.7ರವರೆಗೆ ‘ವಿಶ್ವ ಇಂಟರಾಕ್ಟ್ ವೀಕ್’ ಎಂದು ಆಚರಿಸಲಾಗುತ್ತಿದೆ. ಹೊನ್ನಾವರದಲ್ಲಿರುವ 14 ಇಂರ‍್ಯಾಕ್ಟ್ ಕ್ಲಬ್ ತಮ್ಮ ಶಾಲೆಗಳಲ್ಲಿ ವಿಶ್ವ ಇಂಟರಾಕ್ಟ್ ವೀಕ್ ಆಚರಿಸಿ ತಾವು ತಯಾರಿಸಿದ ಯೋಜನಾಕಾರ್ಯಗಳ ವಿಡಿಯೋ ಚಿತ್ರಿಕರಣಗಳನ್ನು ಮಾಡಿ ನಮಗೆ ಕಳುಹಿಸಿದ್ದಲ್ಲಿ ಅದನ್ನು ರೋಟರಿ ಇಂಟರ್‌ನ್ಯಾಶನಲ್‌ನಲ್ಲಿ ಜರಗುವ ಸ್ಪರ್ಧೆಗೆ ಕಳುಹಿಸಲಾಗುವುದು. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿಯ ಜೋತೆಗೆ 1000 ಡಾಲರ್ ಬಹುಮಾನ ಗೆಲ್ಲುವ ಅವಕಾಶವಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಹುರಿದುಂಬಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಮಾತನಾಡಿ, ವರ್ಷವಿಡಿ ಶಾಲೆಗಳಲ್ಲಿ ಹಲವಾರು ಕಾರ್ಯಕ್ರಮಗಳು ಆಯೋಜಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ರೋಟರಿ ಕ್ಲಬ್ ವತಿಯಿಂದ ಶಾಲೆಗಳಿಗೆ ಬೇಕಾಗುವ ಸಾಮಗ್ರಿಗಳ ಪೋರೈಕೆ ಮಾಡುವುದರ ಜೊತೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದವರಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುವಂತಹ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು.

300x250 AD

ಇವೆಂಟ್ ಚೇರ್ಮನ್ ಸತೀಶ್ ಭಟ್ ಮಾತನಾಡಿ, ಕಾರ್ಯಕ್ರಮದ ಮುಖ್ಯ ಭಾಗವಾಗಿ ದಿ.ಎಂ.ಎನ್.ಪ್ರಭುರವರ ಸ್ಮರಣಾರ್ಥ ಎಲ್ಲಾ ರೋಟರಿ ಪರಿವಾರದವರು ಸೇರಿ ತಮ್ಮ ವ್ಯಯಕ್ತಿಕ ಸಹಕಾರದಿಂದ ದೇಣಿಗೆಯನ್ನು ಸಂಗ್ರಹಿಸಿ ಪ್ರತಿ ವರ್ಷ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿವೇತನವನ್ನು ನಿಡುತ್ತಾ ಬಂದಿರುತ್ತೇವೆ. ಈ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ 24 ವಿಧ್ಯಾರ್ಥಿಗಳಿಗೆ ಪ್ರಮಾಣಪತ್ರದ ಜೋತೆಗೆ ವಿಧ್ಯಾರ್ಥಿವೇತನವನ್ನು ನೀಡಿ ಪ್ರೋತ್ಸಾಹಿಸಿ ಅವರ ಉಜ್ವಲ ಭವಿಷ್ಯಕ್ಕಾಗಿ ಶುಭಕೋರಿದರು.

ದಿನೇಶ ಕಾಮತರವರು ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಡಾ.ಗಾಯತ್ರಿ ಗುನಗಾ ವಂದನಾರ್ಪಣೆ ನೆರವೇರಿಸಿದರು. ಸಭೆಯಲ್ಲಿ ಗಣೆಶ ಹೆಬ್ಬಾರ, ಸ್ಟಿಫನ್ ರೊಡ್ರಗೀಸ್, ಜಿ.ಪಿ.ಹೆಗಡೆ, ನಸ್ರುಲ್ಲಾ ಸಿದ್ದಿ, ಡಾ.ರಂಗನಾಥ ಪೂಜಾರಿ, ಡಾ.ಕಿರಣ ಬಳ್ಕೂರ, ಪ್ರತಿಭಾ ಬಳ್ಕೂರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಇನ್ಸ್ಟಾಲೇಷನ್ ಆಫೀಸರ್ ಆಗಿ ಆಗಮಿಸಿದ್ದ ಇಂರ‍್ಯಾಕ್ಟ್ ಕರ್ನಾಟಕ ಡಿಸಿಸಿ ಯುಥ್ ಅಂಡ್ ಪಾರ್ಟ್ನರ್ ಇನ್ ಸರ್ವಿಸ್ ಕಿರಣ ಹಿರೇಮಠ, ಮುಖ್ಯ ಅಥಿತಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಅಥಿತಿಗಳಾಗಿ ಯುವಜನಾ ಸೇವಾ ಮತ್ತು ಕ್ರೀಡಾಧಿಕಾರಿ ಸುದೇಶ ನಾಯ್ಕ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top