ಸಿದ್ದಾಪುರ: ಗಣೇಶ ಚತುರ್ಥಿಯ ಕೊನೆಯ ದಿನವಾದ ಅನಂತ ಚತುರ್ದಶಿಯ ದಿನದಂದು ಶ್ರೀವಿಷ್ಣು ಅನಂತಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ತಾಳಿದನು ಎನ್ನುವ ನಂಬಿಕೆಯಿದೆ. ಭಕ್ತರ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತಾನೆ. ಹಾಗಾಗಿ ಅನಂತ ನೋಪಿ ವ್ರತ ಅತ್ಯಂತ ವಿಶಿಷ್ಟವಾದದ್ದು. ಅನಂತಪದ್ಮನಾಭ ಮಹಿಮೆ ವಿಶಿಷ್ಟವಾದದ್ದು ಎಂದು ನಿವೃತ್ತ ಹಿಂದುಳಿದ ವರ್ಗಗಳ ಹಾಗೂ ಸಮಾಜ ಕಲ್ಯಾಣ ಅಧಿಕಾರಿ ಡಿ.ವಿ.ಶೇಟ್ ಹೇಳಿದರು.
ಅವರು ಪಟ್ಟಣದ ಶ್ರೀಲಕ್ಷ್ಮೀನಾರಾಯಣ ದೇವಾಲಯದಲ್ಲಿ ನಡೆದ 48ನೇ ಗಣೇಶೋತ್ಸವ, ಅನಂತನೋಪಿ ಪುಷ್ಪಾಲಂಕಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಭಾವೇದಿಕೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾಜದ ಅಧ್ಯಕ್ಷ ಶಾಂತರಾಮ್ ವಿ.ಶೇಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಕ್ಷತಾ ಸಂಗಡಿಗರು ಪ್ರಾರ್ಥನಾಗೀತೆ ಹಾಡಿದರು. ಯುವಕ ಸಂಘದ ಅಧ್ಯಕ್ಷ ಪ್ರಶಾಂತ್ ಶೇಟ್ ಸ್ವಾಗತಿಸಿದರು. ಯುವಕ ಸಂಘದ ಉಪಾಧ್ಯಕ್ಷ ಮಹೇಶ್ ವಿ.ಶೇಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಮಾಜದ ಪ್ರಧಾನ ಕಾರ್ಯದರ್ಶಿ ರಮೇಶ ಕೆ.ರಾಯ್ಕರ್, ಸುವರ್ಣ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಆತ್ಮಾರಾಮ ಎಸ್.ಅಣ್ವೇಕರ್, ರಾಜರಾಜೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷ ವಿಜಯಾ ರಾಯ್ಕರ್, ವಿದ್ಯಾ ಪ್ರೋತ್ಸಾಹಕ ಸಮಿತಿಯ ಅಧ್ಯಕ್ಷ ಸಾಯಿನಾಥ್ ಅಣ್ವೇಕರ್ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಗಣೇಶೋತ್ಸವದ ಅಂಗವಾಗಿ ನಡೆದ ಚಿತ್ರಕಲಾ ಸ್ಪರ್ಧೆ, ಹೂವಿನಹಾರ, ಆರತಿತಾಟ್ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವಧನ ನೀಡಿ ಸತ್ಕರಿಸಲಾಯಿತು. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿಪ್ರಥಮ ಸ್ಥಾನಗಳಿಸಿದ ಸಿದ್ದಾಪುರದ ರಾಜರಾಜೇಶ್ವರಿ ಮಹಿಳಾ ಮಂಡಳಿಯ ನೃತ್ಯ ತಂಡದವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಹೆಗ್ಗರಣಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ರಾಘವೇಂದ್ರ ಆರ್.ರಾಯ್ಕರ್, ಸೋಮಿನಕೊಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ಗಿರೀಶ್‌ಕುಮಾರ್ ವಿ.ಆಲ್ಮನೆ, ಬಾಲವಿಜ್ಞಾನಿ ರಜತ್ ಶೇಟ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸೇರ್ಪಡೆಯಾದ ಬಾಲಪ್ರತಿಭೆ ತ್ರಿಷಿಕಾ ಶೇಟ್ ಮತ್ತು ಸಮಾಜದ ಹಿರಿಯರಾದ ನರಸಿಂಹ ಎಂ.ಶೇಟ್ ಅವರನ್ನು ಸಮಾಜದ ವತಿಯಿಂದ ಸತ್ಕರಿಸಲಾಯಿತು.