Slide
Slide
Slide
previous arrow
next arrow

ಲಯನ್ಸ್ ಕ್ಲಬ್’ನಿಂದ ಹಿಂದಿ ದಿವಸ ಆಚರಣೆ

300x250 AD

ಕಾರವಾರ: ಲಯನ್ಸ್ ಕ್ಲಬ್ ಸದಾಶಿವಗಡ ಹಾಗೂ ಶಿವಾಜಿ ವಿದ್ಯಾಮಂದಿರ ಅಸ್ನೋಟಿ ಇವರ ಸಹಯೋಗದಲ್ಲಿ ಹಿಂದಿ ದಿವಸ ಆಚರಣೆ ಮಾಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ತಬಸಮ್ ಮುಖಾದಮ್, ಹಿಂದಿ ಸುಂದರ ಭಾಷೆ. ಇದನ್ನು ಕಲಿಯುವುದರ ಮೂಲಕ ಉತ್ತಮ ಸಾಹಿತ್ಯವನ್ನು ಗ್ರಹಿಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಪ್ರಾಯೋಜಕ ಡಾ.ಸಂದೀಪ್ ಅಣ್ವೇಕರ, ಮಕ್ಕಳು ಎಲ್ಲಾ ಭಾಷೆಗಳನ್ನು ತಿಳಿದು ಆ ಭಾಷೆಯ ಮಹತ್ವವನ್ನು ಅರ್ಥೈಸಿಕೊಳ್ಳಲು ಯತ್ನಿಸಬೇಕು ಎಂದು ಹೇಳುವದರ ಮೂಲಕ ಹಿಂದಿ ದೇಶಭಕ್ತಿ ಗೀತೆ ಹಾಡಿ ಎಲ್ಲರ ಮನಸೂರೆಗೊಳಿಸಿದರು.

300x250 AD

ಶಾಲಾ ಮುಖ್ಯಾಧ್ಯಾಪಕ ದಿನೇಶ ಗಾಂವಕರ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಮಹತ್ವವನ್ನು ತಿಳಿಸಿ ಶುಭಕೋರಿದರು. ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಹಿಂದಿ ದೇಶಭಕ್ತಿ ಗೀತೆಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಅದರಲ್ಲಿ ರಕ್ಷೀತಾ ಮಿರಾಶಿ ಪ್ರಥಮ, ಶಶಾಂಕ ಪರವಾರ ದ್ವೀತಿಯ, ಸಂಜನಾ ಪಡವಳಕರ ತೃತೀಯ ಸ್ಥಾನ ಪಡೆದರು.

ರಕ್ಷಿತಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಲಯನ ಗಣೇಶ ಬಿಷ್ಟಣ್ಣನವರ ಸ್ವಾಗತಿಸಿ, ನಿರೂಪಿಸಿದರು. ವೇದಿಕೆಯ ಮೇಲೆ ಶಿಕ್ಷಕರಾದ ವಿಜಯಕುಮಾರ್ ನಾಯ್ಕ, ಶರತ್ ಗಾಂವಕರ, ಸಂತೋಷ ಕಾಂಬಳೆ, ಜೆ.ಬಿ.ತಿಪ್ಪೇಸ್ವಾಮಿ, ರೂಪಾಲಿ ಸಾವಂತ, ಮಹದೇವ ಅಸ್ನೋಟಿಕರ ಪ್ರಶಿಕ್ಷಣಾರ್ಥಿ ರಾಜಲಕ್ಷ್ಮಿ ಪರವಾರ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top