ಸಿದ್ದಾಪುರ: ಆಡಳಿತ ಪಕ್ಷದ ಮೇಲೆ ಯಾವುದೇ ಆಧಾರಗಳಿಲ್ಲದೆ ವಿರೋಧ ಪಕ್ಷದ ನಾಯಕರು ಮಾಡುತ್ತಿರುವ ಟೀಕೆಗಳನ್ನು ಗಮನಿಸಿದಾಗ, ಒಂದು ವಿರೋಧ ಪಕ್ಷವು ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಕನಿಷ್ಠ ಜ್ಞಾನವು ಕಾಂಗ್ರೆಸ್ಸಿಗಿಲ್ಲ. ಟೀಕೆ ಹೆಸರಿನಲ್ಲಿ ವೈಯಕ್ತಿಕ ವಿಚಾರಗಳು ಇಂದು ಚರ್ಚೆಗೆ ಬರುತ್ತಿವೆ. ಪ್ರಜಾಪ್ರಭುತ್ವ ದೃಷ್ಟಿಯಿಂದ ಇದು ಆರೋಗ್ಯಕರವಾದ ಬೆಳವಣಿಗೆಯಲ್ಲ. ಇಂದು ಭಾರತ್ ಜೋಡೋ ಎಂಬ ಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷವು, ಸ್ವಾತಂತ್ರ‍್ಯ ಬಂದ ಮೇಲೆ ಈ ದೇಶವನ್ನು ಒಡೆದು ಇಬ್ಭಾಗವಾಗಿ ಮಾಡಿದೆ. ಇಂದು ಈ ದೇಶವನ್ನು ಜೋಡಿಸುತ್ತೇವೆ ಎಂಬ ವಿಪರ್ಯಾಸದ ಮಾತನ್ನು ಹೇಳುತ್ತಿದೆ ಎಂದು ಬಿಜೆಪಿ ವಿಭಾಗ ಪ್ರಭಾರಿ ಗಿರೀಶ್ ಪಟೇಲ್ ಹೇಳಿದರು.
ಅವರು ಪಟ್ಟಣದ ಬಾಲಭವನದಲ್ಲಿ ನಡೆದ ಬಿಜೆಪಿ ಸಿದ್ದಾಪುರ ಮಂಡಲ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಒಂದು ರಾಜಕೀಯ ಪಕ್ಷದ ಕೆಲಸ ಕೇವಲ ರಾಜಕೀಯ ಮಾಡುವುದಾಗಲಿ ಅಥವಾ ಅಭಿವೃದ್ಧಿ ಅಷ್ಟೇ ಅಲ್ಲ. ಅದನ್ನು ಸೇವಾ ಭಾಗವಾಗಿ ಸಹ ಮಾಡಬೇಕಾಗುತ್ತದೆ. ಸೇವೆಯು ರಾಜಕೀಯ ಪಕ್ಷಗಳ ಒಂದು ಅಂಗ ಅದನ್ನು ಬಿಜೆಪಿ ಪಕ್ಷ ಮಾಡುತ್ತಿದೆ.ಪ್ರಾಕೃತಿಕ ವಿಕೋಪಗಳು ಎದುರಿಸುತ್ತಿರುವ ಈ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸೂಕ್ತ ಸಲಹೆಗಳನ್ನು ನೀಡುವ ಜೊತೆಗೆ ಆಡಳಿತ ಪಕ್ಷದವರ ಜೊತೆ ಕೈಜೋಡಿಸುವ ಕೆಲಸ ಮಾಡಬೇಕು. ಇದನ್ನು ಬಿಟ್ಟು ಕೇವಲ ಆಪಾದನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಇದರಿಂದ ವಿಫಲವಾಗಿದೆ. ಸರ್ಕಾರ ಇಂತಹ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ಜನರಿಗೆ ಉತ್ತಮ ಸೇವೆ, ಅಭಿವೃದ್ದಿ ಕೆಲಸ ಗಳನ್ನು ಮಾಡುವ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ನೀಡುತ್ತಿವೆ ಎಂದರು.
ಸರ್ವಾಂಗೀಣ ಅಭಿವೃದ್ಧಿ ಎಂದರೆ ಜನರಿಗೆ ಬೇಕಾಗುವ ಅವಶ್ಯಕತೆ ಪೂರೈಕೆ ಅಷ್ಟೇ ಅಲ್ಲ. ಒಂದು ವ್ಯಕ್ತಿಯ ವಿಕಾಸವನ್ನು ಮಾಡುವಂತದ್ದು ಸಹ ಆಗಿರುತ್ತದೆ. ಇದನ್ನು ಬಿಜೆಪಿ ತನ್ನ ಆದ್ಯತೆಯ ಕೆಲಸವಾಗಿ ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಹಿತವನ್ನು ಕಣ್ಮುಂದೆ ಇಟ್ಟುಕೊಂಡು ದೊಡ್ಡ ಮಟ್ಟದ ಅಭಿವೃದ್ಧಿ ಕೆಲಸಗಳನ್ನು ಇಂದು ಮಾಡುತ್ತಿವೆ. ಇಂದು ಭಾರತ್ ಜೋಡೋ ಎಂಬ ಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷವು, ಸ್ವಾತಂತ್ರ‍್ಯ ಬಂದ ಮೇಲೆ ಈ ದೇಶವನ್ನು ಒಡೆದು ಇಬ್ಭಾಗವಾಗಿ ಮಾಡಿದೆ. ಇಂದು ಈ ದೇಶವನ್ನು ಜೋಡಿಸುತ್ತೇವೆ ಎಂಬ ವಿಪರ್ಯಾಸದ ಮಾತನ್ನು ಹೇಳುತ್ತಿದೆ. ಆಡಳಿತ ಪಕ್ಷದ ಮೇಲೆ ಯಾವುದೇ ಆಧಾರಗಳಿಲ್ಲದೆ ವಿರೋಧ ಪಕ್ಷದ ನಾಯಕರು ಮಾಡುತ್ತಿರುವ ಟೀಕೆಗಳನ್ನು ಗಮನಿಸಿದಾಗ, ಒಂದು ವಿರೋಧ ಪಕ್ಷವು ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಕನಿಷ್ಠ ಜ್ಞಾನವು ಕಾಂಗ್ರೆಸ್ಸಿಗಿಲ್ಲ. ಟೀಕೆ ಹೆಸರಿನಲ್ಲಿ ವೈಯಕ್ತಿಕ ವಿಚಾರಗಳು ಇಂದು ಚರ್ಚೆಗೆ ಬರುತ್ತಿವೆ. ಪ್ರಜಾಪ್ರಭುತ್ವ ದೃಷ್ಟಿಯಿಂದ ಇದು ಆರೋಗ್ಯಕರವಾದ ಬೆಳವಣಿಗೆಯಲ್ಲ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಡಲ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ, ಸೇವಾ ಪಾಕ್ಷಿಕ ನಿಮಿತ್ತ ಮಂಡಲದ ವತಿಯಿಂದ ಹಮ್ಮಿಕೊಳ್ಳಲಿರುವ ವಿವಿಧ ಸೇವಾ ಚಟುವಟಿಕೆಗಳ ವಿವರವನ್ನು ನೀಡಿ, ಅವುಗಳ ಜವಾಬ್ದಾರಿಯನ್ನು ಈ ಸಂದರ್ಭದಲ್ಲಿ ಹಂಚಿಕೆ ಮಾಡಿದರು.
ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಕೆ.ಮೇಸ್ತ ಸ್ವಾಗತಿಸಿದರು. ಪ್ರಸನ್ನ ಹೆಗಡೆ ವಂದಿಸಿದರು. ವೇದಿಕೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ, ಹಣಜೀಬೈಲ್, ಪಟ್ಟಣ ಪಂಚಾಯತ ಅಧ್ಯಕ್ಷೆ ಚಂದ್ರಕಲಾ ಸುರೇಶ್ ನಾಯ್ಕ, ಮಂಡಲ ಪ್ರಭಾರಿ ಕುಮಾರ್ ಮಾರ್ಕಂಡೆ, ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ ಕಡಕೇರಿ ಇದ್ದರು.