Slide
Slide
Slide
previous arrow
next arrow

ಮೃತ ಮಹಿಳೆಯ ಮಾಹಿತಿ ಸಿಕ್ಕಲ್ಲಿ ನೀಡಲು ಸೂಚನೆ

300x250 AD

ಕಾರವಾರ: ಸುಮಾರು 35-40 ವರ್ಷ ಪ್ರಾಯದ ಅಪರಿಚಿತ ಮಹಿಳೆ ಸೆ.13ರಂದು 3.45 ಗಂಟೆಯಿAದ 3.50 ಗಂಟೆಯ ನಡುವಿನ ಅವಧಿಯಲ್ಲಿ ಟ್ರೇನ್ ನಂಬರ್ 6601ಗೆ ಕಾರವಾರ ತಾಲೂಕಿನ ಕಡವಾಡ, ಮಾಡಿಬಾಗ ಕೊಂಕಣ ರೇಲ್ವೆ ಬ್ರಿಡ್ಜ್ ಮಧ್ಯದ 496/4ರಿಂದ 496/5 ಕಿ.ಮೀಟರ್ ಹತ್ತಿರ ತಲುಪಿದ ವೇಳೆಯಲ್ಲಿ ಸದರಿ ರೈಲ್ವೆಯಿಂದ ಒಬ್ಬ ಅಪರಿಚಿತ ಹೆಂಗಸು ರೈಲ್ವೆಯಿಂದ ಹಾರಿ ಅಥವಾ ಆಕಸ್ಮಾತ್ ಕಾಲು ಜಾರಿ ಕೆಳಕ್ಕೆ ರೈಲ್ವೆ ಹಳಿಯ ಪಕ್ಕದಲ್ಲಿ ಬಿದ್ದು ತಲೆಗೆ ಭಾರಿ ಗಾಯವಾಗಿ ಮರಣಪಟ್ಟ ಬಗ್ಗೆ ಇತ್ಯಾದಿಯಾಗಿ, ಗ್ರಾಮೀಣ ಪೊಲೀಸ್ ಠಾಣಾ ಯು.ಡಿ.ಆರ್.ನಂ 18/2022 ಕಲಂ 174 ಸಿಆರ್‌ಪಿಸಿ ಪ್ರಕರಣ ದಾಖಲು ಮಾಡಿ ತನಿಖೆ ಹಾಗೂ ಸಂಬಂಧಿಕರ ಪತ್ತೆ ಕಾರ್ಯ ಕೈಗೊಂಡಿದ್ದಾರೆ.

ಮೃತ ಮಹಿಳೆಯು ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, 4 ಅಡಿ 10 ಅಂಗುಲ ಎತ್ತರ, ಕಪ್ಪು- ಬಿಳಿ ಬಣ್ಣದ ಟಾಪ್ ಹಾಗೂ ಬಿಳಿ ಬಣ್ಣದ ಲೆಗ್ಗಿನ್ಸ್ ಧರಿಸಿರುತ್ತಾಳೆ. ಈ ಮೃತ ಅಪರಿಚಿತ ಮಹಿಳೆಯ ಹೆಸರು, ವಿಳಾಸ, ರಕ್ತ ಸಂಬಂಧಿಕರ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದಲ್ಲಿ ಗ್ರಾಮೀಣ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ: 08382222443, 9480805262, ಜಿಲ್ಲಾ ಪೊಲೀಸ್ ನಿಯಂತ್ರಕರ ಕೊಠಡಿ ದೂರವಾಣಿ ಸಂಖ್ಯೆ: 08382226550 ಗೆ ಸಂಪರ್ಕಿಸಬಹುದು ಎಂದು ಗ್ರಾಮೀಣ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top