• first
  second
  third
  previous arrow
  next arrow
 • ಕನ್ನಡ ನಿಂತ ನೀರಲ್ಲ,ನಿರಂತರ ಹರಿಯುವ ಪರಿಶುದ್ಧ ಜಲ: ರಾಧಾ ಹಿರೇಗೌಡರ್

  300x250 AD

  ಕುಮಟಾ: ಪಟ್ಟಣದ ನಾಮಧಾರಿ ಸಭಾ ಭವನದಲ್ಲಿ ಕುಮಟಾ ಕನ್ನಡ ಸಂಘ ಆಯೋಜಿಸಿದ್ದ ‘ಸಂವಾದ’ ಆಧುನಿಕ ಬದುಕು ಮತ್ತು ಕನ್ನಡದ ಕಡೆಗಣನೆ ಹಾಗೂ ‘ಗೌರವಾರ್ಪಣೆ’ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪತ್ರಕರ್ತೆ ಶ್ರೀಮತಿ ರಾಧಾ ಹಿರೇಗೌಡರ್ ಮಾತನಾಡಿ, ಕನ್ನಡ ಭಾಷೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ನಿಂತ ನೀರಲ್ಲ. ಅದು ನಿರಂತರ ಹರಿಯುವ ಪರಿಶುದ್ಧ ಜಲ. ತಾಯಿಯನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.

  ಭಾಷೆ, ಜಲ, ನೆಲದ ಬಗ್ಗೆ ಸ್ವಾಭಿಮಾನ ಇರಬೇಕು. ಆದಾಗ ಮಾತ್ರ ನಿರೀಕ್ಷಿತ ಪ್ರಗತಿ ಸಾಧ್ಯ. ತ್ಯಾಗದ ಹಿನ್ನಲೆಯುಳ್ಳ ಜಿಲ್ಲೆಯಲ್ಲಿ ಇಷ್ಟೊಂದು ಆಧುನಿಕತೆ ಬೆಳೆದರೂ ಜಿಲ್ಲೆಯಲ್ಲೊಂದು ವಿಶ್ವ ವಿದ್ಯಾಲಯವಿಲ್ಲ. ತುರ್ತು ಜೀವ ಉಳಿಸಬೇಕೆಂದರೆ ಸೂಪರ್ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆ ಇಲ್ಲ. ಜನರು ಹಲವು ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅರ್ಹತೆಗೆ ತಕ್ಕಂತೆ ವೇತನ ಪಡೆಯುತ್ತಾರೆ. ಆದರೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸದಿದ್ದರೆ ಜನರಿಂದ ಮನ್ನಣೆ ಪಡೆಯಲು ಸಾಧ್ಯವಿಲ್ಲ ಎಂದರು.

  ಕೆಡಿಸಿಸಿ ಬ್ಯಾಂಕ ನಿರ್ದೇಶಕ ಶಿವಾನಂದ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡದ ನಿರಂತರ ಚಟುವಟಿಕೆಗಳಿಂದ ಭಾಷೆ ಬೆಳೆಸಬಹುದು. ಕನ್ನಡವೇ ಎಲ್ಲೆಲ್ಲೂ ಹರಿದಾಡಬೇಕು. ಕನ್ನಡ ಭಾಷೆ ಕಡೆಗಣನೆ ಸಲ್ಲದು. ಕನ್ನಡ ಭಾಷೆ ಇನ್ನಷ್ಟು ಎತ್ತರಕ್ಕೆ ಬೆಳೆಸಲು ಕನ್ನಡ ಪರ ಸಂಘಟನೆಗಳು ಇನ್ನಷ್ಟು ಸಕ್ರಿಯಗೊಳ್ಳಬೇಕು. ಈ ನಿಟ್ಟಿನಲ್ಲಿ ಕುಮಟಾ ಕನ್ನಡ ಸಂಘ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

  300x250 AD

  ಬೆಳಕು ಗ್ರಾಮೀಣಾಭಿವ್ರದ್ಧಿ ಟ್ರಸ್ಟ ಅಧ್ಯಕ್ಷ ನಾಗರಾಜ ನಾಯಕ ಸೂಪರ್ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆಗೆ ನನ್ನೆಲ್ಲ ಸಹಕಾರವಿದೆ ಎಂದರು. ನ್ಯಾಯವಾದಿ ಆರ್ ಜಿ ನಾಯ್ಕ ಮಾತನಾಡಿ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಆಸ್ಪತ್ರೆ ನಿರ್ಮಾಣಕ್ಕೆ ಹಿನ್ನಡೆಯಾಗುತ್ತಿದೆ. ಹೀಗಾಗಿ ಅಕ್ಟೋಬರ ತಿಂಗಳಲ್ಲಿ 15 ಸಾವಿರ ಜನರನ್ನು ಸೇರಿಸಿ ಮಾಡು ಇಲ್ಲವೆ ಮಡಿ ಹೋರಾಟ ಹಮ್ಮಿಕೊಳ್ಳಲಿವೆ ಎಂದರು.

  ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಆರ್ ಎನ್ ಹೆಗಡೆ ಆಶಯ ನುಡಿಗಳನ್ನಾಡಿದರು. ಕನ್ನಡ ರಕ್ಷಣಾ ವೇದಿಕೆ ಸ್ವಾಭಿಮಾನ ಬಳಗದ ಅಧ್ಯಕ್ಷ ರಾಜು ಮಾಸ್ತಿಹಳ್ಳ , ಕುಮಟಾ ಕನ್ನಡ ಸಂಘದ ಪದಾಧಿಕಾರಿಗಳು, ಸದಸ್ಯರು ಇನ್ನಿತರರು ಇದ್ದರು. ಪ್ರಶಾಂತ ಹೆಗಡೆ ಮೂಡಲಮನೆ ನಿರೂಪಿಸಿದರು. ಸಂಘದ ಕಾರ್ಯದರ್ಶಿ ದಯಾನಂದ ದೇಶಭಂಡಾರಿ ಸ್ವಾಗತಿಸಿದರು. ಕುಮಟಾ ಕನ್ನಡ ಸಂಘದ ಉಪಾಧ್ಯಕ್ಷ ಮಂಗಲದಾಸ ನಾಯ್ಕ, ಶ್ರೀಲಕ್ಷ್ಮಿ ಭಟ್ಟ ಸಂಗಡಿಗರು ಪ್ರಾರ್ಥಿಸಿದರು.

  Share This
  300x250 AD
  300x250 AD
  300x250 AD
  Back to top