ಶಿರಸಿ :ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನತೆಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿವೆ. ಆರೋಗ್ಯಕಾರ್ಡ್ ನೀಡಿಕೆ ,ಯುಡಿಐಡಿಕಾರ್ಡ್, ಅಂಗವಿಕಲರ ಮಾಶಾಸನ, ರೈತರಿಗೆ ನೀಡುವಕಿಸಾನ್ ಸಮ್ಮಾನ್ ಗ್ರಾಮಒನ್ ಹೀಗೆ ಹತ್ತಾರು ಸೌಲಭ್ಯಗಳು ಕಲ್ಪಿಸುತ್ತಿದೆ. ಅರ್ಹ ಬಡಜನತೆಗೆ ಅಂಗವಿಕಲರಿಗೆ ಇಂತಹ ಸೌಲಭ್ಯ ತಲುಪಿಸಲು ಅಜಿತ ಮನೋಚೇತನ ಸಂಸ್ಥೆ ಶಿಬಿರ ಆಯೋಜನೆ ಮಾಡಿದ ಸಂಗತಿ ಶ್ಲಾಘನೀಯ ಎಂದು ಶಿರಸಿಯ ಗ್ರೇಡ್ 2 ತಹಶೀಲ್ದಾರ್ ರಮೇಶ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸೆ.14 ರಂದು ಬೆಳಿಗ್ಗೆ ನಗರದ ಮರಾಠಿಕೊಪ್ಪದ ಅಜಿತ ಮನೋಚೇತನ ವಿಕಾಸ ಶಾಲಾ ಆವರಣದಲ್ಲಿ ನಡೆದ ಅಂಗವಿಕಲರ ಸೌಲಭ್ಯ ನೀಡಿಕೆ ಸೇವಾ ಶಿಬಿರದಲ್ಲಿ ಮಾಹಿತಿ ನೀಡಿದರು.ಶಿಬಿರಕ್ಕೆ ಚಾಲನೆ ನೀಡಿದ ಮದ್ಯಪಾನ ಸಂಯಮ ಮಂಡಳಿಯ ಮಾಜಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಜನತೆಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ಪ್ರಜ್ಞಾವಂತರು, ಸಂಸ್ಥೆಗಳು ಮುಂದಾಗಬೇಕು. ಸರಿಯಾದ ಮಾಹಿತಿಯನ್ನು ಹಂಚುವ ಕೆಲಸ ಬಡವರಿಗೆ ದೊಡ್ಡ ಸಹಾಯ ಮಾಡಿದಂತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಂಗವಿಕಲರು, ವೃದ್ದರು, ಬಡಜನತೆಗೆ ಸರ್ಕಾರದ ಸೌಲಭ್ಯ ತಲುಪಿಸಲು ಸಾಮಾಜಿಕ ಕಾರ್ಯಕರ್ತರು , ಸಂಸ್ಥೆಗಳು ಮುಂದಾಗಬೇಕು .25 ವರ್ಷಗಳಲ್ಲಿ ಅಜಿತ ಮನೋಚೇತನ ಇಂತಹ ಶಿಬಿರಗಳನ್ನು ನಡೆಸುತ್ತಲೇ ಬಂದಿದೆ ಎಂದು ಅನಂತ ಹೆಗಡೆ ಅಶೀಸರ ಮಾಹಿತಿ ನೀಡಿದರು. ಗ್ರಾಮಒನ್ ಯೋಜನೆ ಹಳ್ಳಿ ಹಳ್ಳಿಗೆ ತಲುಪಬೇಕು ಎಂದು ಜೀವ ವೈವಿಧ್ಯ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಆಶಯ ವ್ಯಕ್ತಪಡಿಸಿದರು.
ಸಂಸ್ಥೆ ಅಧ್ಯಕ್ಷ ಸುಧೀರ ಭಟ್ ಸ್ವಾಗತಿಸಿ, ಸಂಸ್ಥೆಯ 25 ನೇ ವರ್ಷದಲ್ಲಿಇಂತಹ 25 ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ ಎಂದರು. ಸಿ. ಡಿ .ಪಿ. ಒ ದತ್ತಾತ್ರೇಯ ಭಟ್, ಮಧ್ಯಪಾನ ಸಂಯಮ ಮಂಡಳಿಯ ಮಾಜಿ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, ಶಿರಸಿಯ ಗ್ರೇಡ್ 2 ತಹಶೀಲ್ದಾರ್ ರಮೇಶ ಹೆಗಡೆ ಮುಂತಾದವರು ಪಾಲ್ಗೊಂಡಿದ್ದರು. ಕಂದಾಯ ಇಲಾಖೆಯ ಗ್ರಾಮಒನ್ ಯೋಜನೆಯ ಶ್ರೀಮತಿ ಅನ್ನಪೂರ್ಣ ಭಟ್ ಬೈರುಂಬೆ, ಕಾರ್ಯಕ್ರಮದ ಸಂಯೋಜನೆ ಮಾಡಿದರು. ವಿಶೇಷ ಚೇತನ ಮಕ್ಕಳು ಪ್ರಾರ್ಥನೆ ಹಾಡಿದರು . ಮುಖ್ಯ ಶಿಕ್ಷಕಿ ನರ್ಮದಾ ಹೆಗಡೆ ವಂದಿಸಿದರು. ವಿಕಲಚೇತನ ಮಕ್ಕಳು , ಪಾಲಕರು ಸೇರಿದಂತೆ 120 ಕ್ಕೂ ಹೆಚ್ಚು ಜನ ಕಾರ್ಯಕ್ರಮದ ಪ್ರಯೋಜನ ಪಡೆದರು.
ಅಜಿತ ಮನೋಚೇತನದಲ್ಲಿ ಸೇವಾ ಸೌಲಭ್ಯ ಶಿಬಿರ ಯಶಸ್ವಿ
