ಯಲ್ಲಾಪುರ: ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘ ಕಳೆದ ಆರ್ಥಿಕ ಸಾಲಿನಲ್ಲಿ 40.60 ಲಕ್ಷ ರೂ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.
ಅವರು ಸಂಘದ ಆರ್ಥಿಕ ಚಟುವಟಿಕೆಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಸಂಘವು ಯಲ್ಲಾಪುರ ತಾಲೂಕಿಗೆ ಮಾತ್ರ ಸೀಮಿತವಾಗಿರದೇ ಅಂಕೋಲಾ,ಮುಂಡಗೋಡ,ಜೊಯಿಡಾ ಭಾಗದಲ್ಲೂ ಕೃಷಿಕ ಗ್ರಾಹಕರನ್ನು ಹೊಂದಿ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡಿದೆ. ಕೃಷಿ ಉಪಕರಣ, ಮಾರಾಟದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ ಎಂದರು.
ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಸೆ.15 ರಂದು ಮಧ್ಯಾಹ್ನ 3.30ಕ್ಕೆ ಅಡಕೆ ಭವನದಲ್ಲಿ ನಡೆಯಲಿದ್ದು 16 ಜನ ಹಿರಿಯ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದರು.
ಸಂಘದ ಉಪಾಧ್ಯಕ್ಷ ಎಂ.ಜಿ.ಭಟ್ಟ ಶೀಗೆಪಾಲ್, ನಿರ್ದೇಶಕರಾದ ಎಂ.ಆರ್.ಹೆಗಡೆ ತಾರೆಹಳ್ಳಿ, ಮಧುಕೇಶ್ವರ ಭಟ್ಟ, ರಾಘವೇಂದ್ರ ಭಟ್ ಕಳಚೆ, ವ್ಯವಸ್ಥಾಪಕ ವಿನಾಯಕ ಹೆಗಡೆ ಇದ್ದರು.