ಶಿರಸಿ: ಶಿರಸಿ ನಗರಸಭಾ ವ್ಯಾಪ್ತಿಯ 14 ನೇ ವಾರ್ಡ್ ಮುಸ್ಲಿಮ್ ಗಲ್ಲಿ 7 ನೇ ಮುಖ್ಯ ರಸ್ತೆಯು ನಟರಾಜ ರಸ್ತೆಗೆ ಸೇರುವ ಜಾಗದಲ್ಲಿ ಇಬ್ಬರು ರಸ್ತೆ ಬದಿಯ ವ್ಯಾಪಾರಿಗಳು ಇಟ್ಟುಕೊಂಡಿರುವ ಅ೦ಗಡಿಗಳಿಂದ ಈ ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗಿದ್ದು ಆ ಅ೦ಗಡಿಗಳನ್ನು ತಕ್ಷಣ ಅಲ್ಲಿಂದ ತೆರವು ಮಾಡಬೇಕೆಂದು ಆ ಭಾಗದ ಸಾರ್ವಜನಿಕರು ನಗರಸಭೆಗೆ ಮನವಿ ಸಲ್ಲಿಸಿದ್ದಾರೆ. ಮುಸ್ಲಿಮ್ ಗಲ್ಲಿ 7 ನೇ ರಸ್ತೆ ಹಾಗೂ ನಟರಾಜ ರಸ್ತೆ ಸೇರುವಲ್ಲಿ, ವಾಚು, ಟೊಪ್ಪಿ, ಬೆಲ್ಸ್, ಕನ್ನಡಕ ಇತ್ಯಾದಿ ಮಾರುವ ಎರಡು ಅಂಗಡಿ ಬಹುತೇಕ ರಸ್ತೆಯನ್ನು ವ್ಯಾಪಿಸಿಕೊಂಡಿದ್ದು ಇದರಿಂದ ಲಕ್ಷಾಂತರ ರೂ. ವ್ಯಯಿಸಿ ನಗರಸಭೆ ನಿರ್ಮಿಸಿದ ಈ ರಸ್ತೆ ಸಾರ್ವಜನಿಕ ಬಳಕೆಗೆ ಸಿಗದಂತಾಗಿದೆ. ನಿತ್ಯ ಬಾಡಿಗೆ ಆಧಾರದಲ್ಲಿ ನಗರಸಭೆಯಿಂದ ಪರವಾನಗಿ ಪಡೆದು ನಡೆಸಲಾಗುತ್ತಿರುವ ಈ ಅಂಗಡಿಗಳವರಿಗೆ ಸೂಕ್ತವಾದ ಬೇರೆ ಜಾಗ ಕಲ್ಪಿಸಿ ಆ ಅ೦ಗಡಿಗಳನ್ನು ಅಲ್ಲಿ೦ದ ತೆರವು ಮಾಡಿ ಸಾರ್ವಜನಿಕರಿಗೆ ಈ ರಸ್ತೆಯ ಪ್ರಯೋಜನ ಪಡೆಯಲು ಅನುವುಮಾಡಿಕೊಡಬೇಕೆಂದು ಪ್ರದೀಪಕುಮಾರ ಎಂಬುವರು ಪೌರಾಯುಕ್ತರಲ್ಲಿ ಮನವಿ ಮಾಡಿದ್ದಾರೆ.