Slide
Slide
Slide
previous arrow
next arrow

ಎಲ್ಲಾ ರೋಗಕ್ಕೂ ಧೈರ್ಯವೇ ರಾಮಬಾಣ : ಕೃಷ್ಣಿ ಶಿರೂರ

300x250 AD

ಶಿರಸಿ:ನಗರದ ಲಯನ್ಸ್ ಸಭಾಭವನದಲ್ಲಿ ಶಿರಸಿ ಲಯನ್ಸ್ ಕ್ಲಬ್, ಶಿರಸಿ ಲಿಯೋ ಕ್ಲಬ್, ಲಯನ್ಸ್ ಶಿಕ್ಷಣ ಸಂಸ್ಥೆ, ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಗಳ ಸಹಯೋಗದಲ್ಲಿ ಸೆ. 9 ಶುಕ್ರವಾರದಂದು ನಡೆದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಪ್ರಜಾವಾಣಿ ಪತ್ರಿಕೆಯ ಕಚೇರಿಯ ಮುಖ್ಯ ಉಪಸಂಪಾದಕಿ, ಉರಿಬಾನ ಬೆಳದಿಂಗಳು ಕೃತಿಯ ರಚನಾಕಾರ್ತಿಯಾದ ಶ್ರೀಮತಿ ಕೃಷ್ಣಿ ಶಿರೂರು ಇವರು ಮಾತನಾಡುತ್ತಾ ಯಾವುದೇ ಸಮಸ್ಯೆಯನ್ನು ಎದುರಿಸಿ ದೃಢವಾಗಿ ನಿಲ್ಲಲು ರಾಮಬಾಣವಾಗಿ ಧೈರ್ಯವಿರಬೇಕೆಂದು ನುಡಿದರು.

ಆರು ವರ್ಷಗಳ ಹಿಂದೆ ಸ್ವತಃ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು ಯಾವ ರೀತಿಯಾಗಿ ಧೈರ್ಯ, ಛಲ, ಶ್ರದ್ಧೆ, ಆತ್ಮಸ್ಥೈರ್ಯ, ನಂಬಿಕೆ ಎಂಬ ಅಸ್ತ್ರಗಳ ಮುಖಾಂತರ ಯೋಗವನ್ನೂ ನಂಬಿ ಆ ಭಯಂಕರ ವ್ಯಾಧಿಯಿಂದ ಗೆದ್ದು ಬಂದನೆಂಬುದನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದಲ್ಲಿ ಎದುರಾಗುವ ಯಾವುದೇ ಸ್ವರೂಪದ ಸಮಸ್ಯೆಗಳು, ಅನಿರೀಕ್ಷಿತ ತಿರುವುಗಳು, ನಿರೀಕ್ಷೆಯೇ ಇರದ ಅನೇಕ ಅಡೆತಡೆಗಳನ್ನೂ ಕೂಡ ಆತ್ಮಸ್ಥೈರ್ಯದಿಂದ ಛಲದಿಂದ ಎದುರಿಸಿ ಮುನ್ನಡೆಯಬೇಕೆಂದು ತಿಳಿ ಹೇಳಿದರು. ತಿಳಿಯಾದ ಮನಸ್ಸು ಧೈರ್ಯ ಆತ್ಮಸ್ಥೈರ್ಯಗಳಂತಹ ಅಸ್ತ್ರಗಳಿದ್ದರೆ ಎಂತಹ ಸಮಸ್ಯೆಗಳನ್ನು, ರೋಗವನ್ನೂ ದೂರವಾಗಿಸಬಹುದು. ಔಷಧೀಯ ಗುಣಾಂಶಗಳಿಂದ ಕಾಲು ಭಾಗದಷ್ಟು ರೋಗವನ್ನು ದೂರ ಮಾಡಬಹುದಾದರೆ ನಮ್ಮ ಅಂತರಂಗದ ಗಟ್ಟಿತನದಿಂದ ಮುಕ್ಕಾಲು ಪಾಲು ಕಡಿಮೆಯಾಗಬಲ್ಲದು. ತಾವು ಜೀವನದಲ್ಲಿ ವೈಯಕ್ತಿಕವಾಗಿ ಎದುರಿಸಿದ ಹಲವಾರು ಅಡೆತಡೆಗಳನ್ನು ಬಿಚ್ಚಿಟ್ಟು ಹೇಗೆ ಅವುಗಳನ್ನೆಲ್ಲ ಛಲದಿಂದ ಎದುರಿಸಿ ಮುನ್ನಡೆದೆನೆಂಬುದನ್ನು ವಿವರಿಸಿದರು. ಅತ್ಯಂತ ಭಯಂಕರ ಸ್ವರೂಪದ ವ್ಯಾಧಿಯಾದ ಕ್ಯಾನ್ಸರ್ ರೋಗ ತನ್ನನ್ನು ಕಾಡಿದರೂ ಯೋಗದ ಮರೆಹೊಕ್ಕು ಗಾಯಿತ್ರಿ ಮುದ್ರೆಯನ್ನು ಕಲಿತು ಆ ವ್ಯಾಧಿಯಿಂದ ಮುಕ್ತರಾದ ಬಗೆಯನ್ನು ವಿವರಿಸಿದರು.ಕ್ಯಾನ್ಸರ್ ರೋಗದಿಂದ ಬಳಲುವವರಿಗೆ ಕೌನ್ಸಿಲಿಂಗ್ ಮಾಡುತ್ತಾ ಮಾನಸಿಕವಾಗಿ ದೃಢತೆಯನ್ನು, ಗಾಯತ್ರಿ ಮುದ್ರೆಯಿಂದ ಕ್ಯಾನ್ಸರ್ ರೋಗವನ್ನು ದೂರ ಬಿಡಬಹುದಾದ ಸುಲಭೋಪಾಯವನ್ನು ಕೂಡ ತಿಳಿಸಿಕೊಡುತ್ತಾ ಕ್ಯಾನ್ಸರ್ ಜಾಗೃತಿ ಕಾರ್ಯದಲ್ಲಿ ಯಾವ ರೀತಿಯಾಗಿ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ತಿಳಿಸಿಕೊಟ್ಟರು.
ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾ, ಪತ್ರಿಕೆಯ ಕಾರ್ಯವನ್ನು ನಿರ್ವಹಿಸುತ್ತಾ, ಅದೆಷ್ಟೋ ಪ್ರಶಸ್ತಿ ಗೌರವಗಳಿಗೆ ಭಾಜನರಾಗಿ ಇಂದು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಾ ಅದೆಷ್ಟೋ ಸಾವಿರ ಸಾವಿರ ಜನರಿಗೆ ಯೋಗ ಮುದ್ರೆಯ ಮುಖಾಂತರ ಈ ವ್ಯಾಧಿಯನ್ನು ಎದುರಿಸುವ ಮಾರ್ಗವನ್ನು ತಿಳಿಸಿ ಕೊಡುವ ಗುರುತರವಾದ ಸ್ಥಾನದಲ್ಲಿ ನಿಲ್ಲುವುದಕ್ಕೆ ತಾನು ಎದುರಿಸಿದ ಕ್ಯಾನ್ಸರ್ ರೋಗವೇ ಕಾರಣವಾದ್ದರಿಂದ ಖಂಡಿತವಾಗಿಯೂ ಕ್ಯಾನ್ಸರ್ ರೋಗಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಸಮಸ್ಯೆಗಳನ್ನು, ಸವಾಲುಗಳನ್ನು ಕೇಳಿದ ವಿದ್ಯಾರ್ಥಿಗಳು, ಶಿಕ್ಷಕರ ಜೊತೆಯಲ್ಲಿ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟು ಪ್ಲಾಸ್ಟಿಕ್, ಜಂಕ್ ಫುಡ್ ನ ಅತಿಯಾದ ಬಳಕೆಯಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆ ತಿಳಿಸಿಕೊಡುತ್ತಾ ವಿದ್ಯಾರ್ಥಿಗಳೇ ಇದನ್ನು ನಿಯಂತ್ರಿಸುವಲ್ಲಿ ಮೊದಲು ಕಾರ್ಯಪ್ರವೃತ್ತರಾಗಬೇಕೆಂದು ಹುರಿದುಂಬಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದಂತಹ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಎಂ.ಜೆ.ಎಫ್ ಲಯನ್ ತ್ರಿವಿಕ್ರಂ ಪಟವರ್ಧನ್ ಅವರು ಮಾತನಾಡುತ್ತಾ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಹಿಂದಿನವರು ನಮಗೆ ಹಾಕಿಕೊಟ್ಟ ಆರೋಗ್ಯ ಪೂರ್ಣ ಆಹಾರ ಪದ್ಧತಿಯನ್ನು ವಿದ್ಯಾರ್ಥಿಗಳು ಮುಂದುವರಿಸಲಿ, ಬದುಕಿನ ಯಾವುದೇ ಅಡೆತಡೆಗಳಿಗೂ ಜಗ್ಗದೆ ಧೃಢಚಿತ್ತದಿಂದ ಮುಂದಕ್ಕೆ ಸಾಗಿರೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಲಯನ್ಸ ಕ್ಲಬ್ ಕೋಶಾಧ್ಯಕ್ಷರಾದ ಲಯನ್ ರಾಜಲಕ್ಷ್ಮಿ ಹೆಗಡೆ, ಲಯನ್ಸ ರೀಜನಲ್ ಚೇರ್ ಪರ್ಸನ್ ಎಂ.ಜೆ.ಎಫ್. ಲಯನ್ ಜ್ಯೋತಿ ಭಟ್, ಶಿರಸಿ ಲಿಯೋ ಕ್ಲಬ್ ನ ಅಧ್ಯಕ್ಷರಾದ ಲಿಯೋ ಅನನ್ಯ ಹೆಗಡೆ, ಲಿಯೋ ಕ್ಲಬ್ ಅಡ್ವೈಸರ್ ಲಯನ್ ಅಶ್ವಥ್ ಹೆಗಡೆ, ಲಯನ್ ಶ್ರೀಕಾಂತ್ ಹೆಗಡೆ, ಲಯನ್ ಪ್ರತಿಭಾ ಹೆಗಡೆ, ಲಯನ್ ಎಂ.ಐ. ಹೆಗಡೆ, ಲಯನ್ ಬಿಂದು ಹೆಗಡೆ, ಲಯನ್ ಶರಾವತಿ ಹೆಗಡೆ ಉಪಸ್ಥಿತರಿದ್ದರು. ಶಾಲೆಯ ಮುಖ್ಯಾಧ್ಯಾಪಕರಾದ ಶಶಾಂಕ್ ಹೆಗಡೆ ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು, ಸಭಗೆ ಪರಿಚಯಿಸಿ, ಆಗಮಿಸಿದವರನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಸಿಕೊಟ್ಟರು. ಎಂ ಜೆ ಎಫ್ ಲಯನ್ ರಮಾ ಪಟವರ್ಧನ್ ವಂದನಾರ್ಪಣೆ ನಡೆಸಿಕೊಟ್ಟರು. ಲಿಯೋ ಕ್ಲಬ್ ನ ಸದಸ್ಯರಾದ ಲಿಯೋ ಸೃಷ್ಟಿ ಗೌಳಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕ್ಲಬ್ ಸದಸ್ಯರುಗಳು ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು , ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top