ಶಿರಸಿ: ಹೆಣ್ಣು ಒಂದು ಕುಟುಂಬದ ಆಧಾರಸ್ತಂಭವಿದ್ದಂತೆ ಅವಳ ಆರೋಗ್ಯ ಅತೀ ಮುಖ್ಯ. ಹಿತ, ಮಿತ, ಋತುಗಳಿಗೆ ತಕ್ಕಂತೆ ನಮ್ಮ ಆಹಾರ ಸೇವನೆಯಿರಬೇಕು ಎಂದು ಡಾ. ಪೂರ್ಣಿಮಾ ಹೇಳಿದರು.
ನಗರದ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಭೂಗೋಳಶಾಸ್ತ್ರ ಹಾಗೂ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿಯರ ಆರೋಗ್ಯದ ಕುರಿತು ವೈದ್ಯರೊಂದಿಗೆ ಆತ್ಮಸಮಾಲೋಚನೆ ಕಾರ್ಯೆಕ್ರಮದಲ್ಲಿ ಮಾತನಾಡಿದರು. ಫಾಸ್ಟ್ ಫುಡ್, ಜಂಗಪುಡ್ಸ್ ಕೇವಲ ಮಹಿಳೆಯರಿಗೆ ಮಾತ್ರ ತೊಂದರೆ ಉಂಟುಮಾಡುತ್ತದೆ ಎಂದೆನಿಲ್ಲ. ಆದರೆ ಹೆಚ್ಚು ಸಮಸ್ಯೆ ಹೆಣ್ಣುಮಕ್ಕಳಲ್ಲಿ ಉಂಟಾಗುತ್ತದೆ. ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ, ರುಚಿಗೆ ಮಾತ್ರ ನಾವು ಹೆಚ್ಚು ಆದ್ಯತೆ ನೀಡುತ್ತಿದ್ದೆವೆ ಎಂದರು.
ಹೆಣ್ಣಿಗೆ ಪ್ರಕೃತಿ ನೀಡಿರುವ ವರದಾನವೆ ತಾಯಿತನ ಆದರೆ ಫಾಸ್ಟ್ ಫುಡ್, ಜಂಕ್ ಫುಡ್ ಗಳಿಂದ ಹೆಣ್ಣುಮಕ್ಕಳಿಗೆ ಅದರಲ್ಲೂ ಸಮಸ್ಯೆಗಳು ತೀವ್ರವಾಗಿ ಉಂಟಾಗುತ್ತಿದೆ. ಎಣ್ಣೆತಿಂಡಿ ತಿನಿಸುಗಳು ಕೇವಲ ಮಾನಸಿಕ ಆನಂದವನ್ನು ನೀಡುತ್ತದೆ ಹೊರತು ಆರೋಗ್ಯಕ್ಕೆ ಅದರಿಂದ ಚಿಕ್ಕ ಪ್ರಯೋಜವು ಇಲ್ಲ. ಇದರಿಂದ ಪಿಸಿಒಡಿ, ತೈರೊಯ್ಡ್, ರಕ್ತದೊತ್ತಡ, ಮಧುಮೇಹ, ಬಂಜೆತನ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಸಮಸ್ಯೆ ಬಗೆಹರಿಸಲು ಅಧಿಕ ಟ್ಯಾಬ್ಲೆಟ್ ಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.
ಅದಕ್ಕಾಗಿ ನಾವು ತಿನ್ನುವ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸತ್ವಯುಕ್ತ, ಪೋಷಕಾಂಶಗಳುಳ್ಳ ಆಹಾರದ ಜೊತೆ ಯೋಗಾಸನವು ದೇಹಕ್ಕೆ ಉತ್ತಮ ಎಂದು ಪಿ ಪಿ ಟಿ ಮೂಲಕ ಹೆಣ್ಣುಮಕ್ಕಳ ದೈಹಿಕ ಆರೋಗ್ಯದ ಕುರಿತು ಮಾಹಿತಿ ನೀಡುತ್ತ ಡಾ. ಪೂರ್ಣಿಮಾ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು.
ಆರೋಗ್ಯ ಮನುಷ್ಯನಿಗೆ ತುಂಬಾ ಮುಖ್ಯ. ಎಣ್ಣೆಯ ತಿನಿಸುಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಅದು ಯುವ ವಯಸ್ಸಿನಲ್ಲಿ ಅರಿವಾಗದಿದ್ದರು ವಯಸ್ಸಾದ ಬಳಿಕ ತಿಳಿಯುತ್ತದೆ. ಬೀದಿಬದಿ ಆಹಾರ ದೇಹಕ್ಕೆ ಎಷ್ಟು ಪರಿಣಾಮಕಾರಿ ಎಂದು ತಿಳಿಸಲು ವೈದ್ಯರು ಇಂದು ನಮ್ಮೊಂದಿಗೆ ಇದ್ದಾರೆ.
ಡಾ.ಪೂರ್ಣಿಮಾ ಎಸ್. ಬಿ ನಿರಂತರವಾಗಿ ಹದಿನೆಂಟು ವರ್ಷಗಳಿಂದ ಗ್ರಾಮಿಣ ಭಾಗಗಳಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಪ್ರಸ್ತುತ ಶಿರಸಿಯ ಬೈರುಂಬೆ ಗ್ರಾಮದಲ್ಲಿ ಸೇವೆಸಲ್ಲಿಸುತ್ತಿದ್ದಾರೆ ಎಂದು ಪ್ರಾಂಶುಪಾಲರಾದ ಟಿ.ಎಸ್ ಹಳೆಮನೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿನಿ ಜಿ.ಸ್ನೇಹಾ ಸ್ವಾಗತಿಸಿ, ನಿರೂಪಿಸಿದರು. ವಿದ್ಯಾರ್ಥಿನಿ ಸುನಿತಾ ಸಿದ್ದಿ ಸ್ವಾಗತ ಗೀತೆ ಹಾಡಿದರು. ಪ್ರೋ.ಚಿನ್ಮಯಿ ಹೆಗಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಇತಿಹಾಸ ಪ್ರಾಧ್ಯಾಪಕಿ ಪ್ರೀತಿ ಬಂಡಾರಿ, ಉಪನ್ಯಾಸಕರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.