ಶಿರಸಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಸಿ, ಶೈಕ್ಷಣಿಕ ಜಿಲ್ಲೆ ಶಿರಸಿ (ಉ.ಕ) ಇವರ ಸಹಯೋಗದಲ್ಲಿ ಸೆ.06 ರಂದು ನಡೆಸಲಾದ 2022-23ನೇ ಸಾಲಿನ ತಾಲೂಕಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಗರದ ಲಯನ್ಸ್ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗಂಡು ಮಕ್ಕಳ ಚೆಸ್ ಸ್ಪರ್ಧೆಯಲ್ಲಿ ಕುಮಾರ ಅಭಿನಿತ್ ಭಟ್ ಪ್ರಥಮ, ಕುಮಾರ ಪ್ರೀತಮ್ ವೈದ್ಯ ದ್ವಿತೀಯ, ಹೆಣ್ಣು ಮಕ್ಕಳ ಯೋಗಾಸನ ಸ್ಪರ್ಧೆಯಲ್ಲಿ ಅರ್ಪಿತಾ ಹೆಗಡೆ ಪ್ರಥಮ. ಶಟಲ್ ಬ್ಯಾಡ್ಮಿಂಟನ್ (ಬಾಲಕಿಯರ ವಿಭಾಗ) – ಕುಮಾರಿ ತ್ವಿಷಾ ಹೆಗಡೆ ಮತ್ತು ಖುಷಿ ಎಸ್. ಶೆಟ್ಟಿ ಪ್ರಥಮ, ಶಟಲ್ ಬ್ಯಾಡ್ಮಿಂಟನ್ (ಬಾಲಕರ ವಿಭಾಗ) – ಅಥರ್ವ ನಾಯಕ ಮತ್ತು ಶ್ರೇಯಸ್ ಹೆಗಡೆ ಪ್ರಥಮ. ಟೇಬಲ್ ಟೆನ್ನಿಸ್ (ಬಾಲಕಿಯರ ವಿಭಾಗ) – ಸಮೀಕ್ಷಾ ರಾಯ್ಕರ್ ಮತ್ತು ವನ್ಯಾ ಹೆಗಡೆ ಪ್ರಥಮ, ಟೆಬಲ್ ಟೆನ್ನಿಸ್ (ಬಾಲಕರ ವಿಭಾಗ) – ಹರ್ಷಿತ್ ಜೋಗಳೆಕರ್, ಶ್ರವಣ ಮಾದರ್, ಅಥರ್ವ ನಾಯಕ ಪ್ರಥಮ ಸ್ಥಾನಗಳನ್ನು ಪಡೆದು ಪ್ರಶಸ್ತಿ ಪತ್ರ ಹಾಗೂ ಮೆಡಲ್ ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಶಾಲೆಯ ಕೀರ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕಿಯಾದ ಶ್ರೀಮತಿ ಚೇತನಾ ಪಾವಸ್ಕರ್ ಮಾರ್ಗದರ್ಶನ ನೀಡಿದ್ದಾರೆ.
ಅಂತೆಯೇ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಒಳಾಂಗಣ ಸ್ಪರ್ಧೆಯಲ್ಲಿ ಕುಮಾರ ಪ್ರಸನ್ನ ಹೆಗಡೆ ಚೆಸ್ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ. ಹಾಗೂ 14 ವರ್ಷ ವಯೋಮಿತಿಯ ಚೆಸ್ ವಿಭಾಗದಲ್ಲಿ ನಿದೀಪ್ ಹೆಗಡೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ಈ ವಿದ್ಯಾರ್ಥಿಗಳಿಗೆೆ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ನಾಗರಾಜ ಜೋಗಳೇಕರ್ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಪಕ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ಬಾಂದವರು, ಲಯನ್ಸ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.
ಒಳಾಂಗಣ ಕ್ರೀಡಾಕೂಟ: ಲಯನ್ಸ್ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ
![](https://euttarakannada.in/wp-content/uploads/2022/09/WhatsApp-Image-2022-09-06-at-4.11.08-PM-730x438.jpeg?v=1662465011)