• Slide
    Slide
    Slide
    previous arrow
    next arrow
  • ಖಾಯಂ ಕಿರಿಯ ಇಂಜಿನಿಯರ ವರ್ಗಾವಣೆ ಆದೇಶ: ಸಾರ್ವಜನಿಕರ ಹರ್ಷ

    300x250 AD

    ಶಿರಸಿ: ತಾಲೂಕಿನ ಬನವಾಸಿ ಹೆಸ್ಕಾಂನಲ್ಲಿ ಶಾಖಾಧಿಕಾರಿ ವರ್ಗಾವಣೆಗೊಂಡು ವರ್ಷಗಳೆ ಕಳೆದು ಹೋಗಿತ್ತು. ಸದ್ಯ ಅಲ್ಲಿಯೆ ಇದ್ದ ಮೆಕಾನಿಕ್ ಒಬ್ಬರಿಗೆ ಚಾರ್ಜ್ ನ್ನು ನೀಡಿ ಕೆಲಸವನ್ನು ಮಾಡಿಸುತ್ತಿದ್ದರು. ಇದನ್ನು ಮನಗೊಂಡು ಇಂಧನ ಸಚಿವರು, ಸರ್ಕಾರದ ಅಧೀನ ಕಾರ್ಯದರ್ಶಿ ಇಂಧನ ಇಲಾಖೆ ಬೆಂಗಳೂರವರು ಬನವಾಸಿ ಶಾಖೆಗೆ ಖಾಯಂ ಆಗಿ ಕಿರಿಯ ಇಂಜಿನಿಯರೊಬ್ಬರನ್ನು ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

    ಶಾಖೆಯಲ್ಲಿ ಖಾಯಂ ಆಗಿ ಅನುಭವವಿರುವ ಶಾಖಾಧಿಕಾರಿಗಳಿದ್ದರೆ ತ್ವರಿತವಾಗಿ, ಕೆಲಸ ಸುಲಭವಾಗಿ ಹಾಗೂ ಕಾರ್ಯಕ್ಷಮತೆಯಿಂದ ಕೂಡಿರುತ್ತದೆ. ಈಗಾಗಲೇ ಯಾದವ ಬೋರಕರವರು ಮೂರು ದಿನಗಳಿಂದ ಕೆಲಸಕ್ಕೆ ಹಾಜರಾಗಿ ಗ್ರಾಮ ಸಭೆಗೆ ಭಾಗವಹಿಸಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಖಾಯಂ ಕಿರಿಯ ಇಂಜಿನಿಯರನ್ನು ನೇಮಕ ಮಾಡಿದ ಬಗ್ಗೆ ಸಚಿವ ಶಿವರಾಮ ಹೆಬ್ಬಾರ, ಇಂಧನ ಸಚಿವರಾದ ಸುನೀಲ್ ಕುಮಾರ್, ಉಸ್ತುವಾರಿ ಸಚಿವರಾದ ಕೊಟಾ ಶ್ರೀನಿವಾಸ ಪೂಜಾರಿಯವರಿಗೆ ಗ್ರಾಮಸ್ಥರು, ಪಂಚಾಯತ ಸದಸ್ಯರುಗಳು, ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top