ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂತೊಳ್ಳಿ ಅಂಗನವಾಡಿ ಕೇಂದ್ರದಲ್ಲಿ ಸೆ:06 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸ್ಲಕೊಪ್ಪ ವಲಯದಲ್ಲಿ ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ನೋಂದಣಿ ಶಿಬಿರವನ್ನು ನಡೆಸಲಾಯಿತು.
ಮೇಲ್ವಿಚಾರಕ ದಿನೇಶ್ ಹಾಗೂ ಕಂಪ್ಯೂಟರ್ ಆಪರೇಟರ್ ಕುಮಾರಿ ನಯನಾ ಆಲೂರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆ, ಶ್ರೀಮತಿ, ಸವಿತಾ, ಬಿಜಾಪುರ ಹಾಗೂ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆ, ಶ್ರೀಮತಿ, ಗೀತಾ, ತಂಬೂಳಿ, ಹಾಗೂ ಗ್ರಾಮಸ್ಥರ ಸಹಯೊಗದೊಂದಿಗೆ ಕಾರ್ಯಕ್ರಮವನ್ನು ನಡೆಸಿದರು.