• Slide
    Slide
    Slide
    previous arrow
    next arrow
  • ವೃತ್ತಿಯ ಹಿರಿಮೆಯಿಂದ ಸಾಮಾಜಿಕ‌ ಮೌಲ್ಯ ಎತ್ತರಿಸಬೇಕು: ಹೆಬ್ಬಾರ್

    300x250 AD

    ಯಲ್ಲಾಪುರ: ಉತ್ತಮ ಸಮಾಜದ ನಿರ್ಮಾಣದಲ್ಲಿ ಗುರುವಿನ ಸ್ಥಾನ ಹಿರಿದಾಗಿದೆ.ಗುರುವಿಗೆ ಸಮಾಜದಲ್ಲಿ ವಿಶೇಷ ಗೌರವ ಸ್ಥಾನಮಾನ ಇದ್ದು,ಸಮಾಜದ ನೀಡಿದ ಗೌರವ ಹಿರಿಮೆ ಕಾಯ್ದುಕೊಂಡು ಸಾಮಾಜಿಕ‌ ಪರಿವರ್ತನೆಗೆ ಶ್ರಮಿಸಬೇಕು ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಅವರು ಸೋಮವಾರ ಪಟ್ಟಣದ ವೆಂಕಟ್ರಮಣ ಮಠ ಸಭಾಭವನದಲ್ಲಿ ನಡೆದಲ್ಲಿ ನಡೆದ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.   

     ಎಲ್ಲಾ ಕಾಲದಲ್ಲೂ ಗುರುವಿಗೆ ಶ್ರೇಷ್ಠತೆಯ ಗೌರವಾದಾರಗಳು ಇದೆ.ಎಲ್ಲಾ ವೃತ್ತಿಗಿಂತ ಶಿಕ್ಷಕ ವೃತ್ತಿ ಭಿನ್ನವಾಗಿದೆ.ವೃತ್ತಿಯ ಹಿರಿಮೆಯಿಂದ ಸಾಮಾಜಿಕ‌ ಮೌಲ್ಯ ಎತ್ತರಿಸಬೇಕು ಎಂದರು.

    ಇದೇ ಸಂದರ್ಭದಲ್ಲಿ ತಾಲೂಕಾ ಶಿಕ್ಷಕ ಪ್ರಶಸ್ತಿ ಪಡೆದ ಗಣಪತಿ ಕೃಷ್ಣ ಭಟ್ಟ, ಸಂತೋಷ ಹೊನ್ನಪ್ಪ ಕೊಳಗೇರಿ, ಪಾರ್ವತಿ ನಾಯ್ಕ, ದೇವಿದಾಸ ನಾರಾಯಣ ಪಟಗಾರ, ವಿನಾಯಕ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.

    300x250 AD

    ಶಿಕ್ಷಕರಿಗಾಗಿ ನಡೆದ ವಿವಿಧ ಸ್ಪರ್ಧಾವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.ವಿಕೇಂದ್ರಿಕರಣ ಮತ್ತು ಅಭಿವೃದ್ದಿ ಸಮೀತಿ ಉಪಾಧ್ಯಕ್ಷ ಪ್ರಮೋದ ಹೆಗಡೆ,ಪ.ಪಂ ಅಧ್ಯಕ್ಷೆ ಸುನಂದಾ ದಾಸ್,ಉಪಾಧ್ಯಕ್ಷೆ ಶ್ಯಾಮಲಿ ಪಾಟಣಕರ್, ತಾ.ಪಂ.ಇಒ ಜಗದೀಶ ಕಮ್ಮಾರ,ಬಿಇಒ ಎನ್.ಆರ್.ಹೆಗಡೆ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಆರ್.ಆರ್.ಭಟ್ಟ ಇದ್ದರು.ಅಂಕೋಲಾ ಅರ್ಬನ್ ಬ್ಯಾಂಕನ  ಅಧ್ಯಕ್ಷ ರಾಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

    ದೈಹಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ,ಫ್ರೌಢಶಾಲಾ ಸಹಶಿಕ್ಷಕ ಸಂಘದ ತಾಲೂಕಾ ಅಧ್ಯಕ್ಷ ಚಂದ್ರಶೇಖರ ಇದ್ದರು. ವಿ.ಎಂ.ಭಟ್ಟ ಉಪನ್ಯಾಸ ನೀಡಿದರು.ಶಿಕ್ಷಕರಾದ ಚಂದ್ರಹಾಸ ನಾಯ್ಕ,ಇಂದಿರಾ ನಾಯ್ಕ,ಭಾಸ್ಕರ ನಾಯ್ಕ,ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top