Slide
Slide
Slide
previous arrow
next arrow

ಹಾರ್ಸಿಕಟ್ಟಾ ಗಜಾನನೋತ್ಸವ: ಮಧುಕೇಶ್ವರ ಹೆಗಡೆಗೆ ಸನ್ಮಾನ

300x250 AD

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ಬೆಂಗಳೂರಿನ ಆಭಾರಿ ಟ್ರಸ್ಟ್ ಇವರಿಂದ ಸಂಸ್ಕೃತಿ ಮಂತ್ರಾಲಯ ನವದೆಹಲಿ ಇವರ ಸಹಕಾರದಲ್ಲಿ ಶ್ರೀಕೃಷ್ಣ ಪಾರಿಜಾತ ಯಕ್ಷಗಾನ ಹಾಗೂ ಮೋದಿ ಮನ್ ಕೀ ಬಾತ್ ಹಿರೋ ಮಧುಕೇಶ್ವರ ಹೆಗಡೆ ಶಿರಸಿ ಅವರಿಗೆ ಸನ್ಮಾನ ಶುಕ್ರವಾರ ನಡೆಯಿತು.
ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪ್ರಕಾಶ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಗಜಾನನೋತ್ಸವ ಸಮಿತಿಯ ಕಾರ್ಯದರ್ಶಿ ಅನಂತ ಶಾನಭಾಗ ಅಧ್ಯಕ್ಷತೆವಹಿಸಿದ್ದರು. ವಿ.ಶ್ರೀಧರ ಭಟ್ಟ ಮಾಣಿಕ್ನಮನೆ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ, ಶಶಿಧರ ಪಾಟೀಲ್ ಇತರರಿದ್ದರು.
ಜೇನು ಕೃಷಿಕ ಹಾಗೂ ಮೋದಿ ಮನ್ ಕೀ ಬಾತ್ ಹಿರೋ ಮಧುಕೇಶ್ವರ ಹೆಗಡೆ ಶಿರಸಿ ಅವರನ್ನು ಈ ಸಂದರ್ಭದಲ್ಲಿ ಆಭಾರಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಆಭಾರಿ ಟ್ರಸ್ಟ್ ಅಧ್ಯಕ್ಷ ಸುಬ್ರಾಯ ಹೆಗಡೆ ಇಳಿಮನೆ ಸ್ವಾಗತಿಸಿದರು. ಸುಜಾತಾ ಹೆಗಡೆ ದಂಟಕಲ್ ನಿರ್ವಹಿಸಿದರು.
ನಂತರ ಪ್ರದರ್ಶನಗೊಂಡ ಶ್ರೀ ಕೃಷ್ಣ ಪಾರಿಜಾತ ಯಕ್ಷಗಾನದ ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್, ನಂದನ ಹೆಗಡೆ ದಂಟಕಲ್, ಶಂಕರ ಭಾಗವತ್ ಯಲ್ಲಾಪುರ, ಪ್ರಸನ್ನ ಹೆಗ್ಗಾರ್ ಸಹಕರಿಸಿದರು. ಮುಮ್ಮೇಳದಲ್ಲಿ ವೆಂಕಟಗಿರಿ ಹೆಗಡೆ ಹಾರ್ಸಿಮನೆ, ವೆಂಕಟರಮಣ ಮಾದನಕಳ್, ಶಣ್ಮುಖ ಗೌಡ ಉಡಳಿ, ರಾಮಣ್ಣ ಜೋಗಿನಮನೆ, ನರೇಂದ್ರ ಅತ್ತಿಮುರ್ಡು, ವೆಂಕಟೇಶ ಹೆಗಡೆ ಬೊಗರಿಮಕ್ಕಿ, ನಿತಿನ್ ದಂಟಕಲ್, ಕಾರ್ತಿಕ್ ದಂಟಕಲ್, ಸುನೀಲ್ ಹೂಡೆಹದ್ದ ಇತರರು ವಿವಿಧ ಪಾತ್ರ ನಿರ್ವಹಿಸಿ ಮೆಚ್ಚುಗೆ ಗಳಿಸಿದರು.

300x250 AD
Share This
300x250 AD
300x250 AD
300x250 AD
Back to top