ಶಿರಸಿ: ಮರಾಠಿಕೊಪ್ಪ ಮಹಾಗಣಪತಿಗೆ ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ಚಿನ್ನ ಲೇಪಿತ ಬೆಳ್ಳಿಯ ಕಿರೀಟವನ್ನು ದಾನ ನೀಡಿದ ಪ್ರಯುಕ್ತವಾಗಿ ಇಂದು ಮರಾಠಿಕೊಪ್ಪ ಗಜಾನನೋತ್ಸವ ಸಮಿತಿಯ ವತಿಯಿಂದ ಉಪೇಂದ್ರ ಪೈ ಅವರಿಗೆ ಫಲ – ತಾಂಬೂಲ, ದೇವರ ಪ್ರಸಾದವನ್ನು ನೀಡಿ ಗೌರವಿಸಲಾಯಿತು, ತಮ್ಮ ಸೇವೆ ಹೇಗೆ ಮುಂದುವರಿಯಲಿ ಮಹಾಗಣಪತಿಯ ಆಶೀರ್ವಾದ ಯಾವತ್ತು ಕೂಡ ತಮಗೆ ಇದೆ ನಾವು ಎಲ್ಲರೂ ನಿಮ್ಮ ಜೊತೆಯಲ್ಲಿ ಇದ್ದೇವೆ ಎಂದು ಹೇಳಿ ಸಮಿತಿಯವರು ಶುಭಕೋರಿದರು.ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಹಾಗೂ ಆ ಭಾಗದ ಪ್ರಮುಖ ಹಿರಿಯರು ಉಪಸ್ಥಿತರಿದ್ದರು.
ಮರಾಠಿಕೊಪ್ಪ ಗಜಾನನೋತ್ಸವ ಸಮಿತಿಯಿಂದ ಉಪೇಂದ್ರ ಪೈಗೆ ಫಲ – ತಾಂಬೂಲ ನೀಡಿ ಗೌರವ
