Slide
Slide
Slide
previous arrow
next arrow

ವೃಕ್ಷಲಕ್ಷ ಆಂದೋಲನದ ಕಾರ್ಯಚಟುವಟಿಕೆಗಳ ಸಂಕ್ಷಿಪ್ತ ವರದಿ

300x250 AD

ಶಿರಸಿ: ವೃಕ್ಷ ಲಕ್ಷ ಆಂದೋಲನ ಕರ್ನಾಟಕದ ಜನವರಿ 2022 ರಿಂದ ಜೂನ 2022 ರವರೆಗಿನ ಕಾರ್ಯಚಟುವಟಿಕೆಗಳ ಸಂಕ್ಷಿಪ್ತ ವರದಿ ಈ ಕೆಳಗಿನಂತಿದೆ..

1) ಗಣಿಗಾರಿಕೆ ಅಧ್ವಾನಗಳಿಗೆ ತಡೆ: ಬೇದೂರು ಗ್ರಾಮದಲ್ಲಿ (ಸಾಗರ ತಾಲೂಕು) ಕೆಂಪುಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆದ ಪರಿಣಾಮ 2021 ರಲ್ಲಿ ಗ್ರಾಮದ 4 ಮನೆಗಳು ಭೂ ಕುಸಿತದಿಂದ ಧ್ವಂಸವಾಗಿದ್ದವು. ಅಲ್ಲಿಗೆ 2022 ರ ಫೆಬ್ರುವರಿ ತಿಂಗಳಲ್ಲಿ ಭೇಟಿ ನೀಡಿದಾಗ ಅಲ್ಲಿನ ಪ್ರಜ್ಞಾವಂತ ಜನರೇ “ಹೋರಾಟ ನಡೆಸಿದರೂ ಗಣಿಗಾರಿಕೆ ನಿಂತಿಲ್ಲ, ಅಸಹಾಯಕ ಸ್ಥಿತಿ ತಲುಪಿದ್ದೇವೆ” ಎಂದರು. ವೃಕ್ಷಲಕ್ಷ ಆಂದೋಲನ ಜಿಲ್ಲೆ ರಾಜ್ಯ, ಹಾಗೂ ಕೇಂದ್ರ ಸರ್ಕಾರದ ಪರಿಸರ-ಅರಣ್ಯ-ಗಣಿ ಇಲಾಖೆಗಳಿಗೆ ಅಹವಾಲು ಸಲ್ಲಿಸಿತು, ಪ್ರಭಾವಿಗಳು ಗಣಿಗಾರಿಕೆ ಪರವಾಗಿ ಒತ್ತಡ ಹೇರಿದರು. ಛಲ ಬಿಡದ ವೃಕ್ಷ ಕಾರ್ಯಕರ್ತರು ಗ್ರಾಮ ಜನತೆಯ ಜೊತೆ ಹೋರಾಟ ನಡೆಸಿ ಒತ್ತಡ ಹಾಕಿ ಗಣಿಗಾರಿಕೆ ನಿಲ್ಲಿಸುವಲ್ಲಿ ಯಶಸ್ಸು ಪಡೆದರು, 2 ತಿಂಗಳ ಸತತ ಬೇದೂರು ಹಸಿರು ಬೆಟ್ಟ ಉಳಿಸಿ ಅಭಿಯಾನದಿಂದ ಭೂಕುಸಿತ, ಪ್ರಾಣಹಾನಿಗೆ ತಡೆ ಸಿಕ್ಕಿತು. (ಉದಯಕುಮಾರ)

2) ಚಂದ್ರಗುತ್ತಿ ಪ್ರದೇಶ (ಸೊರಬ ತಾ) ದಲ್ಲಿ ಜನಾಂದೋಲನ:- ಬಸ್ತಿಕೊಪ್ಪದ ಬೃಹತ್ ಕಲ್ಲು ಗಣಿಗಾರಿಕೆ ಗ್ರಾಮ ಜನರ ಬದುಕಿಗೆ ಕಂಟಕ ಆಗುವ ಪರಿಸ್ಥಿತಿ ತಂದಾಗ ಜನ ಎಚ್ಚೆತ್ತು ವೃಕ್ಷ ಲಕ್ಷ ಕಾರ್ಯಕರ್ತರನ್ನು ಆಹ್ವಾನಿಸಿದರು. ಪರಿಸರ ವೇದಿಕೆ ಸೊರಬದವರು ಜೊತೆ ಸೇರಿದರು.
ಚಂದ್ರಗುತ್ತಿ ಪಂಚಾಯತದಲ್ಲಿ ಜೀವ ವೈವಿಧ್ಯ ಸಮಿತಿ ಸಭೆ, ಗಣಿಗಾರಿಕೆ ಪ್ರದೇಶದ ಸಮೀಕ್ಷೆ, ಜಿಲ್ಲಾಧಿಕಾರಿಗೆ ಅಹವಾಲು, ಪತ್ರಿಕೆಗಳ ಮೂಲಕ ಒತ್ತಡದ ನಂತರ ಸ್ಪೋಟಕ ತಜ್ಞರು ಸ್ಥಳ ಭೇಟಿ ಮಾಡಿದರು. ಅರಣ್ಯ ಅಧಿಕಾರಿಗಳು ವರದಿ ನೀಡಿದರು. ಗುಡ್ಡಗಳಲ್ಲಿ ಗಣಿ, ಬಾವಿ, ಸುತ್ತಲಿನ ಅರಣ್ಯಗಳಿಗೆ ಧಕ್ಕೆ, ಗ್ರಾಮ ಜನರಿಗೆ ರೋಗರುಜಿನ, ಸ್ಪೋಟಕಗಳಿಂದ ಮನೆಗಳ ನಾಶ, ಗ್ರಾಮ ರಸ್ತೆ ನಾಶ, ಕೃಷಿ ತೋಟಗಾರಿಕೆ, ನೀರಿನ ಲಭ್ಯತೆ ನಾಶದ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಸ್ಥಳ ಭೇಟಿ ನೀಡಿ ಪರಿಶೀಲಿಸಿದರು. ಗಣಿಗಾರಿಕೆಗೆ ತಡೆ ನೀಡಿದರು. ಇವು ಏಪ್ರೀಲ್-ಮೇ-ಜೂನ 2022 ರ ಚಂದ್ರಗುತ್ತಿ-ಬಸ್ತಿಕೊಪ್ಪ ಗ್ರಾಮ ಪರಿಸರ ಸಂರಕ್ಷಣಾ ಜನಾಂದೋಲನದ ಮುಖ್ಯಾಂಶ. ಬಡವರು, ಧ್ವನಿ ಇಲ್ಲದ ರೈತರ ಪರವಾಗಿ ವೃಕ್ಷ ಲಕ್ಷ ಹೋರಾಟ ನಡೆಸಿತು.
ಗ್ರಾಮ ಪುನಶ್ಚೇತನ : ಬಸ್ತಿಕೊಪ್ಪದಲ್ಲಿ ಜೂನ 30 ರಂದು ನಡೆಸಿದ ವೃಕ್ಷಲಕ್ಷ ಗ್ರಾಮ ವಿಕಾಸ ಶಿಬಿರದಲ್ಲಿ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರ, ಶಾಲಾ ವನ ನಿರ್ಮಾಣ ಕಾರ್ಯ, ಹಣ್ಣಿನ ಗಿಡ ವಿತರಣೆ ಮಾಡಲಾಯಿತು. ಮಣ್ಣು ಪರೀಕ್ಷೆ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ನಿರ್ಮಾಣ ಕುರಿತು ಜಿಲ್ಲಾ ಪಂ. ತಾಲೂಕಾ ಪಂಚಾಯತ ಅರಣ್ಯ ಸೇರಿ ವಿವಿಧ ಇಲಾಖಾ ಅಧಿಕಾರಿಗಳ ಜೊತೆ ಜನ ಸಂಪರ್ಕ ಸಭೆ ನಡೆಸಿದೆವು. (ಶ್ರೀಪಾದ ಬಿಚ್ಚುಗತ್ತಿ) ಗಣಿಗಾರಿಕೆಯಿಂದ ತತ್ತರಿಸಿದ್ದ ಈ ಹಳ್ಳಿ ಈಗ ವಿಕಾಸಕ್ಕೆ ತೆರೆದುಕೊಂಡಿದೆ.

3) ಕೊಡಚಾದ್ರಿ-ಅಂಬಾರ ಗುಡ್ಡ ಉಳಿಸಿ ಗಣಿಗಾರಿಕೆ ನಿಲ್ಲಿಸಿ ಎಂಬ 10 ವರ್ಷಗಳ ಚಳುವಳಿಗೆ ಉಚ್ಚ ನ್ಯಾಯಾಲಯದಲ್ಲೂ ಜಯ ಸಿಕ್ಕಿದೆ. ಸಾಗರ-ಹೊಸನಗರ ತಾಲೂಕುಗಳ ಪರಿಸರ ವೃಕ್ಷ ಕಾರ್ಯಕರ್ತರು, ವನ ವಾಸಿಗಳು, ರೈತರು ಸೇರಿ ನಾಡಿನ ಸೂಕ್ಷ್ಮ ಜೈವಿಕ ತಾಣ ಅಂಬಾರ ಗುಡ್ಡದಲ್ಲಿ ಬೃಹತ್ ಗಣಿಗಾರಿಕೆ ವಿರುದ್ಧ 10 ವರ್ಷದಿಂದ ಹೋರಾಟ ನಡೆಸಿದ ನಂತರ ಇದೀಗ ಹೈಕೋರ್ಟ ಗಣಿಗಾರಿಕೆ ಪರವಾನಿಗೆ ಕೇಳಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಜೀವ ವೈವಿಧ್ಯ ಕಾಯಿದೆ ಅಡಿಯಲ್ಲಿ 2010 ರಲ್ಲಿ ಜೀವ ವೈವಿಧ್ಯ ತಾಣವೆಂದು ಅಂಬಾರ ಗುಡ್ಡಕ್ಕೆ ಮಾನ್ಯತೆ ನೀಡಲಾಗಿದೆ. (ಅಶೋಕ ಸೂರೆಮನೆ)

4) ಗ್ರಾಮ ಸಾಮಾಹಿಕ ಭೂಮಿ, ಗೋಮಾಳ ಉಳಿಸಿ ಕಾನು, ಬೆಟ್ಟ ಮುಂತಾದ ಕಂದಾಯ ಭೂಮಿಗಳನ್ನು ಖಾಸಗಿಯವರಿಗೆ ನೀಡಲು, ವಿತರಣೆ ಮಾಡಲು, ಸರ್ಕಾರ ನಿಯಮ ರೂಪಿಸಲು ಕ್ಯಾಬಿನೆಟ್ ಉಪ ಸಮಿತಿ ರಚಿಸಲು ಮುಂದಾಯಿತು. ವಿಶೇಷವಾಗಿ ಮಲೆನಾಡಿನ ಪ್ರದೇಶದಲ್ಲಿ ಸರ್ಕಾರದ ಈ ಕ್ರಮ ತಳಮಳ, ಸಂಚಲನ ಮೂಡಿಸಿತು. ಗ್ರಾಮ ನೈಸರ್ಗಿಕ ಸಾಮೂಹಿಕ ಭೂಮಿಗಳ ರಕ್ಷಣೆ ಬಗ್ಗೆ 1990 ರ ದಶಕದಲ್ಲಿ ಬಹುದೊಡ್ಡ ಜನಾಂದೋಲನ ನಡೆದಿತ್ತು.
ಪುನಃ ಇದೀಗ ನಮ್ಮ ಗೋಮಾಳ, ಬೆಟ್ಟ, ಕಾನುಗಳನ್ನು ಉಳಿಸಿ ಎಂಬ ಅಭಿಯಾನ ಸಭೆ, ಮನವಿ, ಜಾಗೃತಿ ಶಿವಮೊಗ್ಗಾ, ಸಾಗರ ಸೊರಬ, ಶಿರಸಿ, ಯಲ್ಲಾಪುರ, ಹೊನ್ನಾವರ, ಪೂತ್ತೂರು ಮುಂತಾದೆಡೆ ನಡೆದವು. ಬೆಂಗಳೂರಿನಲ್ಲಿ ಮುಖ್ಯ ಮಂತ್ರಿಗಳು, ಗೃಹ ಮಂತ್ರಿ, ಕಂದಾಯ ಅರಣ್ಯ ಇಲಾಖೆ, ವಿಧಾನ ಸಭಾಧ್ಯಕ್ಷರು ಮುಖ್ಯ ಕಾರ್ಯದರ್ಶಿ ಮೊದಲಾದವರನ್ನು ಭೇಟಿ ಮಾಡಿದ ವೃಕ್ಷ ಲಕ್ಷ, ಕಿಸಾನ, ಸಹಕಾರಿ ಮುಖಂಡರು ಬೆಳೆಗಾರ ಸಂಘ, ಗೋ ಸೇವಾ ಸಂಘ, ಗೋಮಾಳ ಭೂಮಿ ಪರಬಾರೆ ಮಾಡಬಾರದು ಎಂದು ಆಗ್ರಹಿಸಿತು. ಗ್ರಾಮ ಸಾಮೂಹಿಕ ಭೂಮಿ ಉಳಿಸಿ ಚಳುವಳಿ 2022 ರ ಮಾರ್ಚ ಏಪ್ರೀಲ್‌ನಲ್ಲಿ ನಡೆಯಿತು. (ನಾರಾಯಣ ಗಡಿಕೈ)

5) ಕಾಯಿದೆಗೆ ತಿದ್ದುಪಡಿ ಬೇಡ : 2021 ರ ಅಂತ್ಯದಲ್ಲಿ ಜೀವ ವೈವಿಧ್ಯ ಕಾಯಿದೆಗೆ ತಿದ್ದುಪಡಿ ವಿಷಯ ಪ್ರಸ್ತಾಪವಾಯಿತು. 2022 ರ ಜನವರಿಯಲ್ಲಿ ದೆಹಲಿಯಲ್ಲಿ ಕೇಂದ್ರ ಅರಣ್ಯ ಪರಿಸರ ಮಂತ್ರಾಲಯ ಅಭಿಪ್ರಾಯ ಸಭೆ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ ಜೀವ ವೈವಿಧ್ಯ ಸಂರಕ್ಷಣೆ ಕಾರ್ಯ ಸಡಿಲಗೊಳಿಸುವ, ಕಾಯಿದೆ ಬಲಹೀನ ಮಾಡುವ ತಿದ್ದುಪಡಿ ಬೇಡ ಎಂದು ವೃಕ್ಷ ಲಕ್ಷ ಆಂದೋಲನ ಮನವಿ ಸಲ್ಲಿಸಿತು. (ಕಾರ್ತಿಕ)

6) ಡೀಮ್ಡ ಅರಣ್ಯ ಸಂರಕ್ಷಣೆ ಅಭಿವೃದ್ಧಿ ಯೋಜನೆ ಪ್ರಕಟಿಸಲು ಮುಖ್ಯ ಮಂತ್ರಿಗಳಿಗೆ ಆಗ್ರಹ : 5 ಮೇ 2022 ರಲ್ಲಿ ಸರ್ಕಾರ ರಾಜ್ಯದ ಡೀಮ್ಡ ಅರಣ್ಯಗಳನ್ನು ಫೋಷಣೆ ಮಾಡಿ ಆದೇಶ ಹೊರಡಿಸಿದೆ ಸುಪ್ರಿಂಕೋರ್ಟನಲ್ಲಿ ಆಫಿಡಾವೀಟ ಸಲ್ಲಿಸಿದೆ. 20 ವರ್ಷಗಳಿಂದ 3 ಬಾರಿ ಪರಾಮರ್ಶೆಗೆ ಒಳಗಾಗಿ 10 ಲಕ್ಷ ಹೆಕ್ಟೇರ್ ಪರಿಭಾವಿತ ಅರಣ್ಯ (ಡೀಮ್ಡ್ ಅರಣ್ಯ) ಪ್ರದೇಶ ಕಡಿತಗೊಳಿಸಿ ಕೇವಲ 3 ಲಕ್ಷ 30 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ ಎಂದು ಇದೀಗ ಪ್ರಕಟಿಸಿದ ಆದೇಶ ಹೇಳಿದೆ. ಈಗ ಘೋಷಿತವಾದ ಡೀಮ್ಡ್ ಅರಣ್ಯಗಳು ಕಂದಾಯ ಅರಣ್ಯಗಳಾಗಿದೆ. ಇವುಗಳನ್ನು ತಳಮಟ್ಟದಲ್ಲಿ ರಕ್ಷಣೆ ಅಭಿವೃದ್ಧಿ ಪಡಿಸಲು ಬೃಹತ್ ಮಾದರಿ ಯೋಜನೆಯನ್ನು ಸರ್ಕಾರ ಅರಣ್ಯ ಇಲಾಖೆ ರೂಪಿಸಿ ಜಾರಿ ಮಾಡಬೇಕು ಎಂದು ವೃಕ್ಷ ಲಕ್ಷ ತಜ್ಞರ ನಿಯೋಗ ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಮುಖ್ಯ ಕಾರ್ಯದರ್ಶಿಗಳಿಗೆ ಶಿಫಾರಸ್ಸು ಮಾಡಿದೆ. (ಬಿ.ಎಂ.ಪ್ರಸನ್ನ)

7) ಉನ್ನತ ಅರಣ್ಯ ಅಧಿಕಾರಿಗಳ ಜೊತೆ ಮಾತುಕತೆ :- ರಾಜ್ಯದ ಅರಣ್ಯ ಇಲಾಖೆ ಪಶ್ಚಿಮ ಘಟ್ಟ ಕರಾವಳಿ, ಬಯಲು ನಾಡಿನ ವಿಶಿಷ್ಟ ಅರಣ್ಯಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಜರೂರು ಕ್ರಮಗಳು, ಪ್ರಚಲಿತ ಅರಣ್ಯ ಪರಿಸ್ಥಿತಿ ಬಗ್ಗೆ ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿಗಳು ಪಿ.ಸಿ.ಸಿ.ಎಫ್. ಎಪಿಸಿಸಿಎಫ್ ಅರಣ್ಯ ಪರಿಸರ ಕಾರ್ಯದರ್ಶಿಗಳ ಜೊತೆ ವಿವರ ಮಾತುಕತೆಯನ್ನು ವೃಕ್ಷ ಲಕ್ಷ ಆಂದೋಲನದ ಪ್ರಮುಖರು ನಡೆಸಿದರು. ಅರಣ್ಯನಾಶ ತಡೆಗೆ ಇನ್ನಷ್ಟು ನೇರ, ತಳ ಮಟ್ಟದ ಕ್ರಮ ಬೇಕು. ದೇವರ ಕಾಡು, ಕಾನು, ಬೆಟ್ಟ, ಹುಲ್ಲು ಬನ್ನಿ, ಸೊಪ್ಪಿಗೆ ಮುಫತ್ತು ಮುಂತಾದ ಕಾನು ಅರಣ್ಯ ಯೋಜನೆಗೆ ಆಧ್ಯತೆ ನೀಡಬೇಕು. ಕರಾವಳಿ ಹಸಿರು ಕವಚ, ಮಿರಿಸ್ಟಿಕಾ ಸ್ಟಾಂಪ್, ಕಾಂಡ್ಲಾಕಾಡು, ಎಂಪಿಸಿಎ ಸೇರಿದಂತೆ ವಿನಾಶದ ಅಂಚಿನ ಸಸ್ಯ ಪ್ರಬೇಧ ಪ್ರದೇಶಗಳ ರಕ್ಷಣೆ, ಸ್ಥಳೀಯ, ಹಣ್ಣಿನ ಜಾತಿಯ ಗಿಡಗಳ ನರ್ಸರಿ ಸೇರಿದಂತೆ ಹಲವು ನೀತಿ ನಿರೂಪಣೆ ಹೊಸ ಯೋಜನೆಗಳ ಬಗ್ಗೆ ವೃಕ್ಷ ಲಕ್ಷ ತಂಡ ಚರ್ಚಿಸಿತು. ದಿ: 28/6/2022 (ಕೆ.ವೆಂಕಟೇಶ)

8) ಬೇಡ್ತಿ-ವರದಾ ನದೀ ಜೋಡಣೆ ಯೋಜನೆ ಕೈಬಿಡಿ :- ವೃಕ್ಷ ಲಕ್ಷ ಕಾರ್ಯಕರ್ತರು ಬೇಡ್ತಿ ವರದಾ ವಿವರ ಯೋಜನಾ ವರದಿ ಡಿಪಿಆರ್ ಸಂಗ್ರಹ ಮಾಡಿ ಬಹಿರಂಗ ಪಡಿಸಿದರು. ಅದರ ಬಗ್ಗೆ ವಿಶ್ಲೇಷಣಾ ವರದಿ ತಯಾರಿಸಿ ಪ್ರಕಟಿಸಿದರು. ಉ.ಕ ಜಿಲ್ಲೆಯಲ್ಲಿ ಬೇಡ್ತಿ ಸಮಿತಿ ಆಶ್ರಯದಲ್ಲಿ ಜಾಗೃತಿ ಅಭಿಯಾನ ನಡೆಯಿತು ಪೂಜ್ಯ ಸ್ವರ್ಣವಲ್ಲಿ ಶ್ರೀಗಳ ನೇತ್ರತ್ವದಲ್ಲಿ ಮಂಚೀಕೇರಿಯಲ್ಲಿ 14/06/2022 ರಂದು ಜನ ಸಮಾವೇಶ ನಡೆಯಿತು ನೀರಾವರಿ ಇಲಾಖೆ ಮುಖ್ಯಸ್ಥರನ್ನು ವೃಕ್ಷ ಲಕ್ಷ ಪ್ರಮುಖರು ಭೇಟಿ ಮಾಡಿದರು. ಬೇಡ್ತಿ ಯೋಜನೆ ಕೈಗೆತ್ತಿಕೊಳ್ಳುವುದಿಲ್ಲ ಎಂಬ ಸ್ಪಷ್ಟನೆಯನ್ನು ಇಲಾಖೆ ನೀಡಿತು. (ಗಣಪತಿ ಕೆ.)

9) ಜೀವ ವೈವಿಧ್ಯ ಸಹಕಾರ : ಮಾದರಿ ಜೀವ ವೈವಿಧ್ಯ ಸಮಿತಿಗಳನ್ನು ಸೊರಬ, ಸಾಗರ, ಸಿದ್ದಾಪುರ, ಶಿರಸಿ, ಯಲ್ಲಾಪುರಗಳಲ್ಲಿ ಚುರುಕು ಗೊಳಿಸಲು ವೃಕ್ಷ ಲಕ್ಷ ಪ್ರಮುಖರು ಕಳೆದ 6 ತಿಂಗಳಿಂದ ಪ್ರಯತ್ನ ಹಾಕಿದ್ದಾರೆ. ಬಿ.ಎಂ.ಸಿ (ಜೀವ ವೈವಿಧ್ಯ ಸಮಿತಿ) ಮೂಲಕ ಸೊರಬದಲ್ಲಿ, ಸಾಗರದಲ್ಲಿ ಪರಿಸರ ತಜ್ಞರು ಕೃಷಿ, ಜೇನು, ಹಸಿರು ಶಾಲೆ, ಅಪರೂರದ ಜೈವಿಕ ಪ್ರದೇಶಕ್ಕೆ ಮಾನ್ಯತೆ ಬಗ್ಗೆ ಕಾರ್ಯಕ್ರಮ ರೂಪಿಸಲು ವೃಕ್ಷ ಲಕ್ಷ ಸಹಕಾರ ನೀಡಿದೆ. (ಆನೆಗೊಳಿ ಸುಬ್ಬರಾವ್)

10) ಅಪರೂಪದ ಮತ್ಸ್ಯಧಾಮಗಳ ಘೋಷಣೆ ಮಾಡಿ:- ನಾಡಿನ ನದಿಗಳು ಮತ್ಸ್ಯ ಸಂಕುಲಗಳ ಆವಾಸ ಸ್ಥಾನ ಕೆಲವು ವಿನಾಶದ ಅಂಚಿನ ಮತ್ಸ್ಯ ಸಂಕುಲಗಳ ಉಳಿವಿಗೆ ಜೀವ ವೈವಿಧ್ಯ ಕಾಯಿದೆ ಅಡಿಯಲ್ಲಿ ರಾಜ್ಯದ 15 ಸ್ಥಳಗಳಲ್ಲಿ (ಕರಾವಳಿ ಮಲೆನಾಡು) ಮತ್ಸ್ಯಧಾಮಗಳನ್ನು ಗುರುತಿಸಲಾಗಿದೆ ಮೀನುಗಾರಿಕಾ ಇಲಾಖೆ ಮೂಲಕ ಈ ಮತ್ಸ್ಯಧಾಮಗಳ ಘೋಷಣೆ ಆಗಬೇಕು ಎಂದು ವೃಕ್ಷ ಲಕ್ಷ ಪ್ರಮುಖರು ಜೂನ ಕೊನೆಯ ವಾರದಲ್ಲಿ ಮೀನುಗಾರಿಕಾ ಸಚಿವರು, ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ, (ಡಾ|| ಪ್ರಕಾಶ ಮೇಸ್ತ)

11) ಜೀವ ವೈವಿಧ್ಯ ದಿನ ಮೇ 22 ರ ಆಚರಣೆ ಅಂಗವಾಗಿ ಶಿರಸಿ ಅರಣ್ಯ ಕಾಲೇಜಿನಲ್ಲಿ ವೃಕ್ಷಾರೋಪಣ ಅರಣ್ಯ ಜೀವ ವೈವಿಧ್ಯ ಪರಿಸ್ಥಿತಿ ಕುರಿತು ವಿಚಾರ ಸಂಕಿರಣ ನಡೆಯಿತು. ಸಾಗರದಲ್ಲಿ 86 ವರ್ಷದ ವೃಕ್ಷ ಲಕ್ಷದ ಕನ್ನಪ್ಪ, ಹಾಗೂ ತುಮರಿ ಅಶೋಕ, ಎಂ.ಜಿ. ರಾಮಚಂದ್ರ, ಸುಬ್ರಹ್ಮಣ್ಯ ನಿಚಡಿ ಅವರನ್ನು ಸನ್ಮಾನಿಸಲಾಯಿತು. (ಬಿ. ಹೆಚ್. ರಾಘವೇಂದ್ರ)

12) ರಾಮತೀರ್ಥ ಉಳಿಸಿ : ಹೊನ್ನಾವರದ ಬಳಿ ರಾಮತೀರ್ಥವಿದೆ. ಪವಿತ್ರ ತೀರ್ಥ ಕ್ಷೇತ್ರ ಇದು ಮಲಿನವಾಗುತ್ತಿದೆ ಅತಿ ಕ್ರಮಣವಾಗುತ್ತಿದೆ. ನೀರಿನಮೂಲ ನಾಶವಾಗುತ್ತಿದೆ. ತೀರ್ಥದ ಉಳಿವಿಗೆ ತುರ್ತುಕ್ರಮಬೇಕು ಎಂದು ವೃಕ್ಷ ಲಕ್ಷ ಆಂದೋಲನ ಸ್ಥಳ ಸಮೀಕ್ಷೆ ಮಾಡಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. (ಕೃಷ್ಣಮೂರ್ತಿ)

300x250 AD

13) ಜೂನ 5 2022 ರಂದು ಜಾಗತಿ ಪರಿಸರ ದಿನಾಚರಣೆಯಂದು ರಾಜ್ಯ ಸರ್ಕಾರ ಶಿರಸಿ ತಾ : ಅಗಸಾಲ ಬೊಮ್ಮನಳ್ಳಿ ಗ್ರಾಮಾರಣ್ಯ ಸಮಿತಿಗೆ ರಾಜ್ಯ ಪರಿಸರ ಪ್ರಶಸ್ತಿ ಘೋಷಿಸಿದೆ. ವೃಕ್ಷ ಲಕ್ಷ ಆಂದೋಲನ 15 ವರ್ಷಗಳಿಂದ ಈ ವಿಎಫ್.ಸಿಗೆ ತಜ್ಞ ಮಾರ್ಗದರ್ಶನ ನೀಡುತ್ತಿದೆ. (ವಿಶ್ವನಾಥ ಬುಗಡಿಮನೆ)

14) ಕುಮಾರಧಾರಾ ಕಣಿವೆ ಉಳಿಸಿ ಅಭಿಯಾನ ಮೇ 20-21 ರಂದು ನಡೆಯಿತು. ಉರುಂಬಿ ನದೀ ಪೂಜೆ ಸುಬ್ರಹ್ಮಣ್ಯ ಮಠದಲ್ಲಿ ವಿಚಾರ ಸಂಕಿರಣ, ಗುಂಡ್ಯ ಅರಣ್ಯ ಪ್ರದೇಶ, ವೀಕ್ಷಣೆ, ಮಳೆ ಮಧ್ಯೆ ನಡೆಯಿತು. ಉರುಂಬಿ ಜೀವ ವೈವಿಧ್ಯ ತಾಣ ಘೋಷಣೆ ಬಗ್ಗೆ ಹರ್ಷ ವ್ಯಕ್ತವಾಯಿತು. (ಕರ್ಣಾಕರ ಗೋಗಟೆ)

15) ಹುಂಚ ಹಸಿರು ಬೆಟ್ಟ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂಬ ಚಳುವಳಿ ಭಾಗವಾಗಿ ಜೂನ್ 2ನೇ ವಾರ ಶಿವಮೊಗ್ಗಾ ಜಿಲ್ಲಾಧಿಕಾರಿಗಳನ್ನು ಗಣಿ ಇಲಾಖೆಯವರನ್ನು ಸ್ಥಳೀಯ ಕಾರ್ಯಕರ್ತರು, ವೃಕ್ಷ ಲಕ್ಷ ಪ್ರಮುಖರು ಭೇಟಿ ಮಾಡಿದರು ಗಣಿಗಾರಿಕೆ, ಭೂ ಕುಸಿತ, ಅರಣ್ಯ ನಾಶ, ಹಳ್ಳಿಗಳ ಕೃಷಿ ಬದುಕು ಅತಂತ್ರವಾಗಲಿದೆ ಎಂಬ ಅಹವಾಲಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಗಣಿ ಕಾಮಗಾರಿಗೆ ತಾತ್ಕಾಲಿಕ ತಡೆ ನೀಡಿದರು.(ನಾಗೇಂದ್ರ ಹುಂಚ)

16) ಮಂಗಳೂರು ವಿಶ್ವ ವಿದ್ಯಾಲಯದಲ್ಲಿ : ಪಶ್ಚಿಮ ಘಟ್ಟ, ಕರಾವಳಿ ಜೀವ ವೈವಿಧ್ಯ ಪರಿಸ್ಥಿತಿ ಸಂರಕ್ಷಣೆಯಲ್ಲಿ ಸಂಶೋಧಕರು, ವಿಶ್ವವಿದ್ಯಾಲಯಗಳ ಸಹ ಭಾಗಿತ್ವ ಕುರಿತು ವಿಜ್ಞಾನ ದಿನದಂದು ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ವೃಕ್ಷ ಲಕ್ಷ ತಜ್ಞರು ಸಮಾಲೋಚನಾ ಕರ‍್ಯಾಗಾರ ನಡೆಸಿಕೊಟ್ಟರು. (ರಾಜೇಶ)

17) ಕೊಲ್ಲಿಬಚ್ಚಲು ಕಣಿವೆ ಉಳಿಸಿ:- ಕೊಲ್ಲಿಬಚ್ಚಲು ಅರಣ್ಯ ಕಣಿವೆ ಶಿವಮೊಗ್ಗಾ ತಾಲೂಕಿನ ಕೋಣೆ ಹೊಸೂರು ಬಳಿ ಇದೆ. ಇಲ್ಲಿನ ಕೊಲ್ಲಿ ಬಚ್ಚಲು ಹಳ್ಳಕ್ಕೆ ಆಣೆಕಟ್ಟು ನಿರ್ಮಿಸಿ ಅನಂದಪುರ ಸುತ್ತ ರೈತರಿಗೆ ನೀರಾವರಿ ನೀಡುವ ಯೋಜನೆ 2002-2003 ರಲ್ಲಿ ಪ್ರಸ್ತಾಪ ಆದಾಗ ಅಲ್ಲಿನ ಜನ ರೈತರು ಅರಣ್ಯನಾಶ, ಕೃಷಿ, ಭೂಮಿ ನಾಶ ಆಗಲಿದೆ. ಈ ಹಳ್ಳದಲ್ಲಿ ನೀರಿಲ್ಲ, ಡ್ಯಾಂ ಯೋಜನೆ ಬೇಡ ಎಂದು ಧ್ವನಿ ಎತ್ತಿದಾಗ ವೃಕ್ಷ ಲಕ್ಷ ಆಂದೋಲನ 2003 ರಿಂದ 2006 ರವೆರಗೆ ನಿರಂತರ ಚಳುವಳಿ ಒತ್ತಡ ಹಾಕಿ ಕೇಂದ್ರ ಅರಣ್ಯ ಮಂತ್ರಾಲಯಕ್ಕೆ ದೂರು ಸಲ್ಲಿಸಿತ್ತು.
ಆದಾಗ್ಯೂ ಡ್ಯಾಂ ನಿರ್ಮಾಣವಾಯಿತು. ಆದರೆ ನೀರು ರೈತರಿಗೆ ಸಿಗಲಿಲ್ಲ ಡ್ಯಾಂ ಪೈಪ್ ಲೈನ್ ಕಾಲುವೆ ಅರಣ್ಯ ಹಾಳು ಬಿದ್ದಿದೆ. ಜನವರಿ 2022 ರಲ್ಲಿ ಕೇಂಧ್ರ ಅರಣ್ಯ ಮಂತ್ರಾಲಯದ ಅಧಿಕಾರಿಗಳು ಕೊಲ್ಲಿಬಚ್ಚಲು ಪ್ರದೇಶಕ್ಕೆ ಭೇಟಿ ನೀಡಿದರು. ಯೋಜನೆ ವಿಫಲವಾಗಿರುವುದರಿಂದ ನೀಡಿರುವ ಅರಣ್ಯ ಭೂಮಿಯನ್ನು ಹಿಂದಕ್ಕೆ ಪಡೆದು ರಕ್ಷಣೆ ಮಾಡಿ, ಕೊಲ್ಲಿ ಬಚ್ಚಲು ಕಣಿವೆ ಅರಣ್ಯ ರಕ್ಷಣೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.. (ಚಂದ್ರಪ್ಪ)

18) ಕೊಡಚಾದ್ರಿ ಪ್ರದೇಶದಲ್ಲಿ : ಮಾರ್ಚ 2022 ರಲ್ಲಿ ಕೊಡಚಾದ್ರಿ ಕಣಿವೆ ಪ್ರದೇಶದ ನಿಟ್ಟೂರು, ನಾಗೋಡಿ, ಬಾಣಿಗಾ ಹಳ್ಳಿಗಳಿಗೆ ಭೇಟಿ ನೀಡಿದ ವೃಕ್ಷ ಲಕ್ಷ ಕಾರ್ಯಕರ್ತರ ತಂಡ ಭೂಕುಸಿತ ಗಣಿಗಾರಿಕೆ ಬಗ್ಗೆ ಜನ ಜಾಗೃತಿ ಉಂಟು ಮಾಡಿದರು. ಕೊಡಚಾದ್ರಿ ಪ್ರವಾಸೋದ್ಯಮ ಪರಿಸರ ಪೂರಕವಾಗಬೇಕು ಎಂಬ ಸಂದೇಶ ನೀಡಿದರು. ಪ್ರಾಣಿಗಳಿಂದ ಬೆಳೆ ಹಾನಿ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲು ಒತ್ತಾಯ ಮಾಡಲಾಯಿತು. (ಕೊಳಕಿ ಕೃಷ್ಣಮೂರ್ತಿ)

19) ವೃಕ್ಷಾರೋಪಣ ಅಭಿಯಾನ ಮೇ ಜೂನನಲ್ಲಿ 18 ಸ್ಥಳಗಳಲ್ಲಿ ನಡೆಯಿತು. ಸೊರಬ ಸಮೀಪ ಕುಪ್ಪೆ ಎಂಬಲ್ಲಿ ದೇವರ ಕಾಡು ಪತ್ತೆ ಮಾಡಿದ ವೃಕ್ಷ ಲಕ್ಷ ಕಾರ್ಯಕರ್ತರು ರಕ್ಷಣ ಕವಚ ತೊಡಿಸಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಹಕ್ರೆ ಮಾಲಿಕಾ ವನಕ್ಕೆ ಭೇಟಿ ನೀಡಿದ ವೃಕ್ಷ ಲಕ್ಷ ಕಾರ್ಯಕರ್ತರು ವರದಾ ಮೂಲದಲ್ಲಿ ವನ ನಿರ್ಮಾಣದಲ್ಲಿ ಸಿದ್ದಾಪುರ, ಆಯುರ್ವೇದ ಕಾಲೇಜಿನ ವನ ನಿರ್ಮಾಣದಲ್ಲಿ ಪಾಲ್ಗೊಂಡರು. ಉಡುಪಿ ಪೂಜ್ಯ ಪೇಜಾವರ ಸ್ವಾಮೀಜಿ ಸ್ಮೃತಿ ವನ ಉದ್ಘಾಟನೆಯಲ್ಲಿ ವೃಕ್ಷ ಲಕ್ಷ ಕಾರ್ಯಕರ್ತರು ಪಾಲ್ಗೊಂಡರು. ಸಸ್ಯಲೋಕದಲ್ಲಿ ಶ್ರೀ ಸ್ವರ್ಣವಲ್ಲೀ ಪೂಜ್ಯರು ವೃಕ್ಷಾರೋಪಣ ಮಾಡಿದರು. (ಗುಮ್ಮಾನಿ)

20) ಆಕಾಶವಾಣಿ & ದೂರದರ್ಶನ ಮೂಲಕ ಅರಣ್ಯ ಪರಿಸರ ಜೀವ ವೈವಿಧ್ಯ ಅಭಿಯಾನವನ್ನು ವೃಕ್ಷ ಲಕ್ಷ ಕಾರ್ಯಕರ್ತರು (ಏಪ್ರೀಲ್, ಮೇ, ಜೂನ 2022) ನಡೆಸಿದರು. ಯಲ್ಲಾಪುರದ ಅಡವಿ ಜೇನು ರಕ್ಷಣೆ, ಶಿರಸಿಯ ವಿಎಫ್‌ಸಿ., ಸಿದ್ದಾಪುರದ ಜೀವ ವೈವಿಧ್ಯ ಸಮಿತಿ, ಸಾಗರದ ಕೆರೆ ಕಾನು ಸಂರಕ್ಷಣಾ ಯೋಜನೆ, ಹೊನ್ನಾವರದ ಹಸಿರು ಕವಚ ಯೋಜನೆ, ಧಾರತವಾಡ ತಾಲೂಕಿನ ಕೃಷಿ ಅರಣ್ಯ ಕಾರ್ಯ ಚಟುವಟಿಕೆಗಳ ಯಶೋಗಾಥೆ ಗಳನ್ನು ಕನ್ನಡ ನಾಡಿನ ಲಕ್ಷಾಂತರ ಜನತೆ ನೋಡಲು ಸಾಧ್ಯವಾಯಿತು. (ಜನಾರ್ಧನ)

21) ಸ್ಮೃತಿ ವನ : ತುಮಕೂರು ಸಿದ್ಧ ಗಂಗಾ ಮಠದ ಸ್ಮೃತಿ ವನ ನರ‍್ಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನು ತುಮಕೂರಿಗೆ ಕರೆ ತಂದು ಯೋಜನೆಗೆ ಚಾಲನೆ ನೀಡುವ ಪ್ರಯತ್ನವನ್ನು ಮೇ ಕೊನೆಯ ವಾರದಲ್ಲಿ ವೃಕ್ಷ ಲಕ್ಷ ಕಾರ್ಯಕರ್ತರು ನಡೆಸಿದರು. (ರುದ್ರಮೂರ್ತಿ)

22) ಕಾನು ರಕ್ಷಣೆಗೆ ಜಂಟಿ ಸಭೆ : ಶಿವಮೊಗ್ಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೇ 07ರಂದು ಕಾನು ಅರಣ್ಯ ಸಂರಕ್ಷಣೆ ಬಗ್ಗೆ ಕಂದಾಯ ಅಧಿಕಾರಿಗಳು & ಅರಣ್ಯ ಅಧಿಕಾರಿಗಳ ಸಭೆ ನಡೆಯಿತು. ವೃಕ್ಷ ಲಕ್ಷ ಪ್ರಮುಖರು ವಿಶೇಷ ಆಹ್ವಾನಿತರಾಗಿ ಭಾಗಿಯಾಗಿ ಸಲಹೆ ಸೂಚನೆ ನೀಡಿದರು. (ದೀಪಕ)

23) ವಿಶ್ವ-ಜೌಗು ದಿನ : ಫೆಬ್ರುವರಿ 2022 ರಲ್ಲಿ ಸಾಗರ ತಾ : ಗಂಟಿನಕೊಪ್ಪ ದೇವರ ಕಾನು ಪ್ರದೇಶಕ್ಕೆ ಕಾರ್ಯಕರ್ತರು ತಜ್ಞರು ಭೇಟಿ ನೀಡಿ ಪಂಚಾಯತ ಹಾಗೂ ಗ್ರಾಮ ಜನರ ಜೊತೆ ಸಮಾಲೋಚನೆ ನಡೆಸಿ 90 ಎಕರೆ ದೇವರ ಕಾಡು ರಕ್ಷಿಸಲು ನಿರ್ಣಯ, ಕ್ರಮಕೈಗೊಂಡರು. ಅರಣ್ಯ ಇಲಾಖೆ ಅಗತ್ಯ ಎಚ್ಚರಿಕೆ ವಹಿಸುವ ಸ್ಪಷ್ಟನೆ ನೀಡಿತು. (ನಾಗರಾಜ)

24) ಭದ್ರಾವತಿಯಲ್ಲಿ ನಡೆದ 4 ಜಿಲ್ಲೆಗಳ ಲಯನ್ಸ್ ಪರಿಸರ ಸಮ್ಮೇಳನದಲ್ಲಿ (ಫೆ. 2022) ವೃಕ್ಷಲಕ್ಷ ತಜ್ಞರು ಹಸಿರು ರಕ್ಷಣೆಯಲ್ಲಿ ಲಯನ್ಸ ಸದಸ್ಯರು ಪಾಲ್ಗೊಳ್ಳುವ ಯೋಜನೆಗೆ ಮಾರ್ಗದರ್ಶನ ನೀಡಿದರು. (ದರ್ಶನ)

Share This
300x250 AD
300x250 AD
300x250 AD
Back to top