• Slide
    Slide
    Slide
    previous arrow
    next arrow
  • ಮಳಗಿ ವಿ.ಎಸ್.ಎಸ್.ನಲ್ಲಿ ಕಳ್ಳತನ

    300x250 AD

    ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಬಾಗಿಲು ಮುರಿದು ಹಣ ಹಾಗೂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ನಡೆದಿದೆ.

    ಮಳಗಿ ಪಂಚಾಯಿತಿ ವ್ಯಾಪ್ತಿಯ ಸಹಸ್ರಾರು ರೈತರು ವ್ಯವಹಾರ ನಡೆಸುವ ಈ ಸಹಕಾರಿ ಸಂಘಕ್ಕೆ ಆರುಜನ ಮುಸುಕುದಾರಿ ಕಳ್ಳರ ತಂಡವೊಂದು ಬಂದು ಕಾವಲುಗಾರ ಮಾದೇವಪ್ಪ ತಳವಾರ (72) ಎಂಬಾತನನ್ನು ಹೊಡೆದ ನಂತರ ಕಟ್ಟಿಹಾಕಿ ಕಳ್ಳತನ ಮಾಡಿದ್ದಾರೆ. ಸೊಸೈಟಿಯ ಹಿಂಬದಿಯಿಂದ ಒಳ ನುಗ್ಗಿರುವ ಕಳ್ಳರು ಗ್ಯಾಸ್ ಕಟ್ಟರ್ ನಿಂದ ಕಬ್ಬಿಣದ ಬಾಗಿಲು ಕಟ್ ಮಾಡಿ ನಂತರ ಕಬ್ಬಿಣದ ಕಪಾಟುಗಳನ್ನು ಕಟ್ ಮಾಡಿ ಬಂಗಾರ ಹಾಗೂ ಹಣವನ್ನು ಕಳ್ಳತನ ಮಾಡಿಕೊಂಡು ನಸುಕಿನ ಜಾವ 4ಗಂಟೆ ಸಮಯಕ್ಕೆ ಸೊಸೈಟಿಯಿಂದ ಹೊಗಿದ್ದಾರೆಂದು ಕಾವಲುಗಾರ ತಿಳಿಸಿದ್ದಾನೆ. ಈ ಹಿಂದೆಯೂ ಈ ಸೊಸೈಟಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದರು, ರೈತರು ಹಾಗೂ ಸಾರ್ವಜನಿಕರು ಈ ಸೊಸೈಟಿಯಲ್ಲಿ ಅಪಾರ ಪ್ರಮಾಣದ ಬಂಗಾರದ ಆಭರಣಗಳನ್ನು ಅಡವಿಟ್ಟಿದ್ದರು ಎನ್ನಲಾಗಿದೆ. ಕಳ್ಳತನದ ಸುದ್ದಿ ತಿಳಿದು ಬಂಗಾರ ಅಡವಿಟ್ಟ ಜನರು ಸೊಸೈಟಿಯತ್ತ ದಾವಿಸುತ್ತಿದ್ದಾರೆ. ಕಾರವಾರದಿಂದ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಬರುತ್ತಿದೆ ಎಂದು ಸಿಪಿಐ ಸಿದ್ದಪ್ಪ ಸಿಮಾನಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top