ಯಲ್ಲಾಪುರ: ತಾಲೂಕಿನ ಮಂಚಿಕೇರಿ ವ್ಯಾಪ್ತಿಯ ಹೆಮ್ಮಾಡಿ ಗ್ರಾಮದ ಅರಣ್ಯ ಸರ್ವೆ ನಂಬರ್ 18 ಅ ರಲ್ಲಿ ಅರಣ್ಯ ಇಲಾಖೆಯಿಂದ ನೆಡುತೋಪುಗಳನ್ನು ನಿರ್ಮಿಸಿದ್ದು ಅಲ್ಲಿ ಸಾರ್ವಜನಿಕ ರಸ್ತೆಗೆ ಗೇಟ್ ನಿರ್ಮಾಣ ಮಾಡಲಾಗಿದೆ. ಆಲ್ಲಿಂದ ಮುಂದೆ ಸುಮಾರು 7,8 ಮನೆಗಳಿದ್ದು ಓಡಾಡಲು ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸಲು ಈ ಗೇಟ್ ನಿಂದ ತುಂಬಾ ತೊಂದರೆ ಆಗುತ್ತಿದ್ದು, ಈ ಬಗ್ಗೆ ಉಪ ವಲಯ ಅರಣ್ಯಾಧಿಕಾರಿಗಳು ಕುಂದರಗಿ ಶಾಖೆ ಅವರಿಗೆ ಮನವಿ ಮಾಡಿದರೂ ಸರಿಯಾದ ಸ್ಪಂದನೆ ಮಾಡುತ್ತಿಲ್ಲ. ನೆಡಲು ತಂದ ಸಸಿಗಳು ಅರಣ್ಯದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಪ್ಲಾಸ್ಟಿಕ್ ಕೊಟ್ಟೆಗಳೂ ಸಹ ಎಲ್ಲೆಂದರಲ್ಲಿ ಬಿದ್ದಿದೆ. ಪರಿಸರ ರಕ್ಷಕರೇ ಈ ರೀತಿ ಪರಿಸರ ಹಾಳು ಮಾಡಿದರೆ ರಕ್ಷಣೆ ಮಾಡುವವರು ಯಾರು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.