• Slide
    Slide
    Slide
    previous arrow
    next arrow
  • ಕ್ರೀಡಾಕೂಟ: ಬೆಳಸೆ ಪ್ರೌಢಶಾಲೆ ಅತ್ಯುತ್ತಮ ಸಾಧನೆ

    300x250 AD

    ಅಂಕೋಲಾ: ಶೆಟಗೇರಿ ವಲಯಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಬೆಳಸೆ ಆರ್‌ಪಿಎಸ್‌ಎಸ್ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.
    ಗುಂಪು ಆಟಗಳಲ್ಲಿ ಹುಡುಗರ ಮತ್ತು ಹುಡುಗಿಯರ ಖೋಖೋ ಪ್ರಥಮ, ಹುಡುಗಿಯರ ರಿಲೆ ದ್ವಿತೀಯ, ಹುಡುಗರ ರಿಲೆ ತೃತೀಯ, ವೈಯಕ್ತಿಕ ವಿಭಾಗದಲ್ಲಿ ಪ್ರಜ್ವಲ್ ಹರಿಕಾಂತ 1500 ಓಟ ಪ್ರಥಮ, ತ್ರಿವಿಧಜಿಗಿತ ಪ್ರಥಮ, ಉದ್ದಜಿಗಿತ ದ್ವಿತೀಯ, ತನುಜಾ ಗೌಡ 200 ಮೀ. ಓಟ ಪ್ರಥಮ, ತ್ರಿವಿಧ ಜಿಗಿತ ಪ್ರಥಮ, ಗಾಯತ್ರಿ ಗೌಡ 400 ಓಟ ಪ್ರಥಮ, 800ಮೀ ಓಟ ದ್ವಿತೀಯ, ಮಮತಾ ಗೌಡ ಗುಂಡು ಎಸೆತ ಪ್ರಥಮ, ಮಯೂರಿ ಗೌಡ ಎತ್ತರ ಜಿಗಿತ ಪ್ರಥಮ, ಚೆಸ್ ಆಟದಲ್ಲಿ ಜಗದೀಶ ಗೌಡ, ನಿತೇಶ ಗೌಡ & ಅಜಯ್ ಗೌಡ ಪ್ರಥಮ, ಅರ್ಚನಾ ಗೌಡ ತ್ರಿವಿಧಜಿಗಿತ ದ್ವಿತೀಯ, ಗುಂಡು ಎಸೆತ ದ್ವಿತೀಯ, ನರೇಂದ್ರ ಗೌಡ 3000 ಓಟ ದ್ವಿತೀಯ, ಮಹೇಂದ್ರ ಪಿ.ಗೌಡ ತ್ರಿವಿಧ ಜಿಗಿತ ದ್ವಿತೀಯ, ಸಾನಿಕಾ ಗೌಡ ಎತ್ತರ ಜಿಗಿತ ದ್ವಿತೀಯ, ಮಿನಿಷಾ ಗೌಡ ನಡಿಗೆ ತೃತೀಯ, ಹೇಮಂತ ಗೌಡ ಗುಂಡು ಎಸೆತ ಮತ್ತು ಚಕ್ರಎಸೆತ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.
    ವಿದ್ಯಾರ್ಥಿಗಳ ಈ ಸಾಧನೆಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಸುಧೀರರಾವ್ ಕೆ. ಇವರಿಗೂ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ ಪ್ರಭು, ಕಾರ್ಯದರ್ಶಿ ಶಿವಾನಂದ ಆಗೇರ, ಮುಖ್ಯಾಧ್ಯಾಪಕಿಯರಾದ ಕಲ್ಪನಾ ಗಾಂವಕರ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಊರ ನಾಗರಿಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top