Slide
Slide
Slide
previous arrow
next arrow

ಉಮಾಮಹೇಶ್ವರ ದೇವಸ್ಥಾನದ ನೂತನ ಸಭಾಭವನದ ಅಡಿಗಲ್ಲು ಸಮಾರಂಭ: ಶಾಸಕ ಶೆಟ್ಟಿ ಚಾಲನೆ

300x250 AD

ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾಮದ ಉಮಾಮಹೇಶ್ವರ ದೇವಸ್ಥಾನದ ನೂತನ ಸಭಾಭವನದ ಅಡಿಗಲ್ಲು ಸಮಾರಂಭಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.
ಪುರಾಣಪ್ರಸಿದ್ಧ ದೇವಾಲಯದ ಉಮಾಮಹೇಶ್ವರ ದೇವಾಲಯವು ಜೀರ್ಣೋದ್ಧಾರಗೊಂಡಿದ್ದು, ನೂತನ ಸಭಾಭವನ ನಿರ್ಮಾಣಕ್ಕೆ ಚಾಲನೆ ನೀಡಿದ ಬಳಿಕ ಶಾಸಕರು ಮಾತನಾಡಿ, ಈ ಭಾಗದ ಜಾತ್ರೆಯು ಪುಸಿದ್ಧವಾಗಿದೆ. ರಾಜ್ಯ ಸರ್ಕಾರ ದೇವಾಲಯದ ಅಭಿವೃದ್ದಿಗೆ ವಿಶೇಷ ಒತ್ತು ನೀಡುತ್ತಿದೆ. ಈ ಭಾಗದಲ್ಲಿ ನೂತನ ಸಭಾಭವನ ನಿರ್ಮಾಣವಾಗುತ್ತಿದ್ದು, ಸರ್ಕಾರದಿಂದಲೂ ಧನಸಹಾಯ ಒದಗಿಸುವ ಜೊತೆ ವೈಯಕ್ತಿಕವಾಗಿಯೂ ಸಹಕಾರ ನೀಡುವ ಭರವಸೆ ನೀಡಿದರು.
ದೇವಾಲಯದ ಆಡಳಿಯ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ಭಟ್, ಕಾರ್ಯದರ್ಶಿ ಪ್ರಕಾಶ ಹೆಗಡೆ, ಗ್ರಾ.ಪಂ.ಉಪಾಧ್ಯಕ್ಷ ಕಿರಣ ಹೆಗಡೆ, ಸದಸ್ಯ ಸುರೇಶ ಶೆಟ್ಟಿ, ಗ್ರಾಮಸ್ಥರಾದ ಉಮೇಶ ಭಟ್, ಗೊವಿಂದ ಹೆಗಡೆ, ಆರ್.ಜಿ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top