Slide
Slide
Slide
previous arrow
next arrow

ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ

300x250 AD

ಕಾರವಾರ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಸೆಪ್ಟಂಬರ್ 2022ರ ಮಾಹೆಯಿಂದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ ಧಾರವಾಡದಲ್ಲಿ ಎರಡು ದಿನಗಳ ಅವಧಿಯ ತಂಡವಾರು ಉಚಿತವಾಗಿ ವೈಜ್ಞಾನಿಕ ಹೈನುಗಾರಿಕೆ ಮತ್ತು ಕುರಿ/ಮೇಕೆ ಸಾಕಾಣಿಕೆಯ ತರಬೇತಿಯನ್ನು ನೀಡಲಾಗುತ್ತದೆ.
ಆಸಕ್ತಿಯುಳ್ಳ ಧಾರವಾಡ, ಗದಗ, ಹಾವೇರಿ, ಕಾರವಾರ ಜಿಲ್ಲೆಗಳ ರೈತ/ರೈತ ಮಹಿಳೆಯರು ತಮ್ಮ ಹೆಸರನ್ನು ಎಸ್.ಎಂ.ಎಸ್ ಸಂದೇಶದ ಮೂಲಕ ಕಛೇರಿಯ ದೂರವಾಣಿ ಸಂಖ್ಯೆ 0836-2443743, 9591024499 ಗೆ ಕರೆ ಮುಖಾಂತರ ಅಥವಾ ಖುದ್ದಾಗಿ ಭೇಟಿ ನೀಡಿ ತಮ್ಮ ಹೆಸರನ್ನು ಬೆಳಿಗ್ಗೆ 10.15ರಿಂದ ಸಂಜೆ 5.15ರವರೆಗೆ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಧಾರವಾಡ ಮುಖ್ಯ ಪಶು ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top