• Slide
  Slide
  Slide
  previous arrow
  next arrow
 • ಪ್ರಕಟಣೆ: ಬಾಲಕಿಯ ಪಾಲಕರ ಮಾಹಿತಿ ಸಿಕ್ಕಲ್ಲಿ ತಿಳಿಸಿ

  300x250 AD

  ಕಾರವಾರ: ದಾಂಡೇಲಿ, ಹಳಿಯಾಳ ಗಾವಠಾಣಾದ ಅಂದಾಜು 46 ವಯಸ್ಸಿನ ಲಾರಿ ಚಾಲಕನಾದ ಅಬ್ದುಲ್ ಗಣಿ ಮಹಮ್ಮದ್ ಮಕಾಂದಾರನ 7 ವರ್ಷದ ಮಗಳಾದ ಬಾಲಕಿ ಬಿಬಿಫಾತಿಮಾ ಅಬ್ದುಲ್ ಗಣಿ ಮಕಾಂದಾರ ಇಕೆಯು ಮಕ್ಕಳ ಕಲ್ಯಾಣ ಸಮಿತಿಯವರ ಆದೇಶದ ಮೇರೆಗೆ ಸರಕಾರಿ ಬಾಲಕಿಯರ ಬಾಲಮಂದಿರ ಕಾರವಾರದಲ್ಲಿದ್ದು, ಈಕೆಯ ತಾಯಿ ಮದಿನಾ ಅಬ್ದುಲ್ ಗಣಿ ಮಕಾಂದಾರ ಮೃತಪಟ್ಟಿದ್ದಾಳೆ. ಈವರೆಗೂ ಮಕ್ಕಳ ಪಾಲಕರಾಗಲಿ, ಸಂಬಂಧಿಕರಾಗಲಿ ಮಗುವನ್ನು ನೋಡಲು ಬಂದಿರುವುದಿಲ್ಲ. ಇತ್ತೀಚೆಗೆ ಬಾಲಕಿಯ ತಂದೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಾಲೆಗಳ್ಳಿ ಖಾಯಂ ವಿಳಾಸವಾಗಿದೆ ಎಂದು ತಿಳಿದು ಬಂದಿದ್ದು, ಆದರೆ ಸದ್ಯದ ಮಟ್ಟಿಗೆ ಆ ವಿಳಾಸದಲ್ಲಿಯೂ ವ್ಯಕ್ತಿ ಕಂಡುಬಂದಿರುವುದಿಲ್ಲ. ಹಾಗಾಗಿ ಈ ವ್ಯಕ್ತಿ ಕಂಡು ಬಂದಲ್ಲಿ 08382-226501 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಹಾಗೂ ಆ ವ್ಯಕ್ತಿಯು ಮಕ್ಕಳ ಕಲ್ಯಾಣ ಸಮಿತಿ ಕಾರವಾರರವರಲ್ಲಿ ಹಾಜರಾಗಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top