ಅಂಕೋಲಾ: ಕರ್ನಾಟಕ ಅಥ್ಲೆಟಿಕ್ ಅಸೋಶಿಯೇಶನ್ ಆಶ್ರಯದಲ್ಲಿ ಬೆಂಗಳೂರಿನ ಶ್ರೀಕಂಠೀರವ ಸ್ಟೇಡಿಯಂ ನಡೆದ ಕರ್ನಾಟಕ ರಾಜ್ಯ ಕಿರಿಯರ ಹಾಗೂ ಹಿರಿಯರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು 10 ಪದಕಗಳನ್ನು ಪಡೆದಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಸದಾನಂದ ನಾಯ್ಕ ಹಾಗೂ ಜಿಲ್ಲಾ ಕಾರ್ಯದರ್ಶಿ ಕೆ.ಆರ್.ನಾಯಕ ಬೇಲೇಕೇರಿ ತಿಳಿಸಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಜಾವೆಲಿನ್ ಥ್ರೋ ಮತ್ತು ತ್ರಿಬಲ್ ಜಂಪ್‌ನಲ್ಲಿ ಪ್ರಿನ್ಸಿಗೆ ಬಂಗಾರದ ಪದಕ, ನಿವೇದಿತಾ ಸಾವಂತ ಚಕ್ರ ಎಸೆತದಲ್ಲಿ ಬಂಗಾರದ ಪದಕ ಮತ್ತು ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕ, 23 ವಯಸ್ಸಿನೊಳಗಿನ ಯುವತಿಯರ ವಿಭಾಗದಲ್ಲಿ ಅನನ್ಯಾ ಪೂಜಾರಿ ಹ್ಯಾಮರ್ ಥ್ರೋನಲ್ಲಿ ಬಂಗಾರದ ಪದಕ, ವಿಜಯಲಕ್ಷ್ಮಿ ಗರಗ ಹತ್ತು ಸಾವಿರ ಮೀ.ನಲ್ಲಿ ಕಂಚಿನ ಪದಕ, 20 ವಯಸ್ಸಿನೊಳಗಿನ ಯುವತಿಯರಲ್ಲಿ ನಯನಾ ಜಿ.ಕೆ 200 ಮೀ. ಓಟದಲ್ಲಿ ಬಂಗಾರದ ಪದಕ, 20 ವಯಸ್ಸಿನೊಳಗಿನ ಯುವತಿಯರ ವಿಭಾಗದಲ್ಲಿ ಅಭಿನಂದನ ಎಸ್.ನಾಯಕ ಜೆವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಮತ್ತು ಚಕ್ರ ಎಸೆತದಲ್ಲಿ ಕಂಚಿನ ಪದಕ, 16 ವಯಸ್ಸಿನೊಳಗಿನ ಬಾಲಕರ ವಿಭಾಗದಲ್ಲಿ ಯಶತ್ ಕುರುಬರ್ ಹ್ಯಾಮರ್ ಥ್ರೋನಲ್ಲಿ ಬಂಗಾರದ ಪದಕ, ಹ್ಯಾಮರ್ ಥ್ರೋನಲ್ಲಿ 64 ಮೀ. ಎಸೆದು ನೂತನ ರಾಜ್ಯ ಕೂಟದ ಕಲೆಯನ್ನು ನಿರ್ಮಿಸಿ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.