ಕುಮಟಾ: ರೋಟರಿ, ರೋಟರಿ ಏನ್ಸ್ ಹಾಗೂ ರೊರ‍್ಯಾಕ್ಟ್ ಕ್ಲಬ್ಬಿನ ಪರಿವಾರದ ಬಹು ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಮುದ್ದು ಕೃಷ್ಣ ಛದ್ಮವೇಷ ಸ್ಪರ್ಧೆ ಯಶಸ್ವಿಯಾಗಿ ಸಂಪನ್ನಗೊಂಡಿತು. 75ಕ್ಕೂ ಅಧಿಕ ಪುಟಾಣಿ ಕೃಷ್ಣರು ಸ್ಪರ್ಧಾಳುಗಳಾಗಿ ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಕೃಷ್ಣನ ವಿವಿಧ ಅವತಾರಗಳಲ್ಲಿ ವೇದಿಕೆಯ ಮೇಲೆ ರಂಜಿಸುತ್ತಿದ್ದ ವೇಳೆ ಪಾಲಕರು ಸಾಕ್ಷಾತ ಕೃಷ್ಣನೇ ತಮ್ಮ ಮಗುವೆಂದು ತಿಳಿದು ಹರ್ಷಿಸುತ್ತಿರುವುದು ಪ್ರೇಕ್ಷರವರ್ಗದವರಲ್ಲಿ ಸಂಚಲನ ಮೂಡಿಸಿತು.
ಮೂರು ವರ್ಷದೊಳಗಿನ ವಿಭಾಗದಲ್ಲಿ ಲಶಿಕಾ ಬಾಳ್ಗಿ ಪ್ರಥಮ, ಚಿನ್ಮಯ ಎನ್.ನಾಯ್ಕ ದ್ವಿತೀಯ ಹಾಗೂ ಸುಕೀರ್ಥ ಭಟ್ ತೃತೀಯ ಸ್ಥಾನ ಪಡೆದರೆ, 3ರಿಂದ 6 ವರ್ಷದೊಳಗಿನವರ ವಿಭಾಗದಲ್ಲಿ ಶ್ರೀಶಾ ಶ್ರೀನಿವಾಸ ಪ್ರಥಮ, ಯಕ್ಷ ಪಟಗಾರ ದ್ವಿತೀಯ, ಸಾನ್ವಿ ಪಿ.ಶಿರೋಡ್ಕರ್ ತೃತೀಯ ಸ್ಥಾನ ಪಡೆದು ಮಿಂಚಿದರು. ತೀರ್ಪುಗಾರರಾಗಿ ಶಿಕ್ಷಕರಾದ ಮನೋಜ ಗುನಗಾ, ಲತಾ ಶೆಟ್ಟಿ, ಸಂಧ್ಯಾ ರಾಯ್ಕರ್ ಆಗಮಿಸಿದ್ದರು. ತಾಲೂಕಾ ಪಂಚಾಯತ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನಾಗರತ್ನ ನಾಯಕ ಬಹುಮಾನ ವಿತರಿಸಿದರು.
ರೋಟರಿ ಅಧ್ಯಕ್ಷ ಚೇತನ್ ಶೇಟ್, ರೋಟರಿ ಏನ್ಸ್ ಅಧ್ಯಕ್ಷೆ ಶೈಲಾ ಗುನಗಾ, ರೋರ‍್ಯಾಕ್ಟ್ ಅಧ್ಯಕ್ಷ ವಿಕ್ರಮ ಪುರೋಹಿತ್, ಕಾರ್ಯಕ್ರಮ ಸಂಯೋಜರಾಗಿ ಡಾ.ಚೈತ್ರಾ ನಾಯ್ಕ ಹಾಗೂ ರೇಖಾ ಶೆಟ್ಟಿ ಹಾಗೂ ರೋಟರಿ ಪರಿವಾರದ ಸದಸ್ಯರೆಲ್ಲ ಉಪಸ್ಥಿತರಿದ್ದು ಸಹಕರಿಸಿದರು. ರೋಟರಿ ಕೋಶಾಧ್ಯಕ್ಷ ಯೋಗೇಶ್ ಕೋಡ್ಕಣಿ ನಿರೂಪಿಸಿದರೆ, ಕಾರ್ಯದರ್ಶಿ ಪವನ್ ಡಿ.ಶೆಟ್ಟಿ ವಂದಿಸಿದರು.