Slide
Slide
Slide
previous arrow
next arrow

ಲಲಿತಕಲಾ ಅಕಾಡೆಮಿಯಿಂದ ಗೋಪಿ ಜಾಲಿಯವರ ಚಿತ್ರಕ್ಕೆ ಪ್ರಶಸ್ತಿ

300x250 AD

ಕಾರವಾರ: ದೆಹಲಿಯಲ್ಲಿ ನಡೆದ ಲಲಿತಕಲಾ ಅಕಾಡೆಮಿಯಲ್ಲಿ ಆಜಾದಿ ಕಾ ಅಮೃತಮಹೋತ್ಸವ ಹಾಗೂ ವರ್ಲ್ಡ್ ಫೋಟೋಗ್ರಾಫಿ ದಿನದ ಛಾಯಾಚಿತ್ರವನ್ನು ಪ್ರದರ್ಶನದಲ್ಲಿ ಉತ್ತರಕನ್ನಡದ ಹೆಮ್ಮೆಯ ಫೋಟೋಗ್ರಾಫರ್  ಗೋಪಿ ಜಾಲಿಯವರ ಚಿತ್ರ ಪ್ರಶಸ್ತಿ ಪಡೆದಿದೆ.
ಬರೋಬ್ಬರಿ 1603 ಚಿತ್ರಗಳು ಬಂದಿದ್ದು ಅದರೊಳಗೆ 135 ಆಯ್ಕೆಯಾಗಿ ಪ್ರದರ್ಶನಗೊಂಡಿದ್ದವು, ಅದರಲ್ಲಿ ಅತ್ಯುತ್ತಮವಾದ 5 ಚಿತ್ರಗಳನ್ನು ಆಯ್ಕೆಮಾಡಿ ಪ್ರಶಸ್ತಿ ನೀಡಲಾಯಿತು.

ಈ 5 ಚಿತ್ರಗಳಲ್ಲಿ ಗೋಪಿ ಜಾಲಿಯವರು ತೆಗೆದ ಮಿರ್ಜಾನ್ ಕೋಟೆಯಲ್ಲಿ ನಡೆದ ಧ್ವಜಾರೋಹಣ ಚಿತ್ರಕ್ಕೆ ಬಹುಮಾನ ದೊರೆತಿದ್ದು ಹೆಮ್ಮೆಯ ವಿಷಯ. ಇವರ ಸಾಧನೆಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.

300x250 AD
Share This
300x250 AD
300x250 AD
300x250 AD
Back to top